ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವನ್ನು ಯಶಸ್ವಿಯಾಗಿ ಮುಗಿಸಿದ ವಿದ್ಯಾರ್ಥಿಗಳು

ಗುರಮಿಠಕಲ:ನ.5: ಕೃಷಿ ಎಂದರೆ ಕೇವಲ ಕೆಲಸವಲ್ಲ,ಕೃಷಿಯೆಂದರೆ ಜೀವಾಳ. ಕೃಷಿ ಎಂಬುದು ಕಲೆ ಎಲ್ಲರಿಗೂ ತಿಳಿಯುವುದಿಲ್ಲ. ಕೃಷಿಯಲ್ಲಿ ತೊಡಗಿ ದೇಶಕ್ಕೆ ಅನ್ನ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂಬಂತೆ ಇಂದಿನ ಯುವ ಪೀಳಿಗೆಗೆ ತಿಳಿಸಿ, ಹೊಸ ತಂತ್ರಜ್ಞಾನಗಳನ್ನು ಬಳಸಿ ವ್ಯವಸಾಯವನ್ನು ಅಭಿವೃದ್ಧಿಪಡಿಸ ಬೇಕಿದೆ.ಈ ನಿಟ್ಟಿನಲ್ಲಿ ಕೃಷಿ ಮಹಾವಿದ್ಯಾಲಯ ರಾಯಚೂರಿನ ಅಂತಿಮ ವರ್ಷದ ಬಿ.ಎಸ್ಸಿ ಕೃಷಿ ವಿದ್ಯಾರ್ಥಿಗಳು 70 ದಿನಗಳ ಕಾಲ ಎಲೇರಿ ಗ್ರಾಮದಲ್ಲಿದ್ದು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವನ್ನು ಹಮ್ಮಿಕೊಂಡಿದ್ದು, ಈಗಾಗಲೇ ದಿನಗಳನ್ನು ಯಶಸ್ವಿಯಾಗಿ ಮುಗಿಸಿ ನ.3 ಗುರುವಾರದಂದು ಕೃಷಿ ವಸ್ತುಪ್ರದರ್ಶನ ಹಾಗೂ ಸಮಾರೋಪ ಸಮಾರಂಭದೊಂದಿಗೆ ಅಂತ್ಯಗೊಳಿಸಿದ್ದಾರೆ.
ಸುಮಾರು 70ದಿನಗಳಿಂದ ಪ್ರಾರಂಭವಾದ ಈ ಶಿಬಿರದಲ್ಲಿ ಯೋಜನೆಯಂತೆ ದಿನನಿತ್ಯ ಹಾಗೂ ವಾರಾಂತ್ಯ ಚಟುವಟಿಕೆಗಳನ್ನು ನಿರ್ವಹಿಸಿ ರೈತರಿಗೆ ಉತ್ತಮ ಮಾಹಿತಿ ಒದಗಿಸುವಲ್ಲಿ ಸಫಲರಾಗಿದ್ದಾರೆ. ರೈತರಿಂದ ಪ್ರಾಯೋಗಿಕವಾಗಿ ಕೃಷಿ ಚಟುವಟಿಕೆಗಳನ್ನು ಸ್ವತಃ ತಾವೇ ಭಾಗಿಯಾಗಿ ಕಲಿತಿದ್ದಾರೆ ಅಲ್ಲದೆ, ರೈತರಿಗೆ ತಿಳಿಯದ ನೂತನ ತಂತ್ರಜ್ಞಾನಗಳನ್ನು ತಿಳಿಕೊಟ್ಟಿದ್ದಾರೆ.
ತÀಮ್ಮ ಮೊದಲ ವಾರದಲ್ಲಿಯೇ ಊರಿನ ವಿಶ್ಲೇಷಣೆ ಮಾಡಿ,ಸಾಮಾನ್ಯ ಮಾಹಿತಿ ತಿಳಿದುಕೊಂಡು ಗ್ರಾಮದ ನಕ್ಷೆ ಯನ್ನು ರಚಿಸಿದರು.ಜಾಥಾ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಿ ಊರಿನ ಎಲ್ಲಾ ಸಂಸ್ಥೆಗಳಾದ ಶಾಲೆ, ಪಂಚಾಯಿತಿ, ಬ್ಯಾಂಕು,ಮಹಿಳಾ ಸಂಘಗಳಿಗೆ ಭೇಟಿ ನೀಡಿದರು. ರೈತರಿಗೆ ಉಪಯುಕ್ತವಾಗುವಂತೆ ಮಣ್ಣಿನ ಮಾದರಿ ತೆಗೆಯುವ ವಿಧಾನವನ್ನು ತಿಳಿಸಿ,ಮಣ್ಣು ಪರೀಕ್ಷೆಯ ಮಹತ್ವವನ್ನು ತಿಳಿಸಿಕೊಟ್ಟರು. ತೊಗರಿಯಲ್ಲಿ ಕುಡಿ ಚಿವುಟುವ ವಿಧಾನವನ್ನು ತಿಳಿಸಿದ್ದು ಈಗಾಗಲೇ ರೈತರು ಅಳವಡಿಸಿಕೊಂಡಿರುವುದು ವಿಶೇಷ. ಯೆಲಹೇರಿ ಗ್ರಾಮವು ಜೋಳಕ್ಕೆ ಪ್ರಸಿದ್ಧವಾಗಿದ್ದರಿಂದ ಜೋಳದಲ್ಲಿ ಸುಳಿ ನೊಣವನ್ನು ತಡೆಗಟ್ಟಲು ಬೀಜೋಪಚಾರವನ್ನು ಮಾಡಿ ತೋರಿಸಿದರು.ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ವನ್ನು ನಿಯಂತ್ರಿಸಲು SPಐಂಖಿ ತಂತ್ರಜ್ಞಾನದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಹಲವಾರು ರೈತರ ಹೊಲದಲ್ಲಿ ಮಾಡಿದ್ದಾರೆ .
ದಿನನಿತ್ಯ ಚಟುವಟಿಕೆಗಳ ಜೊತೆ-ಜೊತೆಗೆ ಪ್ರತಿ ವಾರಾಂತ್ಯದಲ್ಲಿ “ಬೆಳೆ ವಿಚಾರ ಸಂಕೀರ್ಣ” ಕಾರ್ಯಕ್ರಮಗಳನ್ನು ಆಯೋಜಿಸಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಬೆಳೆಯ ಸಂಪೂರ್ಣ ಮಾಹಿತಿ ನೀಡಿದ್ದಲ್ಲದೆ,ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯಗಳನ್ನು ಮಾಡಿದ್ದಾರೆ.ಹಳ್ಳಿಯಲ್ಲಿ ಪೌಷ್ಟಿಕತೆ ಹಾಗೂ ಸಮತೋಲನ ಆಹಾರದ ಮಹತ್ವ ತಿಳಿಸಲು ವಿದ್ಯಾರ್ಥಿಗಳು “ನಮ್ಮ ತೋಟ- ನಮ್ಮ ಊಟ “ಎಂಬ ಉದ್ದೇಶದೊಂದಿಗೆ ಒಂದು ಪೌಷ್ಟಿಕ ಕೈತೋಟವನ್ನು ಸ್ವತಹ ನಿರ್ಮಿಸಿ ಊರಿನ ಜನರಿಗೆ ಮತ್ತು ಶಾಲಾ ಮಕ್ಕಳಿಗೆ ಉತ್ತಮ ಆರೋಗ್ಯದ ಅರಿವು ಮೂಡಿಸಿದರು.
ಅಷ್ಟೇ ಅಲ್ಲದೆ ಗುಂಪು ಚರ್ಚೆಗಳನ್ನು ನಡೆಸಿ ಪ್ರಮುಖ ವಿಷಯಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ.ಅಷ್ಟೇ ಅಲ್ಲದೆ ಸಸ್ಯ ಚಿಕಿತ್ಸಾಲಯವನ್ನು ನಿರ್ಮಿಸಿ ರೈತರಿಗೆ ಬೆಳೆಯ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ, ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸಿದ್ದಾರೆ. ಎರೆಹುಳು ಗೊಬ್ಬರ ತಯಾರಿಕೆ, ಅಜೋಲ್ಲಾ ಬೇಸಾಯಾದ ಪ್ರಾತ್ಯಕ್ಷಿಕೆಗಳನ್ನು ತೋರಿಸಿದ್ದಾರೆ.
ತಮ್ಮ ಕೊನೆಯ ದಿನದಂದು ಕೃಷಿ ವಸ್ತುಪ್ರದರ್ಶನ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಹೆಚ್ಚು ಮಳಿಗೆಗಳನ್ನು ಆಯೋಜಿಸಿ ವಿವಿಧ ರೀತಿಯ ಮಾದರಿಗಳನ್ನು ಪ್ರದರ್ಶಿಸಿದರು.ಮಳಿಗೆಗಳಿಗೆ ಊರಿನ ಜನರಿಂದ,ರೈತರಿಂದ ಹಾಗೂ ಶಾಲಾ ಮಕ್ಕಳಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು ಊರಿನ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಡಾ. ಸತ್ಯನಾರಾಯಣ ರಾವ್ ರವರು ಮಾತನಾಡಿ ಊರಿನ ಜನರು ಮಾಡಿದ ಸಹಾಯ ಸಹಕಾರಗಳಿಗೆ ಧನ್ಯವಾದಗಳನ್ನು ತಿಳಿಸಿ. ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕೆಂದು ರೈತರಲ್ಲಿ ಹೊಸ ಹೊಸ ತಳಿಗಳನ್ನು ಅನುಸರಿಸಿ ಯಶಸ್ವಿಯಾಗಬೇಕೆಂದು ಹೇಳಿದರು.ವಿದ್ಯಾರ್ಥಿಗಳ ಕುರಿತು ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ಸೂಚಿಸಿದರು.ಜೀವನದಲ್ಲಿ ಗುರಿ ಸಾಧಿಸಲು ಶಿಕ್ಷಣದ ಜೊತೆಗೆ ಆತ್ಮ ವಿಶ್ವಾಸ ಮುಖ್ಯ ಎಂದು ತಿಳಿಸಿದರು.
ಅದೇ ರೀತಿಯಾಗಿ ವಿದ್ಯಾರ್ಥಿಗಳು ಮಾತನಾಡಿ ಶಿಬಿರವು ತಮಗೆ ರೈತರೊಡನೆ ಬೆರೆಯುವ ಅದ್ಭುತ ಅವಕಾಶವನ್ನು ನೀಡಿದ್ದು,ಊರಿನ ಜನರ ಪ್ರೀತಿ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು. ಹಾಗೇಯೇ ಊರಿನ ರೈತರಾದ ಶ್ರೀ ಮಲ್ಲನಗೌಡರು ಹಾಗೂ ಶ್ರೀ ಸೋಮನಾಥ ರೆಡ್ಡಿ ಅವರು ಮಾತನಾಡಿ ವಿದ್ಯಾರ್ಥಿಗಳ ಕಾರ್ಯಗಳನ್ನು ಕೊಂಡಾಡಿ ಊರಿನ ಜನರೊಂದಿಗೆ ಮನೆ ಮಕ್ಕಳಂತೆ ಬೆರೆತಿದ್ದಾರೆ. ರೈತರಿಗೆ ಉಪಯುಕ್ತವಾಗುವ ಹಲವಾರು ತಂತ್ರಗಳನ್ನು ಪರಿಚಯಿಸಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.ಹಾಗೆಯೇ ರೈತ ಸಂಪರ್ಕ ಕೇಂದ್ರ ಬಳಿಚಕ್ರ ದ ಕೃಷಿ ಅಧಿಕಾರಿಗಳಾದ ಶ್ರೀ ಜಯಪ್ಪ ರವರು ಮಾತನಾಡಿ ವಿದ್ಯಾರ್ಥಿಗಳು ಮಾಡಿದ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾಡಿದ ಕೆಲಸಗಳ ಬಗ್ಗೆ ತಿಳಿಸಿದರು.
ಅದೇ ರೀತಿಯಾಗಿ ಇತರ ಗಣ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ವಿದ್ಯಾರ್ಥಿಗಳು ಊರಿನ ಜನರು ನೀಡಿದ ಪ್ರೀತಿ, ವಾತ್ಸಲ್ಯ ಹಾಗೂ ಸಹಕಾರಕ್ಕೆ ಪ್ರತೀಕವಾಗಿ ಊರಿನವರನ್ನು ಹಾಗೂ ತಮಗೆ ಸಹಕಾರ ಮಾಡಿದ ಪ್ರತಿಯೊಬ್ಬರನ್ನು ಸನ್ಮಾನಿಸಿದರು ಮೂಲಕ ಗೌರವ ಸೂಚಿಸಿದರು.”ಕೃಷಿ ಸೊಬಗು “ಕಾರ್ಯಕ್ರಮವು ಅತಿ ಸೊಬಗಿನಿಂದ ನಡೆದು ಯಶಸ್ವಿಯಾಗಿದೆ.ಎಂದು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಂಯೋಜಕರು ಹಾಗೂ ಇತರ ಪ್ರಾಧ್ಯಪಕರು ಹರ್ಷ ವ್ಯಕ್ತಪಡಿಸಿದರು.”ಕೃಷಿ ಸೊಬಗು” ಕಾರ್ಯಕ್ರಮವು ವಿಜ್ರಂಭಣೆಯಿಂದ ಸಾಗಿದ್ದು,ವಿದ್ಯಾರ್ಥಿಗಳು ಕೃಷಿಯ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆಯುವಲ್ಲಿ ಉಪಯುಕ್ತವಾಗಿದೆ. ಶಿಬಿರವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಬೆರೆಯುವ ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.