ಗ್ರಾಮೀಣಾಭಿವೃದ್ಧಿ ವಿ.ವಿ.ಯ ಪ್ರಥಮ ಘಟಿಕೋತ್ಸವ


ಗದಗ, ಏ.11: ರಾಷ್ಟ್ರದ ನಿಜವಾದ ಅಭಿವೃದ್ಧಿ ಗ್ರಾಮಗಳ ಬೆಳವಣಿಗೆಯಲ್ಲಿ ಅಡಗಿದೆ. ಇಂದು ಪದವಿ ಪಡೆದ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಹೊಸ ಆವಿಷ್ಕಾರದೊಂದಿಗೆ ಅಭಿವೃದ್ಧಿಗೆ ನಾಂದಿಯಾಗುವಂತೆ ವಿವೇಕಾನಂದ ಯುಥ್ ಮೂವ್‍ಮೆಂಟ್ ಮತ್ತು ಮೈಸೂರಿನ ಗ್ರಾಸ್‍ರೂಟ್ಸ್ ರಿಸರ್ಚ ಮತ್ತು ಅಡ್ವೋಕೆಸಿ ಮೂವ್‍ಮೆಂಟ್‍ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಆರ್.ಬಾಲಸುಬ್ರಹ್ಮಣ್ಯಂ ಹೇಳಿದರು.
ಗದಗಿನ ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ ಪ್ರಥಮ ಘಟಿಕೋತ್ಸವ ಸಮಾರಂಭದ ಘಟಿಕೋತ್ಸವ ಭಾಷಣದಲ್ಲಿ ಮಾತನಾಡಿದರು.
ರಾಷ್ಟ್ರದ ಅಭಿವೃದ್ಧಿ ಬೀಜವನ್ನು ಪಂಚಾಯತ್‍ದಿಂದ ಮೊಳಕೆಯೊಡೆದು ಅದು ರಾಜ್ಯ , ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನವಭಾರತದ ನಿರ್ಮಾಣಕ್ಕೆ ಗ್ರಾಮೀಣ ಭಾಗದ ಕೊಡುಗೆ ಅಪಾರವಿದೆ ಎಂದರು. ಗ್ರಾಮೀಣ ಭಾಗದ ಜನರಲ್ಲಿ ಹೊಸ ಆವಿಷ್ಕಾರಗಳ ಚಿಂತನೆಗೆ ಕೊರತೆಯಿಲ್ಲ. ಮೂಲಸೌಕರ್ಯಗಳ ಕೊರತೆಯಿದ್ದು ಅವುಗಳನ್ನು ಪೂರೈಸಿದಲ್ಲಿ ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾಜಕ್ಕೆ ಸರ್ಕಾರ ಹಾಗೂ ಸರ್ಕಾರಕ್ಕೆ ಸಮಾಜ ಕೈಜೋಡಿಸಿ ಸಹಕರಿಸಿದರೆ ಗ್ರಾಮೀಣಾಭಿವೃದ್ಧಿ ಖಂಡಿತ ಸಾಧ್ಯ ಎಂದರು.
ವಿ.ವಿ.ಯ ಕುಲಸಚಿವ ಪೆÇ್ರ. ವಿಷ್ಣುಕಾಂತ ಚಟಪಲ್ಲಿ ಅವರು ಮಾತನಾಡಿ ವಿ.ವಿ.ಯಲ್ಲಿ ನಡೆಯುವ ಪ್ರಥಮ ಘಟಿಕೋತ್ಸವ ಇದಾಗಿದ್ದು ಗ್ರಾಮೀಣ ಪರಿವರ್ತನೆಯಡೆಗೆ ಒಂದು ಹೆಜ್ಜೆಯಾಗಿದೆ ಎಂದರು. ದೀಕ್ಷಾ ಪದವು ಎರಡು ಭಾಗಗಳನ್ನು ಹೊಂದಿದೆ. ದಿ ಮತ್ತು ಕ್ಷ. ದಿ ಅಕ್ಷರವು ದಿಕ್ ಅತವಾ ನಿರ್ದೇಶನ ಅತವಾ ದೈವಿಕ ಜ್ಞಾನವನ್ನು ಪಡೆಯುವ ಪ್ರಕ್ರಿಯೆಯಾಗಿದೆ. ಕ್ಷ ಎಂದರೆ ಸಂಚಿತ ಪಾಪಗಳನ್ನು ನಿವಾರಿಸುವುದು ಅಥವಾ ನಾಶಪಡಿಸುವುದನ್ನು ಸೂಚಿಸುತ್ತದೆ. ಪರ್ಯಾಯವಾಗಿ ದೀಕ್ಷಾ ಪದದಲ್ಲಿ ಈಕ್ಷಾ ಎಂಬುವುದು ತನ್ನ ಸಾಮಥ್ರ್ಯಕ್ಕಿಂತ ಹೆಚ್ಚಿನದನ್ನು ನೋಡಲು ಅಥವಾ ಗ್ರಹಿಸಲು ಒಬ್ಬ ವ್ಯಕ್ತಿಯನ್ನು ಶಕ್ತನನ್ನಾಗಿಸುತ್ತದೆ ಎಂದರು.
ಸಹ ಕುಲಾಧಿಪತಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿ ಎಂಬ ಅಧಿಕಾರದಿಂದ ಉಪಸ್ಥಿತರಾಗಿ ಪದವಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಆಯಾ ಪದವಿಗಳಿಗೆ ಪ್ರವೇಶ ನೀಡುತ್ತೇನೆ ಹಾಗೂ ನಿಮ್ಮ ಜೀವನದಲ್ಲಿ ಮಾತುಕತೆಯಲ್ಲಿ ಮತ್ತು ನಡುವಳಿಕೆಯಲ್ಲಿ ನೀವು ಎಂದೂ ಈ ಪದವಿಗೆ ಅರ್ಹರು ಎಂದು ಭಾವಿಸಿ ಅಪ್ಪಣೆ ನೀಡುತ್ತೇನೆ ಎಂದು ಸಚಿವ ಈಶ್ವರಪ್ಪ ಅವರು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಸಾಬರಮತಿ ಆಶ್ರಮದಲ್ಲಿ ಅತಿಥಿ ಮಹೋದಯರು ಗುಂಪು ಛಾಯಾಚಿತ್ರಕ್ಕೆ ಸಾಕ್ಷಿಯಾದರು. ನಂತರ ಸಬರಮತಿ ಆಶ್ರಮದಿಂದ ಘಟಿಕೋತ್ಸವ ಸಭಾಂಗಣದವರೆಗೆ ಮೆರವಣಿಗೆ ಸಾಗಿತು.
ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಶಾಸಕ ಎಚ್.ಕೆ.ಪಾಟೀಲ ಹಾಗೂ ಹಿರಿಯ ಐ.ಎ.ಎಸ್. ಅಧಿಕಾರಿ ಡಾ.ಅಶೋಕ ದಳವಾಯಿ, ವಿವಿಯ ರಿಜಿಸ್ಟ್ರಾರ್ ಬಸವರಾಜ ಲಕ್ಕಣ್ಣವರ, ವಿತ್ತೀಯ ಅಧಿಕಾರಿ ಪ್ರಶಾಂತ ಜೆ.ಸಿ, ವಿವಿಯ ವಿವಿಧ ಕೇಂದ್ರಗಳ ನಿರ್ದೇಶಕರು, ಶಾಲೆಗಳ ಮುಖ್ಯಸ್ಥರು, ಕಾರ್ಯನಿವಾಹಕ ಪರಿಷತ್ತಿನ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.