ಗ್ರಾಮೀಣದಲ್ಲಿ ಲತಾ ನಾಗರಾಜ್ ಲೋಕಿಕೆರೆ ಮತ ಪ್ರಚಾರ

ದಾವಣಗೆರೆ.ಏ.೩೦: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರ ಪತ್ನಿ ಶ್ರೀಮತಿ ಲತಾ ನಾಗರಾಜ್ ಲೋಕಿಕೆರೆ ಅವರು ಪತಿ ಪರ ಬಿರುಸಿನ ಮತ ಪ್ರಚಾರ ನಡೆಸಿ, ತಮ್ಮ ಪತಿಯನ್ನು ಬೆಂಬಲಿಸುವಂತೆ ಮತದಾರರಲ್ಲಿ ಆರ್ಶಿರ್ವಾದ ಪಡೆಯುತ್ತಿದ್ದಾರೆ.ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಡಿಹಳ್ಳಿ, ಕಕ್ಕರಗೊಳ್ಳ ಗ್ರಾಮಗಳಲ್ಲಿ ಬಿಜೆಪಿ ಮಹಿಳಾ ಮುಖಂಡರು, ಕಾರ್ಯಕರ್ತೆಯರ ಜೊತೆಗೂಡಿ ಮತದಾರರ ಪ್ರತಿ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಿದರು.ಪಕ್ಷದ ಮಹಿಳಾ ಮುಖಂಡರು, ಪ್ರಮುಖರ ಜೊತೆಗೆ ಪ್ರಚಾರ ನಡೆಸಿ, ನಾಗರಾಜ್ ಲೋಕಿಕೆರೆ ಅವರನ್ನು ಬೆಂಬಲಿಸಿ ಗೆಲ್ಲಿಸುವಂತೆ ಮತದಾರರಲ್ಲಿ ಮತಯಾಚನೆ ಮಾಡಿದರು.ಭಾರತೀಯ ಸಂಸ್ಕೃತಿ ಎತ್ತಿ ಹಿಡಿದ ಮಹಿಳಾ ಕಾರ್ಯಕರ್ತೆಯರು : ಕೋಡಿಹಳ್ಳಿ, ಕಕ್ಕರಗೊಳ್ಳ ಗ್ರಾಮಗಳಲ್ಲಿ ಮತಯಾಚನೆಗೆ ತೆರಳಿದ್ದ ಲತಾ ನಾಗರಾಜ್ ಲೋಕಿಕೆರೆ ಅವರನ್ನು ಆ ಗ್ರಾಮಗಳ ಜಿಲ್ಲಾ ಬಿಜೆಪಿ ಮಹಿಳಾ ಮುಖಂಡರು, ಕಾರ್ಯಕರ್ತೆಯರು ತಮ್ಮ ಮನೆಗಳಿಗೆ ಆತ್ಮೀಯವಾಗಿ ಆಹ್ವಾನ ನೀಡಿ ಅರಿಶಿನ, ಕುಂಕುಮ ನೀಡಿ ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯಲಾಯಿತು.ಇಂದು ಶನಿವಾರವೂ ಸಹ ಲತಾ ನಾಗರಾಜ್ ಲೋಕಿಕೆರೆ ಅವರು ಆವರಗೊಳ್ಳ ಮತ್ತು ಕಡ್ಲೆಬಾಳು ಗ್ರಾಮಗಳಲ್ಲಿ ಮತಯಾಚಿಸಿದರು.ಈ ವೇಳೆ ಹೆಚ್.ಸಿ. ಜಯಮ್ಮ, ವೀಣಾ ನಂಜಪ್ಪ, ಗಾಯತ್ರಿ, ರೇಖಾ ಸುರೇಶ್, ತನು ನಂದೀಶ್, ರಾಜೇಶ್ವರಿ, ಮೇಘನಾ, ದಾಕ್ಷಾಯಿಣಿ, ಮಂಜುಳಾ, ಯಶೋಧ, ಶ್ರೀದೇವಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಲತಾ ನಾಗರಾಜ್ ಲೋಕಿಕೆರೆ ಅವರಿಗೆ ಸಾಥ್ ನೀಡಿದ್ದರು.