
ಸಿರುಗುಪ್ಪ ಮೇ 05 : ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ನರೇಗಾ ಕಾಮಕಾರಿಗಳನ್ನು ಪರಿಶೀಲಿಸಿದರು.
ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಭೇಟಿನೀಡಿ ಕಾರ್ಮಿಕರಿಗೆ ಮೂಲ ಸೌಕರ್ಯಗಳು ಮತ್ತು ಕೆಲಸವನ್ನು ವೀಕ್ಷಿಸಿದರು, ಉಪ್ಪರ ಹೊಸಳ್ಳಿ ಗ್ರಾಮ ಪಂಚಾಯಿತಿಯ ನಾಲಾ ಪುನಶ್ಚೇತನ ಕಾಮಗಾರಿಯನ್ನು ಪರಿಶೀಲನೆ ಮಾಡಿ, ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಹೂಳು ತೆಗೆದ ಮಣ್ಣನ್ನು ಬಂಡ್ ಮಾಡಿರುವ ಕುರಿತು ಹಾಗೂ ಎನ್.ಎಮ್.ಆರ್ ಹಾಜರಾತಿಯನ್ನು ಪರಿಶೀಲನೆ, ಬಲಕುಂದಿ ಗ್ರಾಮ ಪಂಚಾಯಿತಿಯ ಪುಷ್ಕರಣಿ ಕಾಮಗಾರಿಯನ್ನು ಪರಿಶೀಲಿಸಿ ತ್ವರಿತಗತಿಯಲ್ಲಿ ಕಾಮಗಾರಿ ಮುಕ್ತಾಯಗೊಳಿಸಲು ಸೂಚಿಸಿದರು, ಬಲಕುಂದಿ ಗ್ರಾಮ ಪಂಚಾಯತಿಯ ಅಮೃತ ಸರೋವರ ಕಾಮಗಾರಿಯನ್ನು ಪರಿಶೀಲನೆ ಮಾಡಿದರು, ರಾರಾವಿ ಗ್ರಾಮ ಪಂಚಾಯಿತಿಯ ಅರಣ್ಯ ಇಲಾಖೆಯ ಸ್ಥಳವನ್ನು ಪರಿಶೀಲನೆ ಮಾಡಿದರು, ರಾರಾವಿ ಗ್ರಾಮ ಪಂಚಾಯಿತಿಯ ನಾಲಾ ಪುನಶ್ಚೇತನ ಕಾಮಗಾರಿಯನ್ನು ಪರಿಶೀಲಿಸಿ, ಕುಡಿಯುವ ನೀರು, ನೆರಳು , ಹಾಗೂ ಎನ್.ಎಮ್.ಆರ್ ಹಾಜರಾತಿ ಪರಿಶೀಲನೆ ಮಾಡಿದರು, ರಾವಿಹಾಳ್ ಗ್ರಾಮ ಪಂಚಾಯಿತಿಯ ಬದು ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ ಮಾಡಿ, ಹೆಚ್ಚು ಹೆಚ್ಚಾಗಿ ಬದು ನಿರ್ಮಾಣ ಕಾಮಗಾರಿಗಳನ್ನು ಮಾಡಲು ತಿಳಿಸಿದರು, ರಾವಿಹಾಳ್ ಗ್ರಾಮ ಪಂಚಾಯಿತಿಯ ಶಾಲಾ ಅಭಿವೃದ್ಧಿ ಕಾಮಗಾರಿಗಳಾದ ಬಾಸ್ಕೆಟ್ ಬಾಲ್ ಕ್ರೀಡಾಂಗಣ ನಿರ್ಮಾಣ, ಅಡುಗೆ ಕೋಣೆ, ಶೌಚಾಲಯ ಕಾಮಗಾರಿ, ಹಾಗೂ ಆಟದ ಮೈದಾನ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು, ಬಿ.ಎಂ.ಸೂಗೂರು ಗ್ರಾಮ ಪಂಚಾಯಿತಿಯ ಜೆಜೆಎಂ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು, ಬಿ.ಎಂ.ಸೂಗೂರು ಗ್ರಾಮ ಪಂಚಾಯಿತಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು, ಬಿ.ಎಂ.ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟ್ಟಗಿಹಾಳ್ ಗ್ರಾಮದ ಚೆಕ್ ಪೋಸ್ಟ್ ನ್ನು ಪರಿಶೀಲನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಜಿಲ್ಲಾ ಪಂಚಾಯಿತಿಯ ಎ.ಡಿ.ಪಿ.ಸಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಟಿ.ಸಿ, ಐ.ಇ.ಎಸ್, ಟಿ.ಎ.ಇ, ಪಿ.ಡಿ.ಒ, ಡಿ.ಇ.ಒ, ಬಿ.ಸಿ, ಬಿ.ಎಫ್.ಟಿ, ಜಿ.ಕೆ.ಎಮ್ ಅಧಿಕಾರಿಗಳು ಇದ್ದರು.
One attachment • Scanned by Gmail