
ಹೊಸಪೇಟೆ ಆ.26: ಭಾರತ ಸರ್ಕಾರ ಜಂಟಿ ಕಾರ್ಯದರ್ಶಿ, ಹಣಕಾಸು ಸಲಹೆಗಾರ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ತನುಜಾ ಠಾಕೂರ್ ಹಾಗೂ ಅಧಿಕಾಗಳ ತಂಡ ಕಾಮಗಾರಿಗಳ ಪರಿಶೀಲನೆಗಾಗಿ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮ ಪಂಚಾಯತಿಗೆ ಭೇಟಿ ನೀಡಿದರು.
ನರೇಗಾ ಯೋಜನೆ ಅಡಿಯಲ್ಲಿ ಕೈಗೊಂಡ ಮಹಿಳಾ ಒಕ್ಕೂಟದ ಕಟ್ಟಡವನ್ನು ಹಾಗೂ (ಗ್ರಾ.ಉ) ತಾ.ಪಂ. ಹೊಸಪೇಟೆ ಮನರೇಗಾ ಕಾಮಗಾರಿಗಳ ಕಡತಗಳನ್ನು ಪರೀಶೀಲನೆ ನಡೆಸಿದರು. ನಂತರ 76 ವೆಂಕಟಾಪುರದಲ್ಲಿ ಗೋದಾಮು ನಿರ್ಮಾಣ ಕಟ್ಟಡವನ್ನು ಮತ್ತು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪೌಷ್ಟಿಕ ಆಹಾರವನ್ನು ಪರಿಶೀಲನೆ ಮಾಡಿದರು. ಮಹಿಳಾ ಒಕ್ಕೂಟದಿಂದ ಕೈಗೊಂಡ ಉಪಕಸಬನ್ನು ಪರಿಶೀಲಿಸಿದರು.
ನಂತರ ಮಲಪನಗುಡಿ ವ್ಯಾಪ್ತಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆ ಅಡಿಯಲ್ಲಿ ವಿ.ಗಾಳೆಪ್ಪ ಅವರ ಮಲ್ಲಿಗೆ ತೋಟ ಪರಿಶೀಲನೆ ನಡೆಸಿದರು. ನಂತರ ಮಲಪನಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆಯ ಅಡಿಯಲ್ಲಿ ಮಲಪನಗುಡಿ ವ್ಯಾಪ್ತಿಯ ಗಾಳೆಮ್ಮನ ಗುಡಿಯಿಂದ ಸುಬ್ರಮಣ್ಯಂ ತೋಟದವರಗೆ ಸಾಮಾಜಿಕ ಅರಣ್ಯ ಇಲಾಖೆಯಿಂದ ಗಿಡ ನೆಡುವ ಕಾಮಗಾರಿ ಪರಿಶೀಲನೆ ನಡೆಸಿದರು.
ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಭಾರತ್ ನಿರ್ಮಾಣ ಸೇವಾ ಕೇಂದ್ರ ಹಾಗೂ ಮಹಿಳಾ ಒಕ್ಕೂಟದ ಕಟ್ಟಡ ಮತ್ತು ನಾಗಪ್ಪ ಕ್ಯಾಂಪ್‍ನ ಶಾಲಾ ಕಾಂಪೌಂಡ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಉಪಕಾರ್ಯದರ್ಶಿ ಭೀಮಪ್ಪ ಲಾಳಿ, ಂಆPಅ, ಆIಇಅ & ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಸಾಮಾಜಿಕ ಪರಿಶೋಧನೆ ಅವರು, ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಎಂ ಮತ್ತು ಸಹಾಯಕ ನಿರ್ದೇಶಕಿ ಶಮೀಮ್ ಬಾನು ಸೇರಿದಂತೆ ಸಿಬ್ಬಂದಿ ಹಾಜರಿದ್ದರು.