ಗ್ರಾಮಾಭಿವೃದ್ದಿಗೆ ಸುವರ್ಣ ಗ್ರಾಮೋದಯ ಯೋಜನೆ ಪೂರಕ:ದರ್ಶನಾಪುರ

ಶಹಾಪುರ:ನ.12:ಗ್ರಾಮೀಣ ಪ್ರದೇಶದ ರಸ್ತೆ, ಚರಂಡಿ, ಸಮುದಾಯ ಭವನ, ಹೀಗೆ ಹತ್ತು ಹಲವು ರೂಪರೇಶಗಳನ್ನೊತ್ತು ಅನುಷ್ಠಾನಗೊಳ್ಳುವ ಸುವರ್ಣ ಗ್ರಾಮೋದಯ ಯೋಜನೆ ಗ್ರಾಮಾಭಿವೃದ್ದಿಗೆ ಪೂರಕವಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ತಾಲುಕಿನ ಚಂದಾಪುರ ಗ್ರಾಮದಲ್ಲಿ ಸುವರ್ಣ ಗ್ರಾಮೋದಯ ಯೋಜನಡಿಯಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಡಾ.ಬಾಬುಜೀವನರಾವ್ ಭವನ ಮತ್ತು ತಾಂಡಾ ಅಭಿವೃದ್ದಿ ನಿಗಮದಿಂದ ಅಭಿವೃದ್ದಿ ಯೋಜನಡಿಯಲ್ಲಿ ಚಂದಾಪುರ ಮೇಲಿನ ತಾಂಡಾದ ಸಂತ ಸೇವಾಲಾಲ ದೇವಸ್ಥಾನಕ್ಕೆ 5 ಲಕ್ಷ ರೂ ಸಂತ ಸೇವಾಲಾಲ ಭವನಕ್ಕೆ ಅಭಿವೃದ್ದಿಗೆ 12 ಲಕ್ಷ ರೂ ಸೇರಿದಂತೆ ವಿವಿಧ ಯೋಜನೆಗಳ ಕಾಮಗಾರಿ ಕಟ್ಟಡಗಳನ್ನು ಉಧ್ಘಾಟಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಸರ್ಕಾರದ ಯೋಜನೆಗಳು ಸದುಪಯೋಗಪಡಿಸಿಕೊಂಡಲ್ಲಿ ಆರ್ಥಿಕವಾಗಿ ಸದೃತೆ ಸಾಧ್ಯವೆಂದು ಅವರು ಕರೆ ನೀಡಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ ಅಧ್ಯಕ್ಷರಾದ ಹಣಮಂತ್ರಾಯ ದೊರಿ ವನದುರ್ಗಾ ವಹಿಸಿದ್ದರು. ಮುಖಂಡರಾದ ಶಿವಮಾಂತ ಚಂದಾಪುರ ಸೇರಿದಂತೆ ಗ್ರಾಮದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು. ಜಿಲ್ಲಾ ಪಂಚಾಯತ ಅಧಿಕಾರಿಗಳು ಹಾಜರಿದ್ದರು.