ಗ್ರಾಮೀಣರ ಆರೋಗ್ಯ ತಪಾಸಣೆ ಕೈಗೊಂಡು ಪೋರ್ಟ್‍ಲ್‍ನಲ್ಲಿ ದಾಖಲಿಸಲು ಸೂಚನೆ


ದಾವಣಗೆರೆ ನ.23; ಗ್ರಾಮೀಣ ಭಾಗದ ಜನರ  ಆರೋಗ್ಯ ತಪಾಸಣೆ ಕೈಗೊಂಡು, ಸಾಂಕ್ರಾಮಿಕ ರೋಗ ಲಕ್ಷಣಗಳು ಪತ್ತೆಯಾದಲ್ಲಿ ತಕ್ಷಣವೇ ಐ.ಹೆಚ್.ಐ.ಪಿ. ಪೆÇೀರ್ಟಲ್‍ನಲ್ಲಿ ನಮೂದಿಸುವಂತೆ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ನಟರಾಜ್ ಅವರು ಸೂಚಿಸಿದರು.ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಕಿರಿಯ ಮಹಿಳಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಸಮಗ್ರ ರೋಗಗಳ ಕಣ್ಣಾಗವಾಲು ಹಾಗೂ ಸಮಗ್ರ ರೋಗಗಳ ಮಾಹಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಅವರು ಮಾತನಾಡಿದರು.ಸಮಗ್ರ ರೋಗ ತಪಾಸಣೆಗ ಆರೋಗ್ಯ ಸಹಾಯಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಆಯೋಜಿಸಿರುವ  ಅತ್ಯುತ್ತಮ ತರಬೇತಿ ಇದಾಗಿದೆ. ಯಾವುದೇ ಸಾಂಕ್ರಾಮಿಕ ರೋಗಗಳು ಕಂಡು ಬಂದರೆ ಜಿಯೋ – ಸ್ಫಟಿಯಲ್ ಮೂಲಕ ಮಾಡಿದರೆ ಅಲ್ಲಿನ ಪ್ರದೇಶದ ಹೆಸರು ಹಾಗೂ ರೋಗಿಯ ಮಾಹಿತಿ ಸಿಗುತ್ತದೆ. ಆಯಾ ತಾಲ್ಲೂಕ್ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ  ಜನರಲ್ಲಿ ರೋಗ ಉಲ್ಬಣವಾಗದಂತೆ  ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ತಾಲೂಕಾ  ವೈದ್ಯಾಧಿಕಾರಿಗಳಿಗೆ ನೆರವಾಗಲಿದೆ ಎಂದರು. ಡಾ. ಶುಕ್ಲಾ , ಮಿಲಿನ್ ಕುಮಾರ್ ಇತರರು ಉಪಸ್ಥಿತರಿದ್ದರು