ಗ್ರಾಮೀಣಭಾಗದ ಜನರಿಗೆ ಲಸಿಕೆ


ಚಳ್ಳಕೆರೆ.ಡಿ.೩;  ರಾಜ್ಯದಲ್ಲಿ ಈಗಾಗಲೇ  ಇಬ್ಬರಲ್ಲಿ ಓಮಿಕ್ರಾನ್ ಕೋರೋನ  ವೈರಸ್ ಪತೆಯಾಗಿದ್ದು ಸಾರ್ವಜನಿಕರು ಎಚ್ಚೆತ್ತುಕೊಳ್ಳದಿದ್ದರೆ ತಮ್ಮ ಜೀವದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು. ನಗರದ ನೆಹರು ಸರ್ಕಲ್ ನಲ್ಲಿ ಇಂದು ಕೋರೋನ ಜಾಗೃತಿ ಮೂಡಿಸಿ  ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಆಗಮಿಸುವ ಜನರಿಗೆ ಕೋವಿಡ್ ವ್ಯಾಕ್ಸಿನ್  ಮಾಡಿಸದವರ ಮಾಹಿತಿ ತಿಳಿದು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮನವಿ ಮಾಡಿದರು ಕೆಲ ಯುವಕರು,ವಯೋವೃದ್ದರಿಗೆ ಮನವೊಲಿಸಿ ಲಸಿಕೆ ಹಾಕಿಸಿದರು.ಈ ಹಿಂದೆ  ಕೊರೋನ ವೈರಸ್ ನಿಂದ ಇಡೀ ಜಗತ್ತೇ ಬೆಚ್ಚಿಬಿದ್ದಿದೆ  ಹಲವಾರು ಕುಟುಂಬಗಳು ಬೀದಿಗೆ ಬಂದಿದ್ದಾರೆ ಇಂದಿಗೂ ಸಹಾ ಚೇತರಿಸಿಕೊಂಡಿಲ್ಲ ಇನ್ನಾದರೂ ಎಚ್ಚೆತ್ತು ಕೊಳ್ಳಬೇಕು ಇಲ್ಲದಿದ್ದರೆ ಆರ್ಥಿಕ ಸಂಕಷ್ಟದ ಜೊತೆಗೆ ಜನರ  ಜೀವಗಳನ್ನು ಬಲಿ ತೆಗೆದು ಕೊಳ್ಳುತ್ತದೆ ತಾಲೂಕಿನಲ್ಲಿ ಈಗಾಗಲೇ ಶೇ 82 ರಷ್ಟು ಅಧಿಕ ಪ್ರಮಾಣದಲ್ಲಿ ವ್ಯಾಕ್ಸಿನ್ ಹಾಕಿಸಿದ್ದು ಇನ್ನೂ ಶೇಕಡಾ 100  ಗುರಿ ಹೊಂದಿದ್ದು  ಕೊರೋನ ಮುಕ್ತ ತಾಲೂಕು ಮಾಡಲು ಎಲ್ಲರ ಸಹಕಾರ ಅಗತ್ಯ ಇದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಟಿ ಚ್ ಓ ಡಾ. ಪ್ರೇಮಸುಧ, ಆರೋಗ್ಯ ಸಹಾಯಕ ತಿಪ್ಪೇಸ್ವಾಮಿ,ಪೌರಾಯುಕ್ತ  ಪಾಲಯ್ಯ, ಗ್ರಾಮಲೆಕ್ಕಾಧಿಕಾರಿ  ಪ್ರಕಾಶ್, ಪಾಪಣ್ಣ ಬೋರಯ್ಯ ಇದ್ದರು.