ಗ್ರಾಮಾಂತರ ಕ್ಷೇತ್ರದಲ್ಲಿ ತಿಪ್ಪರಾಜು ಪರ ಭಾರೀ ಪ್ರಚಾರ

ರಾಯಚೂರು,ಏ.೨೭- ರಾಯಚೂರು ಗ್ರಾಮೀಣ ವಿಧಾನ ಸಭೆ ಕ್ಷೇತ್ರದ ಉಮಳಿಪನ್ನೂರು, ಸುಂಕೇಶ್ವರ ಗ್ರಾಮಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ತಿಪ್ಪರಾಜು ಹವಲ್ದಾರ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸಲಾಯಿತು.
ಹಾಲಿ ಕಾಂಗ್ರೆಸ್ ಶಾಸಕರು ಗ್ರಾಮಗಳಲ್ಲಿ ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ. ಆದ್ದರಿಂದ ಇಡೀ ಗ್ರಾಮಸ್ಥರು ಅವರನ್ನು ಬಹಿಸ್ಕಾರ ಮಾಡುತ್ತೇವೆ ಎಂದು ಘೋಷಣೆ ಕೂಗಿದರು. ತಿಪ್ಪರಾಜು ಹವಲ್ದಾರ ಅವರನ್ನು ಈ ಬಾರಿ ಶಾಸಕರನ್ನಾಗಿ ಆಯ್ಕೆ ಮಾಡುವುದು ನಿಶ್ಚಿತ ಎಂದು ಗ್ರಾಮದ ಮುಖಂಡರು ಹೇಳಿದರು.
ತಿಪ್ಪರಾಜು ಅವರ ಪರವಾಗಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಶಂಕರಗೌಡ ಮಿರ್ಜಾಪೂರ, ಉಮಾಕಾಂತ ಸಾಹುಕಾರ, ಅಮರೇಶ ಪಾಟೀಲ, ಕೆ.ಬಸವರಾಜ, ಶಿವಪ್ಪ, ವೆಂಕಟೇಶ ಉಪ್ಪಾರ, ಹಣಮಂತ್ರಾಯ ಪೂಜಾರಿ, ಉರಕುಂದ ತಳವಾರ, ಕೆ.ಶರಣಪ್ನ, ರಾಮನಗೌಡ ಶಿರವಾರ, ಮೌನೇಶ ವಕೀಲರು, ನಾರಾಯಣರಾವ್ ಕುಲಕರ್ಣಿ, ಜಗದೀಶ ವಕೀಲರು, ಶಾಂತಪ್ಪ ಕಪಗಲ್, ಗಜೇಂದ್ರ, ಈಶಪ್ಪಗೌಡ, ಹನಮೇಶ ನಾಯಕ, ರವಿಕುಮಾರ ಸಾದಾಪೂರ, ಮಹಾಂತೇಶ ನಾಯಕ, ಶಾಂತಪ್ಪ ಸಿಂಗಂ, ಗೋವಿಂದ ಸುಂಕೇಶ್ವರ ತಾಂಡ, ಮೌನೇಶ ಸುಂಕೇಶ್ವರ ತಾಂಡ, ಸೇರಿದಂತೆ ಹಿರಿಯರು ಪಕ್ಷದ ಕಾರ್ಯಕರ್ತರು ಇದ್ದರು.