ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ

 

ಸಂಜೆವಾಣಿ ವಾರ್ತೆ

ಜಗಳೂರು.ಅ.೨೭ :- ಮನರೇಗಾ ಕಾಮಗಾರಿಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿ ಕರ ಸಂಘಟನೆ(ಗ್ರಾಕೋಸ್) ವತಿಯಿಂದ ಶಾಸಕ ಬಿ. ದೇವೇಂದ್ರಪ್ಪ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಶಾಸಕ ಬಿ.ದೇವೇಂದ್ರಪ್ಪ ಅವರ ನಿವಾಸದಕಚೇರಿ ಬಳಿ ಆಗಮಿಸಿ ಗ್ರಾಕೋಸ್ ಕಾರ್ಯಕರ್ತರು ಪ್ರತಿಭಟನೆಯ ರಾಜ್ಯ ಕರೆಗೆ ಬೆಂಬಲಿಸಿ ತಾಲೂಕು ಪಂಚಾಯಿತಿ ಇ.ಓ ಗೆ ಹಾಗೂ ಶಾಸಕರಿಗೆ ಲಿಖಿತ ಮನವಿ ಸಲ್ಲಿಸಲಾಯಿತು.ಗ್ರಾಕೋಸ್ ಸಂಘಟನೆ ತಾಲೂಕು ಸಂಚಾಲಕಿ ಪಲ್ಲಾಗಟ್ಟೆ ಸುಧಾ ಮಾತನಾಡಿ,ಪ್ರಸಕ್ತ ಸಾಲಿನ ಮುಂಗಾರು ವರುಣನ ಅವಕೃಪೆ ಯಿಂದ ತಾಲೂಕಿನಲ್ಲಿ ಬರ ತಾಂಡವಾಡುತ್ತಿದೆ.ಸರಕಾರದ ಮಹ ತ್ತರವಾದ ಮನರೇಗಾ ಕಾಯ್ದೆಯಡಿ ಕೂಲಿಕಾರ್ಮಿಕರು ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.ಕಳೆದ ಮೂರು ತಿಂಗಳಿನಿಂದ ತಾಲೂಕಿನ22 ಗ್ರಾಮಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿಯ ಕೂಲಿ ಕಾರ್ಮಿಕರ ಖಾತೆಗೆ ಹಣ ಜಮಾವಾಗದೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶೀಘ್ರದಲ್ಲಿ ರಾಜ್ಯದಲ್ಲಿ ಮನರೇಗಾ ಕಾಮಗಾರಿ ಗಳು ತ್ವರಿತಗತಿಯಲ್ಲಿ ಸಾಗಲಿ.ಕೂಲಿಕಾರ್ಮಿಕರಿಗೆ ಸಕಾಲದಲ್ಲಿ ಹಣಪಾವತಿಯಾಗಲಿ ಗುಳೆ ತಪ್ಪಿಸಬೇಕು ಎಂದು ಆಗ್ರಹಿಸಿದರು.ಬರಪರಿಸ್ಥಿತಿ ನಿರ್ವಹಣೆಗೆ ನರೇಗಾ ಕಾಮಗಾರಿಗಳನ್ನು ಹೆಚ್ಚುವರಿ 50 ಮಾನವದಿನಗಳಿಗೆ ಹೆಚ್ವಿಸಬೇಕು.ಕೂಲಿಹಣ ಪಾವತಿ ವಿಳಂಬ ಸಲ್ಲದು.ಎನ್ ಎಂಎಂಎಸ್ ಹಾಜರಾತಿಯನ್ನು ಬೆಳಿಗ್ಗೆ ಒಂದು ಬಾರಿ ತೆಗೆದು ಕೊಳ್ಳಬೇಕು. ಕೂಲಿಕಾರ್ಮಿಕರಿಗೆ ಸಾಮಾಗ್ರಿ ವೆಚ್ಚ ₹20 ಕೊಡಿ ಇಲ್ಲವಾದರೆ ಸಾಮಾಗ್ರಿಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ರಾಜ್ಯ ದಲ್ಲಿಯೇ ನರೇಗಾ ಕೂಲಿಕಾರ್ಮಿಕರ ಹಣಪಾವತಿಯಾಗದೆ ವಿಳಂಬವಾಗಿದೆ.ಸರಕಾರದ ಗಮನಕ್ಕೆ ತರಲಾಗುವುದು. ತಾಲೂಕಿ ನಲ್ಲಿ ಬರ ಆವರಿಸಿದ್ದು ಬೆಳೆನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ನರೇಗಾ ಕಾಮಗಾರಿ ಸಮರ್ಪಕ ಜಾರಿಯಾಗಲಿ. ಕೂಲಿಕಾರ್ಮಿಕರಿಗೆ ತೊಂದರೆ ಯಾಗದಂತೆ ಕ್ರಮವಹಿಸಲು ತಾಲೂಕು ಪಂಚಾಯಿತಿ ಇಓ ಕರಿಬಸಪ್ಪ ಅವರಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ತಾ.ಪಂ.ಇಓ ಕರಿಬಸಪ್ಪ,ಎಡಿ ಚಂದ್ರಶೇಖರ್, ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಮಹೇ ಶ್ವರಪ್ಪ, ಗ್ರಾಕೋಸ್ ಸಂಘಟನೆ ಪದಾಧಿಕಾರಿಗಳಾದ ಮಹಾಲಕ್ಷ್ಮಿ, ಯಲ್ಲಮ್ಮ, ಹೊನ್ನಮ್ಮ, ಅನುಸೂಯಮ್ಮ,ಪರಮೇಶ್ವರಪ್ಪ,ರೇಣುಕಮ್ಮ,ಹನುಮಂತಪ್ಪ ,ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇ ಶಕ ಮಹೇಶ್ವರಪ್ಪ,ಮುಖಂಡ ಪಲ್ಲಾಗಟ್ಟೆ ಶೇಖರಪ್ಪ, ಗ್ರಾ. ಪಂ ಸದಸ್ಯ ಅನೂಪ್ ರೆಡ್ಡಿ,ಸೇರಿದಂತೆ ಇದ್ದರು