ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಭೆ

ಚಿತ್ರದುರ್ಗ.ಸೆ.೨೨; ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ವತಿಯಿಂದ  ಪ್ರಾಜೆಕ್ಟ್ ಪ್ರತಿನಿಧಿ ಅಭಿಯಾನದ ಅಡಿಯಲ್ಲಿ ಗ್ರಾಮ ಪಂಚಾಯಿತಿ ಸಮಿತಿ ರಚನೆ ಮಾಡುವ ಅಂಗವಾಗಿ, ಚಿತ್ರದುರ್ಗ ತಾಲ್ಲೂಕಿನ ಜಾನಕೊಂಡ ಮತ್ತು ಜೆ. ಎನ್. ಕೋಟೆ ಗ್ರಾಮಪಂಚಾಯಿತಿಗಳಲ್ಲಿ ಸಭೆ ನಡೆಸಲಾಯಿತು.ಈ ಕಾರ್ಯಕ್ರಮಗಳಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ  ಎಂ. ಕೆ. ತಾಜ್‌ಪೀರ್ ರವರು ಮತ್ತು 2018 ರ ಚಿತ್ರದುರ್ಗ ವಿದಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ರೀ ಹನುಮಲಿ ಷಣ್ಮುಖಪ್ಪ ರವರು ಮಾತನಾಡಿ ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಕೇಳುವ ಬಿಜೆಪಿಗರಿಗೆ ಯಾವುದೇ ಆಡಳಿತ ಜ್ಞಾನ ಇಲ್ಲವೆಂದು ಆಗ್ರಹ ವ್ಯಕ್ತ ಪಡಿಸಿದರು. ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ದೇಶದಲ್ಲಿ ಯೂನಿವರ್ಸಿಟಿಗಳು ಸ್ಥಾಪನೆಯಾಗಿವೆ, ಬೃಹತ್ ಡ್ಯಾಂಗಳು ಸ್ಥಾಪನೆಯಾಗಿವೆ, ರೋಟಿ ಔರ್ ಮಕಾನ್, ಉಳುವವನೇ ಒಡೆಯ ಎಂಬ ದೇಶ ಮೆಚ್ಚಿದ ಯೋಜನೆಗಳನ್ನು ಕೊಟ್ಟಿದ್ದು ಇಂದಿರಾಗಾಂಧಿಯವರ ನೇತೃತ್ವದ ಕಾಂಗ್ರೆಸ್, ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರ ದೇಶದಲ್ಲಿ ಆರಂಭಗೊಂಡಿರುವುದೇ ರಾಜೀವ್‌ಗಾಂಧಿ ರವರು ಪ್ರಧಾನಿಗಳಾಗಿದ್ದಂತಹ ಸಂದರ್ಭದಲ್ಲಿನ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ, ದೇಶದ ಹಳ್ಳಿ ಹಳ್ಳಿಗೂ ವಿದ್ಯುತ್ ಕೊಟ್ಟಿದ್ದು ಕಾಂಗ್ರೆಸ್, ದೇಶವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳು ನಿರ್ಮಾಣವಾಗಿರುವುದು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ, ಇಷ್ಟೇ ಅಲ್ಲದೇ ಇತಿಹಾಸ ಎಂದೂ ಮರೆಯಲಾಗದ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ಪಕ್ಷ ನೀಡಿರುವ ಕೊಡುಗೆಗಳು, ನೆನ್ನೆ ಮೊನ್ನೆ ಹುಟ್ಟಿಕೊಂಡ ಬಿಜೆಪಿ ಮರಿ ಪಕ್ಷಕ್ಕೆ ಈ ಎಲ್ಲಾ ಇತಿಹಾಸವನ್ನು ಅರಿಯಲು ಸಾಧ್ಯವಾಗೊಲ್ಲ, ಅನುಭವ ಕೊರತೆಯಿಂದ ಅಸ್ಥಿತ್ವವನ್ನೇ ಕಳೆದುಕೊಂಡಿರುವ ಬಿಜೆಪಿ ಪಕ್ಷ ಹೆಮ್ಮರದಂತಹ ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕೆ ಮಾಡುವ ಮುನ್ನ ಯೋಚಿಸಬೇಕು ಎಂದು ಆಗ್ರಹ ವ್ಯಕ್ತ ಪಡಿಸಿದರು.ಜಾನುಕೊಂಡದಲ್ಲಿ ನಡೆದ ಸಭೆಯಲ್ಲಿ 2018 ರ ಚಿತ್ರದುರ್ಗ ವಿದಾನಸಭಾ ಕಾಂಗ್ರೆಸ್ ಅಭ್ಯರ್ಥಿಗಳಾದ ಶಲ ಹನುಮಲಿ ಷಣ್ಮುಖಪ್ಪ, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ಪಿ. ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಬಿ.ಟಿ.ಜಗದೀಶ್, ನಗರ ಬ್ಲಾಕ್ ಅಧ್ಯಕ್ಷರಾದ ಯು. ಲಕ್ಷಿö್ಮಕಾಂತ್, ಕೆಪಿಸಿಸಿ ಸಹ ಸದಸ್ಯರಾದ ಗಂಜಿಗಟ್ಟೆ ಮಧು, ಮಾಜಿ ಬ್ಲಾಕ್ ಅಧ್ಯಕ್ಷರಾದ ಸೈಯದ್ ಅಲ್ಲಾಬಕಷ್, ಎಸ್.ಟಿ.ಸೆಲ್ ಅಧ್ಯಕ್ಷರಾದ ಹೆಚ್. ಅಂಜಿನಪ್ಪ, ಅಸಂಘಟಿತ ಕಾರ್ಮಿಕರ ಅಧ್ಯಕ್ಷರಾದ ಮೋಹನ್ ಪೂಜಾರಿ, ಇಂಟಕ್ ಅಧ್ಯಕ್ಷರಾದ ಆರ್. ಅಶೋಕ್ ನಾಯ್ಡು, ಜೆ.ಎನ್.ಕೋಟೆ ತಿಪ್ಪೇಸ್ವಾಮಿ, ಆರ್. ಗಂಗಾಧರ್, ಮೈನಾರಿಟಿ ಸೆಲ್ ಅಧ್ಯಕ್ಷರಾದ ಅಬ್ದುಲ್ಲ ಷಾವಲಿ, ಜೆ. ಮಂಜುನಾಥ್, ಗಂಜಿಗಟ್ಟೆ ಶಿವಣ್ಣ, ವಿಕಾಸ್, ಸಂದೀಪ್ ಗೌಡ ರವರು ಹಾಗೂ ಜೆ. ಎನ್. ಕೋಟೆಯಲ್ಲಿ ನಡೆದ ಸಭೆಯಲ್ಲಿ ಮತ್ತಿತರೆ ಜಿಲ್ಲೆಯ ಮುಖಂಡರು, ಸ್ಥಳೀಯ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.