ಗ್ರಾಮೀಣಭಾಗದ ಜನರ ಸಂಕಷ್ಟ ಆಲಿಸಿದ ಹರಪನಹಳ್ಳಿ ಶಾಸಕರು

ಹರಪನಹಳ್ಳಿ.ಜು.೧೬ : ಶಾಸಕರ ನಡೆ, ಹಳ್ಳಿಕಡೆ ಮೂಲಕ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಅಧಿಕಾರಿಗಳಿಂದ ಸ್ಪಷ್ಟನೆ ಹಾಗೂ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.ತಾಲೂಕಿನ ಹಲುವಾಗಲು ಗ್ರಾಮಕ್ಕೆ ಶಾಸಕ ಭೇಟಿ ನೀಡಿ, ಗ್ರಾಮದ ವಿವಿಧ ವಾರ್ಡಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿದರು.ನಂತರ ಪರಿಶಿಷ್ಟ ಪಂಗಡದ ಪರಿಶಿಷ್ಟ ಜಾತಿ ಓಣಿಯಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆಮಾಡಿದರು, ನಿವಾಸಿಗಳೊಂದಿಗೆ ಚರ್ಚಿಸಿದ ಬಳಿಕ ಸ್ಥಳ ಖಾಸಗಿಯವರಿಗೆ ಸಂಬಂಧಪಟ್ಟಿರುವುದರಿಂದ ಅವರ ಒಪ್ಪಿಗೆ ಪಡೆದು ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿ ಎಂದು ಅಧಿಕಾರಿಗೆ ಸೂಚಿಸಿದರು.ಇದೇ ವೇಳೆ ತಾಪಂ ಮಾಜಿ ಸದಸ್ಯ ಸೋಮಲಿಂಗಪ್ಪ ಬಹುಗ್ರಾಮ ಯೋಜನೆಯಲ್ಲಿ ಗ್ರಾಮಕ್ಕೆ ಕುಡಿಯುವ ನೀರನ್ನು ಸಮರ್ಪಕವಾಗಿ ಬರುತ್ತಿಲ್ಲ.ಈ ಬಗ್ಗೆ ಹಲವಾರು ಬಾರಿ ಸಂಬಂಧಿಸಿದ ಮನವಿ ಸಲ್ಲಿಸಿದರು ಅಧಿಕಾರಿಗಳಿಗೆ ಯಾವುದೇ ಸಮಸ್ಯೆ ಬಗೆಹರಿದಿಲ್ಲ ಎಂದು ಶಾಸಕರನ್ನು ಪ್ರಶ್ನಿಸಿದಾಗ, ಸ್ಥಳದಲ್ಲಿದ್ದ ಎಇಇ ಸಿದ್ದರಾಜು ಅವರಿಗೆ ಕರೆದು ಈ ಸಮಸ್ಯೆ ಶೀಘ್ರ ಬಗೆಹರಿಸುವಂತೆ ಹೇಳಿದರು.ವಾರ್ಡಗಳಿಗೆ ತೆರಳುವ ಮುನ್ನ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ನಂತರ ಪಂಚಾಯಿತಿ ವ್ಯಾಪ್ತಿಯಲ್ಲಿನ ಗರ್ಭಗುಡಿ, ಗರ್ಭಗುಡಿ ತಾಂಡ, ಒಳತಾಂಡ, ಕಣಿವೆ ಗ್ರಾಮಗಳಿಗೆ ತರಳಿ ವಾರ್ಡ, ಓಣಿಗಳಲ್ಲಿ ಸಂಚರಿಸಿ ಸಮಸ್ಯೆಗಳನ್ನು ಪರಿಶೀಲಿಸಿದರು ಈಗಾಗಲೇ ತಾಲ್ಲೂಕಿನ ಹಲವುಗ್ರಾಮಗಳ ಉಳಿದಂತೆ ಸಾರ್ವಜನಿಕರ ಪಿಂಚಣಿ, ಪ್ರತಿ ಗ್ರಾಪಂ ಮಟ್ಟದಲ್ಲಿ ಒಂದೊಂದು ಸಮಸ್ಯೆಗಳನ್ನುಇತ್ಯರ್ಥಪಡಿಸಲು ಕ್ರಮವಹಿಸಲಾಗಿದೆ,ಮೂಲಭೂತ ಸೌಕರ್ಯದಂತಹ ಸಮಸ್ಯೆಗಳನ್ನು ಖುದ್ದಾಗಿ ಶಾಸಕರ ನಡೆ, ಹಳ್ಳಿ ಕಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಒಂದೊಂದು ದಿನ ನಡೆಸಲಾಗುವುದು ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.ಈ ಸಂದರ್ಭದಲ್ಲಿ ತಹಶೀಲ್ದಾರ ಡಾ.ಶಿವಕುಮಾರ ಬಿರಾದಾರ, ಇಓ ಪ್ರಕಾಶನಾಯ್ಕ, ಬಿಇಓ ಯು ಬಸವರಾಜಪ್ಪ, ఎఇఇ ಸಿದ್ದರಾಜ, ಕೃಷಿ ಸಹಾಯಕ ನಿರ್ದೇಶಕ ಗೊಂದಿ ಮಂಜುನಾಥ, ತೋಟಗಾರಿಕೆ ಸಹಾಯಕ ನಿರ್ದೇಶಕ ಜಯಸಿಂಹ, ತೆಲಿಗಿ ಬೆಸ್ಕಾಂ ಎಇಇ ಜಯ್ಯಪ್ಪ ಇಲಾಖೆಯ ಅಧಿಕಾರಿಗಳು, ಸಿಬ್ಬಂಧಿಗಳು ಹಾಗೂ ಮಾಜಿ ಗ್ರಾಪಂ ಅಧ್ಯಕ್ಷ ದ್ಯಾಮಪ್ಪ, ಮುಖಂಡರಾದ ಕಣಿವಿಹಳ್ಳಿ ಮಂಜುನಾಥ, ವಿಷ್ಣುವರ್ಧನ್ ರೆಡ್ಡಿ, ಕಲ್ಲೇರ ಬಸವರಾಜ, ಲೋಕೇಶ್, ಬಾಗಳಿ ಕೊಟ್ರೇಶಪ್ಪ, ಹೆಚ್, ಹೇಮಂತಕುಮಾರ, ಎಂ.ಮಲ್ಲೇಶ್, ಕೆ.ಪ್ರಕಾಶ್, ಪಿಡಿಓ ಆನಂದಕುಮಾರ, ಇದ್ದರು.