ಗ್ರಾಮೀಣಾ ಆರ್ಥಿಕತೆಗೆ ಹೊಸ ದಿಕ್ಕು

ನವದೆಹಲಿ,ಏ.೨೧- ಡಿಜಿಟಲ್ ಪಾವತಿಯಲ್ಲಿ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಮೊಬೈಲ್ ಡೇಟಾ ಅಗ್ಗವಾಗಿರುವ ದೇಶಗಳಲ್ಲಿ ಭಾರತವೂ ಒಂದು.ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ದೇಶದ ಗ್ರಾಮೀಣ ಆರ್ಥಿಕತೆ ಬದಲಾಗುತ್ತಿದೆ.ಇದರಿಂದ ದೇಶದ ಅಭಿವೃದ್ದಿಯ ಚಿತ್ರಣವೂ ಬದಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ದೆಹಲಿಯಲ್ಲಿಂದು ನಡೆದ ನಾಗರಿಕ ಸೇವೆಗಳ ದಿನದಂದು ನಾಗರಿಕ ಸೇವೆಯಲ್ಲಿ ನಿರತರಾದವನ್ನು ಉದ್ದೇಶಿಸಿ ಮಾತನಾಡಿ ದೇಶದ ಪ್ರಗತಿಯಲ್ಲಿ ಮತ್ತಷ್ಡು ತೊಡಗಿಸಿಕೊಂಡು ದೇಶ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
ದೇಶ ತನ್ನ ಸ್ವಾತಂತ್ರ್ಯದ ೭೫ ವರ್ಷಗಳನ್ನು ಪೂರೈಸಿದ ಸಮಯವಾಗಿದೆ. ಮುಂದಿನ ೨೫ ವರ್ಷಗಳ ದೈತ್ಯಾಕಾರದ ಗುರಿಗಳನ್ನು ಸಾಧಿಸಲು ದೇಶ ಕ್ಷಿಪ್ರ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿರುವ ಸಮಯವಾಗಿದೆ ಎಂದು ಅವರು ಹೇಳಿದ್ದಾರೆ

ನಕಲಿ ವ್ಯವಸ್ಥೆ ಪತ್ತೆ:
ಹಿಂದಿನ ಸರ್ಕಾರದ ವ್ಯವಸ್ಥೆಯಿಂದಾಗಿ ೪ ಕೋಟಿ ನಕಲಿ ಅನಿಲ ಸಂಪರ್ಕಗಳು, ೪ ಕೋಟಿ ನಕಲಿ ಪಡಿತರ ಚೀಟಿಗಳು, ಅಲ್ಪಸಂಖ್ಯಾತ ಸಚಿವಾಲಯದಿಂದ ೩೦ ಲಕ್ಷ ನಕಲಿ ಯುವಕರಿಗೆ ವಿದ್ಯಾರ್ಥಿವೇತನದ ಪ್ರಯೋಜನ ಪಡೆಯುತ್ತಿದ್ದರು ಅದನ್ನು ಪತ್ತೆ ಮಾಡಿ ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.ದೇಶದ ವಿವಿಧ ಸಾರ್ವಜನಿಕ ಸೇವಾ ಇಲಾಖೆಗಳಲ್ಲಿ ತೊಡಗಿರುವ ಎಲ್ಲಾ ಅಧಿಕಾರಿಗಳ ಕೆಲಸವನ್ನು ಗುರುತಿಸಲು ಪ್ರತಿ ವರ್ಷ ಏಪ್ರಿಲ್ ೨೧ ರಂದು ’ನಾಗರಿಕ ಸೇವೆಗಳ ದಿನ’ವನ್ನು ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ರಾಷ್ಟ್ರ ನಿರ್ಮಾಣದಲ್ಲಿ ನಾಗರಿಕ ಸೇವಕರ ಕೊಡುಗೆಯನ್ನು ಶ್ಲಾಘನೀಯ ಎಂದ ಅವರು ದೇಶದ ಪ್ರಗತಿಗೆ ಇನ್ನಷ್ಟು ಶ್ರಮಿಸಲು ಅವರನ್ನು ಉತ್ತೇಜಿಸುವ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು ದೇಶಾದ್ಯಂತ ನಾಗರಿಕ ಸೇವಕರನ್ನು ಪ್ರೇರೇಪಿಸಲು ಸೂಕ್ತವಾದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಅವರು ಅದೇ ಉತ್ಸಾಹದಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಸಾಮಾನ್ಯ ನಾಗರಿಕರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಿಲ್ಲೆಗಳು ಮತ್ತು ಸಂಸ್ಥೆಗಳು ಮಾಡಿದ ಅಸಾಧಾರಣ ಮತ್ತು ನವೀನ ಕಾರ್ಯಗಳನ್ನು ಗುರುತಿಸುವ ದೃಷ್ಟಿಯಿಂದ ಇವುಗಳನ್ನು ಸ್ಥಾಪಿಸಲಾಗಿದೆ.
ಕೇಂದ್ರ ಸಾರ್ವಜನಿಕ ಮತ್ತು ಪಿಂಚಣಿ ಇಲಾಖೆಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಮತ್ತಿತರಿದ್ದರು