ಗ್ರಾಮೀಣಭಾಗದಲ್ಲಿ ಉಚಿತ ದಂತ ತಪಾಸಣೆ

ಜಗಳೂರು.ನ.೨೪; ಆಹಾರ ಪದ್ದತಿ ಹಾಗೂ  ರಾಸಯನಿಕ ಮಿಶ್ರಿತ ಪೇಸ್ಟ್ ಮತ್ತು ಪುಡಿಯನ್ನು ಬಳಸಿ ಅತೀ ಕಡಿಮೆ ವಯಸ್ಸಿನಲ್ಲಿ ಹಲ್ಲಿನ ಸಮಸ್ಯೆಗೆ ಇಂದಿನ ಯುವ ಪೀಳಿಗೆ ತುತ್ತಾಗುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯತ್ ಸ್ಥಾಯಿ ಸದಸ್ಯರು ಸಿದ್ದೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ  ಪ್ರೇರಣ ಸಮಾಜ ಸೇವಾ ಸಂಸ್ಥೆ ಚರ್ಚ್, ಬಾಪೂಜಿ ವಿದ್ಯಾ ಸಂಸ್ಥೆ , ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ದಾವಣಗೆರೆ ಹಾಗೂ ಲಯನ್ಸ್ ಕ್ಲಬ್, ಲೀಯೋ ಕ್ಲಬ್, ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.ಮಕ್ಕಳು ತಮ್ಮಹಲ್ಲುಗಳ ಬಗ್ಗೆ ಕಾಳಜಿ ವಹಿಸಿ ವೈದ್ಯರ ಸಲಹೆಯಂತೆ ಹಲ್ಲು ಉಜ್ಜಿವರೀತಿಯನ್ನು ಸರಿಯಾಗಿ ಅನುಸರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಶಾಲಾಮಕ್ಕಳಿಗೆ ಹೇಳಿದರು. ಈ ಸೇವಾ ಸಂಸ್ಥೆಗಳು ಅತೀ ಹೆಚ್ಚು ಗ್ರಾಮೀಣಾ ಭಾಗದಲ್ಲಿ ಇಂತಹ ಅರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಿದರೆ ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತಾಗುತ್ತದೆ ಎಂದರು.ಪ್ರೇರಣ ಸಮಾಜ ಸೇವಾ ಸಂಸ್ಥೆಯ ಚರ್ಚ್ ನಿರ್ದೇಶಕ ಫಾ. ವಿಲಿಯಂ ಮಿರಾಂದ. ಮಾತನಾಡಿ ಆರೋಗ್ಯ ಕುರಿತು ನಾವು ತುಂಬಾ ಕಾಳಜಿ ವಹಿಸಿದಂತೆ ಹಲ್ಲುಗಳ ಸಂರಕ್ಷಣೆ ಕೂಡ ಮುಖ್ಯ. ಗ್ರಾಮೀಣ ಪ್ರದೇಶಗಳಲ್ಲಿ ದಂತ ವೈದ್ಯರು ವಿರಳ. ಏನಾದರೂ ಸಮಸ್ಯೆ ಬಂದರೆ ದೂರದ ಪಟ್ಟಣಕ್ಕೆ ಹೋಗಬೇಕು. ಇದಕ್ಕಾಗಿ ಗ್ರಾಮದ ಜನವರಿ ಅನುಕೂಲ ಮಾಡಲು ದಂತ ವ್ಯದ್ಯರ ತಂಡವೇ ಇಲ್ಲಿಗೆ ಬಂದಿದ್ದಾರೆ. ಇದರ ಸದುಪಯೋಗ ಪಡೆಯುವಂತೆ ಕರೆನೀಡಿದರು.ಕಾರ್ಯಕ್ರಮವನ್ನು ವೈದ್ಯಧಿಕಾರಿ ಡಾ.ಪ್ರಶಾಂತ್ ಜಿ.ಎಂ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ  ಲಯನ್ಸ್  ಶಾಯಿನ  ಬೇಗಂ, ಲಿಯೋ ಕ್ಲಬ್ ಅಧ್ಯಕ್ಷ ಸೈಯದ್ ವಾಸಿಮ್,  ಎಂ.ಡಿ. ಅಬ್ದುಲ್ ರಖೀಬ್ , ಸಿಬ್ಬಂದಿಗಳಾದ ಸುಮೀತ ಮಲ್ಲೀನಾಥ್ , ತಿಪ್ಪೇಶ್ , ಪೋಲಿಸ್ ಇಲಾಖೆ ಸಿಬ್ಬಂದಿಗಳಾದ ರಮೇಶ್ , ಅಜಯ್ , ಕರುನಾಡ ರಕ್ಷಣಾ ಪಡೇ ಜಿಲ್ಲಾಧ್ಯಕ್ಷೇ ಇಂದಿರಾ , ಶಾಲೆಯ ಮುಖ್ಯ ಶಿಕ್ಷಕರಾದ ಬಸವರಾಜ್ , ಇಂದ್ರಮ್ಮಾ ,ಎಸ್.ಡಿ.ಎಂ.ಸಿ ಅಧ್ಯಕ್ಷ ರೇವಣಸಿದ್ದಪ್ಪ ಸೇರಿದಂತೆ ವೈದ್ಯರ ತಂಡ ಉಪಸ್ಥಿತರಿದ್ದರು.