ಗ್ರಾಮೀಣ ಅಭ್ಯರ್ಥಿ ಪರ ಮತಯಾಚಿಸಿದ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಹಮ್ಮದ್ ರಫೀಕ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.01:  ಗ್ರಾಮೀಣ ಕ್ಷೇತ್ರದ  ಕೌಲ್ ಬಜಾರ್ ಪ್ರದೇಶದ  26ನೇ ವಾರ್ಡಿನಲ್ಲಿ, ನಗರ  ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರ ನೇತೃತ್ವದಲ್ಲಿ  ಪಕ್ಷದ ಅಭ್ಯರ್ಥಿ  ನಾಗೇಂದ್ರ ಅವರ ಪರ ಮನೆ, ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶದಲ್ಲಿ ಯಾವುದೇ ಸಮುದಾಯದ ನಡುವೆ ವೈಷಮ್ಯ ಇಲ್ಲದೆ ಬದುಕಲು ಅವಕಾಶ ಇರುತ್ತದೆ. ಇದನ್ನರಿತು ಕಳೆದ ಬಾರಿಯಂತೆ ಈ ಬಾರಿಯೂ ನಮ್ಮ ಅಭ್ಯರ್ಥಿ ನಾಗೇಂದ್ರ ಅವರಿಗೆ ಮತ ನೀಡಿ ಆಯ್ಕೆ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಆಯಾಜ್ ಅಹಮ್ಮದ್, ವಾರ್ಡಿನ ಪಾಲಿಕೆ ಸದಸ್ಯೆ ಡಿ.ಸುಕುಮ್ ರಿಯಾಜ್, ಐ.ಎನ್.ಟಿ.ಯು.ಸಿ ಅಧ್ಯಕ್ಷ ಕೆ.ತಾಯಪ್ಪ,  ಮುಖಂಡರಾದ  ಜಿ.ಎಸ್.ಜಿಲಾನ್ ಭಾಷಾ, ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ ವೆಂಕಟಲಕ್ಷ್ಮಿ ನಾರಾಯಣ,  ಯುವ ಮುಖಂಡರಾದ  ಶಿವು, ಬಾಬು,  ಆಸೀಫ್ ಇತರರು ಉಪ್ಥಿತರಿದ್ದರು.