ಗ್ರಾಮೀಣ ಕೂಟ ಫೈನಾನ್ಸ್ ನಿಂದ ಪೊಲೀಸ್ ಸಿಬ್ಬಂದಿಗಳಿಗೆ ಮಾಸ್ಕ್ ವಿತರಣೆ

ಜಗಳೂರು.ಜೂ.೬; ಪಟ್ಟಣದ ಜಗಳೂರು ಪೊಲೀಸ್ ಠಾಣೆಯ ಅವರಣದಲ್ಲಿ ಪಿಎಸ್ಐ ಸಂತೋಷ್ ಬಾಗೋಜಿ ಮತ್ತು ಸಿಬ್ಬಂದಿಗಳಿಗೆ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಕೂಟದ ವತಿಯಿಂದ ಮಾಸ್ಕ್ಸಾನಿಟೈಸರ್ ಸುರಕ್ಷತಾ ಕಿಟ್ ವಿತರಿಸಿದರು.ನಂತರ ಪಿ.ಎಸ್ಐ ಸಂತೋಷ್ ಭಾಗೋಜಿ ಮಾತನಾಡಿ ಜಗಳೂರು ತಾಲೂಕಿನಲ್ಲಿ ಸಂಘ ಸಂಸ್ಥೆಗಳು ಕೊರೊನ ವಾರಿಯರ್ಸ್ ಗಳಿಗೆ  ನೆರವಾಗುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಸರ್ಕಾರದ ಆದೇಶದಂತೆ ಲಾಕ್ ಡೌನ್ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ನಮ್ಮ ಪೊಲೀಸ್ ಸಿಬ್ಬಂದಿಗಳಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಶಶಿಕುಮಾರ್ ಗ್ರಾಮೀಣ ಕೂಟ ಫೈನಾನ್ಸ್ ನ ಸಿಬ್ಬಂದಿಗಳಾದ ಮೋಹಿದ್ದಿನ್, ಸುರೇಶ್.ಮಾರುತಿ ಸೇರಿದಂತೆ ಇದ್ದರು.