ಗ್ರಾಮೀಣ ಕಲಾವಿದರನ್ನು ಪ್ರೋತ್ಸಾಹಿಸಿರಿ- ಶ್ರೀಯಲ್ಲಮ್ಮತಾಯಿ


ಸಂಜೆವಾಣಿ ವಾರ್ತೆ
ಕುರುಗೋಡು.ಜು.28  ಬಯಲಾಟ ಕಲಾವಿದರನ್ನು ಎಲ್ಲರೂ ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಕುರುಗೋಡಿನ ಶಿವಶರಣೆ ಶ್ರೀಯಲ್ಲಮ್ಮತಾಯಿ ಹೇಳಿದರು.
ಅವರು ರಾತ್ರಿ ಪಟ್ಟಣದ ವಾಲ್ಮೀಕಿಭವನದಲ್ಲಿ ಕನ್ನಡ ಮತ್ತು ಸಂಸ್ಕುತಿ ಇಲಾಖೆ ಬಳ್ಳಾರಿ ಸಹಯೋಗದೊಂದಿಗೆ ಬಾದನಹಟ್ಟಿಯ ಶ್ರೀಗುರುಪಂಚಾಕ್ಷರಿಪುಟ್ಟರಾಜಶಿವಯೋಗಿ ಬಯಲಾಟ ಮತ್ತು ಸಾಂಸ್ಕುತಿಕ ಕಲಾಟ್ರಸ್ಟ್‍ವತಿಯಿಂದ ಗಾಳಿಕರಿಬಸಪ್ಪ ಕಲಾತಂಡದಿಂದ ಹಮ್ಮಿಕೊಳ್ಳಲಾಗಿದ್ದ ಭಕ್ತಪ್ರಹ್ಲಾದ ಪೌರಾಣಿಕ ಬಯಲಾಟ ನಾಟಕ ಪ್ರದರ್ಶನಕ್ಕೆ ಚಾಲನೆನೀಡಿ ಮಾತನಾಡಿದರು.
ಬಾದನಹಟ್ಟಿ ಕಲಾವಿದ ಎರ್ರಿನಾಗೇಶ ಮಾತನಾಡಿ, ಬಳ್ಳಾರಿಜಿಲ್ಲೆಯಲ್ಲಿ  ಗಂಡುಮೆಟ್ಟಿದ ಕಲೆ ಬಯಲಾಟ ಪ್ರದರ್ಶನ ಇತ್ತೀಚಿಗೆ ಕಡಿಮೆಯಾಗಿದೆ. ಆದ್ದರಿಂದ ಪ್ರತಿಯೊಬ್ಬ ಕಲಾವಿದರು ಬಯಲಾಟ ಪ್ರದರ್ಶನ ಆಡುವುದರಮೂಲಕ ಆ ಕಲೆಯನ್ನು ಪ್ರೋತ್ಸಾಹಿಸಿರಿ ಎಂದು ಸಭಿಕರಲ್ಲಿ ಮನವಿಮಾಡಿದರು.
ಬಾದನಹಟ್ಟಿ ಹಾರ್ಮೋನಿಯಂ ಮಾಸ್ತರ್ ಕರಿಬಸನಗೌಡ ಮಾತನಾಡಿ, ಹವ್ಯಾಸಿ ಕಲಾತಂಡಗಳಕಲಾವಿದರಿಗೆ ಕನ್ನಡ ಮತ್ತು ಸಂಸ್ಕುತಿ ಇಲಾಖೆಯು ಹೆಚ್ಚಿನ ಸಹಕಾರ ನೀಡುವುದರ ಮೂಲಕ ಬಯಲಾಟ ನಾಟಕವನ್ನು ಉಳಿಸಿ,ಬೆಳೆಸುವ ಕಾರ್ಯ ಮಾಡಬೇಕು, ಅಂದಾಗ ಮಾತ್ರ ಬಯಲಾಟ ಕಲೆ ಜೀವಂತವಾಗಿರಲು ಸಾದ್ಯ ಎಂದರು.
ಮಲ್ಲಿಕಾರ್ಜುನ-ಬಾಲಕೃಷ್ಟ, ಜಿ.ಹೊನ್ನೂರಪ್ಪ- ಉಗ್ರನರಸಿಂಹ, ಜೀ.ವೀರಮಲ್ಲಪ್ಪ ಹಿರಣ್ಯಕಶ್ಯಪನ ಪಾತ್ರ ಮತ್ತು ಕೂಡ್ಲಿಗಿ ವೈಟ್‍ಸುಮಾರವರು ಅಭಿನಯಿಸಿದ ಸ್ತೀಪಾತ್ರದ ನೃತ್ಯರೂಪಕವು ನೋಡುಗರ ಗಮನಸೆಳೆಯಿತು.ಬಾದನಹಟ್ಟಿಯ ಸಾರಥಿ ಪಾತ್ರವನ್ನು ಅಭಿನಯಿಸಿದ ಗುರುಳ್ಳುಹನುಮಯ್ಯನವರು ಎಲ್ಲರನ್ನು ಹಾಸ್ಯದ ಮೂಲಕ ನಕ್ಕುನಗಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ನೆಣಿಕೆಬಸವರಾಜ್ ನಿರೂಪಿಸಿ,ಕೊನೆಯಲ್ಲಿ ವಂದಿಸಿದರು. ಕಾರ್ಮಿಕ ವಿಭಾಗದ ಜಿಲ್ಲಾದ್ಯಕ್ಷ ಲಕ್ಷಣ, ರೈತ ಮುಖಂಡ ವಿಎಸ್.ಶಿವಶಂಕರ್, ಎಂ.ಜಡೆಪ್ಪ, ಹೆಚ್.ಮಲ್ಲಿಕಾರ್ಜುನಗೌಡ, ದಾಸರನಾಗರಾಜ, ಗೆಣಿಕೆಹಾಳುಬಸವರಾಜ್, ಕಲಾವಿದ ಚಂದ್ರೇಗೌಡ, ನಾಗಲಿಂಗ, ಹೇಮರೆಡ್ಡಿ, ಸೇರಿದಂತೆ ಇತರರು, ಊರಿನ ಮುಖಂಡರು,ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ನಾಟಕವನ್ನು ಪ್ರದರ್ಶನಗೊಳಿಸಿದರು.