ಗ್ರಾಮೀಣ ಕಲೆ, ಸಂಸ್ಕøತಿ ಉಳಿವಿಗೆ ಕೈಜೋಡಿಸಿ: ಮುನೇನಕೊಪ್ಪ


ಧಾರವಾಡ,ಜ.10: ಧಾರವಾಡ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ನವಲಗುಂದ ತಾಲೂಕಿನ ಮಣಕವಾಡ ಗ್ರಾಮದಲ್ಲಿ ಮಹಿಳಾ ಸಂಸ್ಕøತಿ ಉತ್ಸವವನ್ನು ನವಲಗುಂದ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಮಳೆಯಲ್ಲಿಯೇ ಕಲಾವಿದರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕರು ಗ್ರಾಮೀಣ ಕಲೆ ಮತ್ತು ಸಂಸ್ಕøತಿ ಅಚ್ಚಳಿಯದೇ ಉಳಿಯಬೇಕು. ತಾಯಿಬೇರು ಮಹಿಳೆಯ ಸಂಸ್ಕøತಿ ಮುಂದಿನ ಪೀಳಿಗೆಗೆ ಹಸ್ತಾಂತರವಾಗಬೇಕು. ಅವುಗಳನ್ನೆಲ್ಲ ಉಳಿಸಿ ಬೆಳೆಸಲು ಇಲಾಖೆಯ ಜೊತೆಗೆ ನಾವೆಲ್ಲ ಕೈಗೂಡಿಸಬೇಕು. ಇಂತಹ ಹಲವಾರು ಯೋಜನೆಗಳು ಗ್ರಾಮೀಣ ಕಲಾವಿದರುಗಳಿಗೆ ತಲುಪುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ ಮ.ನಿ.ಪ್ರ.ಅಭಿನವ ಮೃತ್ಯುಂಜಯ ಮಹಾಸ್ವಾಮಿಜಿಗಳು ಹಾಗೂ ಅಕ್ಕಿ ಆಲೂರು ಮಠಾಧೀಶರಾದ ಶಾಂತವೀರ ಮಹಾಸ್ವಾಮಿಗಳು, ಶಿವಕುಮಾರ ಸ್ವಾಮಿಗಳು ಸಾನಿಧ್ಯ ವಹಿಸಿ, ಭಾರತ ದೇಶದ ಸಂಸ್ಕøತಿ ಇತಿಹಾಸ, ಪರಂಪರೆ, ಸಾಹಿತ್ಯ, ಕಲೆಯು ಇಡೀ ಜಗತ್ತಿನಲ್ಲಿಯೇ ಶ್ರೀಮಂತವಾಗಿದೆ. ಗ್ರಾಮೀಣ ಕಲೆ ಸಂಸ್ಕøತಿ ಶ್ರೀಮಂತವಾಗಬೇಕಾದರೆ, ಇಂತಹ ಚಟುವಟಿಕೆಗಳು ಸದಾ ನಡೆಯುತ್ತಿರಬೇಕು. ಮಣಕವಾಡ ಗ್ರಾಮದಲ್ಲಿ ಬಹಳಷ್ಟು ಕಲಾವಿದರು ಜನ್ಮತಾಳಿದ್ದಾರೆ. ಕಲೆ ಸಂಸ್ಕøತಿ ಹಸ್ತಾಂತರವಾಗಬೇಕು ಎಂದು ಆಶೀರ್ವಚನ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗ್ರಾಮದ ನೂತನ ಗ್ರಾಮ ಪಂಚಾಯತ್ ಸದಸ್ಯರಾದ ಮಹಾದೇವಪ್ಪ ಡೊಳ್ಳಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಲ್ಲದೇ ಶಾಂತವೀರ ಪಾಟೀಲ, ಚನ್ನಬಸಪ್ಪ ಪಟ್ಟೇದ, ಪ್ರಭಾವತಿ ಹಳೇಮನಿ, ಅನಿತಾ ಗರಗದ, ದೇವಕ್ಕ ತಳವಾರ, ವಿ.ಜಿ.ಪಾಟೀಲ, ಮಹಾಂತೇಶ, ಈಶ್ವರ ಅರಳಿ ಮುಂತಾದ ಗ್ರಾಮದ ಪ್ರಮುಖರು, ಮಹಿಳೆಯರು, ಮಕ್ಕಳು, ಯುವಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಿಳಾ ಮೆಹಂದಿ, ರಂಗೋಲಿ, ಕರಕುಶಲ ವಸ್ತುಗಳ ಪ್ರದರ್ಶನ, ಕೇಶಾಲಂಕಾರ, ಗುರ್ಜಿ ಮಹಿಳಾ ಗ್ರಾಮೀಣ ಕ್ರೀಡೆಗಳಾದ ಬಗಟ ಬಗರಿ, ಹಗ್ಗ ಆಡುವುದು, ಕುಂಟೆಪಿಲ್ಲೆ, ಕಬ್ಬಡ್ಡಿ, ಮುಂತಾದವುಗಳು ನೋಡುಗರ ಕಣ್ಮಣಸೆಳೆದವು. ಗೀಗೀ ಪದಗಳು ಗ್ರಾಮದ ದೊಡ್ಡಾಟ/ಸಣ್ಣಾಟವಾಡಿದರು. ಮಹಿಳಾ ಡೊಳ್ಳು, ಜಗ್ಗಲಗಿ, ಗೊಂಬೆಮೇಳ, ಜಾನಪದ, ಸೋಬಾನ ಸಂಪ್ರದಾಯದ ಪದಗಳು, ಕುಂಬಮೇಳ, ಆರತಿ ಜಾನಪದ ನೃತ್ಯಗಳು, ಭರತನಾಟ್ಟಯ, ವಚನಾಮೃತ ನೃತ್ಯ, ಸುಗ್ಗಿ ಕುಣಿತ, ಮುಂತಾದವರುಗಳು ಪ್ರದರ್ಶನಗೊಂಡವು. ಮಳೆಯಲ್ಲಿಯೇ ಕುಣಿದು ಕುಪ್ಪಳಿಸಿದ ಕಲಾವಿದರು ಮಳೆಯ ಮನರಂಜನೆಯನ್ನು ಪಡೆದುಕೊಂಡರು.