ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆಗೆ ಖಂಡನೆ

ದಾವಣಗೆರೆ. ನ.೮;  ಗ್ರಾಮೀಣಾಭಿವೃದ್ಧಿ    ಸಚಿವರಾದ ಕೆ.ಎಸ್. ಈಶ್ವರಪ್ಪರವರು ದ್ವೇಶ ಭಾಷಣ ಮಾಡದೆ ಕಾನೂನನ್ನು ಅರಿತು ಮಾತನಾಡ ಬೇಕು ಎಂದು ವಕೀಲ ಅನೀಸ್ ಪಾಷ ಒತ್ತಾಯಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್ ಈಶ್ವರಪ್ಪರವರು ಮಂದಿರ ಮತ್ತು ಮಸೀದಿಗಳ ಬಗ್ಗೆ ದ್ವೇಷ ತುಂಬಿದ ಮಾತುಗಳನ್ನಾಡಿ ಪದೇ-ಪದೇ ಸೌಹಾರ್ಧಯುತ ವಾತಾವರಣವನ್ನು ಕದಡುವ ಹೇಳಿಕೆಯು ಖಂಡನೀಯವಾಗಿದೆ.  ಭಾರತಾಧ್ಯಂತ ಬಹಳ ಸ್ಥಳಗಳಲ್ಲಿ ಬೇರೆ-ಬೇರೆ ಜಾತಿಯ ಪೂಜಾ ಸ್ಥಳಗಳು ಅಕ್ಕ-ಪಕ್ಕದಲ್ಲಿ ಇರುವುದನ್ನು ಅನಾದಿ ಕಾಲದಿಂದ ನಾವು ನೋಡುತ್ತಾ ಬಂದಿದ್ದೇವೆ. ಇಂತಹ ಸ್ಥಳಗಳು ವಿವಿಧತೆಯಲ್ಲಿ ಏಕತೆ ಹೊಂದಿದೆ ಎಂದು ಭಾರತ ದೇಶದ ವೈಶಿಷ್ಟತೆಯನ್ನು ಎತ್ತಿ ತೋರಿಸುತ್ತದೆ. ಬಹಳಷ್ಟು ಸ್ಥಳಗಳಲ್ಲಿ ಮಂದಿರ, ಮಸೀದಿ ಮತ್ತು ಚರ್ಚ್ ಗಳು ಅಕ್ಕ-ಪಕ್ಕ ಒಂದೇ ವಾಠಾದಲ್ಲಿ ಇರುವುದನ್ನು ನಾವು ಕಂಡಿದ್ದೇವೆ. ಆದರೆ 1991 ಈಚೆಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಸಲುವಾಗಿ ಕೆಲವು ರಾಜಕೀಯ ಪಕ್ಷಗಳು ಸೌಹಾರ್ಧಯುತ ವಾತಾವರಣವನ್ನು ಕದಡಿ ಇಡೀ ದೇಶದಲ್ಲಿ ಜಾತಿ-ಜಾತಿಗಳ ಮಧ್ಯೆ ವೈಶಮ್ಯ ಹುಟ್ಟಿಸುವ ಪ್ರಯತ್ನ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಹಂತದಲ್ಲೂ ಜಾತಿ ವೈಷಮ್ಯವನ್ನು ಹುಟ್ಟಿಸುವಂತಹ ಪ್ರಯತ್ನವನ್ನು ಕೆಲವು ರಾಜಕಾರಣಿಗಳು ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆ ನಮ್ಮ ದೇಶದ ಏಕತೆ ಮತ್ತು ಅಖಂಡತೆಗೆ ಧಕ್ಕೆಯುಂಟು ಮಾಡುವುದಲ್ಲದೆ ದೇಶದ ಭವಿಷ್ಯವನ್ನು ಹಾಳು ಮಾಡುತ್ತಿವೆ.  ಕೆ.ಎಸ್ ಈಶ್ವರಪ್ಪರವರು ಈ ಎಲ್ಲಾ ವಿಚಾರಗಳನ್ನು ತಿಳಿದು ದೇಶದಲ್ಲಿ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸೇವೆ ಸಲ್ಲಿಸುವುದನ್ನು ಮರೆತು ಪದೇ-ಪದೇ ವೈಷಮ್ಯವನ್ನು ಹುಟ್ಟಿಸುವ ಹೇಳಿಕೆಯನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳು ಅವರ ನಡತೆಯನ್ನು ಎತ್ತಿ ತೋರಿಸುತ್ತದೆ. ಅಲ್ಲದೆ ಇಂತಹ ಪ್ರಚೋಧನಕಾರಿ ಹೇಳಿಕೆಗಳಿಂದ ದೇಶದಲ್ಲಿ ಅಶಾಂತಿಯ ವಾತಾವರಣ ಹುಟ್ಟುವುದಲ್ಲದೇ ಕೆಲವು ಕೋಮುವಾದಿ ಮನಸ್ಥಿತಿ ಉಳ್ಳವರಿಗೆ ಪ್ರಚೋಧನೆ ನೀಡಿದಂತಾಗುತ್ತದೆ. ಈ ಬಗ್ಗೆ ಮಾನ್ಯ ರಾಜ್ಯಪಾಲರಿಗೆ ಇಮೇಲ್ ಮೂಲಕ ಮನವಿ ಮಾಡಿ ಇನ್ನುಮುಂದೆ ಇಂತಹ ಪ್ರಚೋಧನಕಾರಿ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
,