ಗ್ರಾಮೀಣದಲ್ಲಿ ಲತಾ ನಾಗರಾಜ್ ಲೋಕಿಕೆರೆ ಮತ ಪ್ರಚಾರ

ದಾವಣಗೆರೆ.ಏ.೨೩ : ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರ ಪತ್ನಿ ಶ್ರೀಮತಿ ಲತಾ ನಾಗರಾಜ್ ಲೋಕಿಕೆರೆ ಪತಿ ಪರ ಬಿರುಸಿನ ಮತ ಪ್ರಚಾರ ನಡೆಸಿ, ಬೆಂಬಲವಾಗಿ ನಿಂತಿದ್ದಾರೆ.ಕಾಡಜ್ಜಿ ಗ್ರಾಮಕ್ಕೆ ನಾಗರಾಜ್ ಲೋಕಿಕೆರೆ ಅವರ ಜೊತೆಗೆ ತೆರಳಿ ಅಲ್ಲಿನ ಶ್ರೀ ಆಂಜನೇಯ ದೇವಸ್ಥಾನದಲ್ಲಿ ದಂಪತಿ ವಿಶೇಷ ಪೂಜೆ ಸಲ್ಲಿಸಿ, ಮತದಾರರ ಪ್ರತಿ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಿದರು. ಪಕ್ಷದ ಮಹಿಳಾ ಮುಖಂಡರು, ಪ್ರಮುಖರ ಜೊತೆಗೆ ಪ್ರಚಾರ ನಡೆಸಿ, ನಾಗರಾಜ್ ಲೋಕಿಕೆರೆ ಅವರನ್ನು ಬೆಂಬಲಿಸಿ ಗೆಲ್ಲಿಸುವಂತೆ ಮತದಾರರಲ್ಲಿ ಮತಯಾಚನೆ ಮಾಡಿದರು.ಮುಸ್ಲಿಂ ಕಾಲೋನಿ, ಎ.ಕೆ. ಕಾಲೋನಿ, ಲಿಂಗಾಯತ ಮತ್ತು ನಾಯಕರ ಬೀದಿ, ನಾಗರ ಕಟ್ಟೆ, ರಾಂಪುರ ಗ್ರಾಮಗಳಲ್ಲಿ ಮತಯಾಚಿಸಿದರು.ಈ ವೇಳೆ ಹೆಚ್.ಸಿ. ಜಯಮ್ಮ,  ತನುಶ್ರೀ, ಮೇಘನಾ, ದಾಕ್ಷಾಯಿಣಿ, ಮಂಜುಳಾ, ಗಾಯತ್ರಿ, ಯಶೋಧ, ಶ್ರೀದೇವಿ, ಜಿ.ಎಸ್. ಪರಶುರಾಮ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಲತಾ ನಾಗರಾಜ್ ಲೋಕಿಕೆರೆ ಅವರ ಜೊತೆಗೆ ಹಾಗೂ ಪ್ರತ್ಯೇಕವಾಗಿಯೂ ನಾಗರಾಜ್ ಲೋಕಿಕೆರೆ ಪರ ಮತ ಪ್ರಚಾರ ನಡೆಸಿದರು.ವಾರ್ಡ್ 32ರ ನಿಟುವಳ್ಳಿ ಹೊಸ ಬಡಾವಣೆಯಲ್ಲಿ ಪಾಲಿಕೆ ಸದಸ್ಯರಾದ ಉಮಾ ಪ್ರಕಾಶ್   ಮತ್ತು ಬಿಜೆಪಿ ಮುಖಂಡರೊಡನೆ ಮತಯಾಚಿಸಲಾಯಿತು.ಈ ವೇಳೆ ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.