ಗ್ರಾಮಸ್ಥರ, ಸದಸ್ಯರ ಸಹಕಾರದಿಂದ ಅಧ್ಯಕ್ಷ ಪಟ್ಟ  –  ಜರ್ಮಲಿ ದೊರೆ ಸಿದ್ದಪ್ಪನಾಯಕ.

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು.21 :- ಜರ್ಮಲಿ  ಗ್ರಾಮಪಂಚಾಯಿತಿ ಸದಸ್ಯರ ಹಾಗೂ ಗ್ರಾಮದ ಮುಖಂಡರ ಸಹಕಾರದಿಂದ ಜರ್ಮಲಿ ಪಾಳೇಗಾರ ರಾಜ ವಂಶಸ್ಥರಾದ ನಮಗೆ ಪ್ರಜಾಪ್ರಭುತ್ವದಲ್ಲಿ ಗ್ರಾಮಪಂಚಾಯಿತಿ  ಅಧ್ಯಕ್ಷ ಪಟ್ಟ ದೊರಕಿದೆ ಎಂದು ನೂತನ ಜರ್ಮಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಸಿದ್ದಪ್ಪನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬುಧವಾರ ಜರ್ಮಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಅವಿರೋಧ ಆಯ್ಕೆ ನಂತರ ಅಧ್ಯಕ್ಷ ಸ್ಥಾನ ಅಲಂಕರಿಸಿ ಮಾತನಾಡುತ್ತ ಪ್ರತಿಯೊಬ್ಬರ ಸಲಹೆ ಸೂಚನೆ ಪಡೆದುಕೊಂಡು ಪಂಚಾಯತಿಯ ಅಭಿವೃದ್ಧಿಗೆ ಮುಂದಾಗುವುದಾಗಿ ತಿಳಿಸಿದರು.
ರಾಜವಂಶಸ್ಥ ಜರ್ಮಲಿ ದೊರೆ ನೂತನ ಅಧ್ಯಕ್ಷ ಪಟ್ಟ ಅಲಂಕರಿಸಿದ ಸಂತಸದಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣದಂತೆ ಕಂಗೊಳಿಸಿತ್ತು ಅಲ್ಲದೆ ದೊರೆಗಳಿಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜರ್ಮಲಿ  ಗ್ರಾಮದ ಮುಖಂಡರಾದ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಜೆ ಸಿ ಧನುಂಜಯ, ಎಪಿಎಂಸಿ ಮಾಜಿ ಅಧ್ಯಕ್ಷ ಜೆ ಸಿ ಶಶಿಧರ, ಬಳ್ಳಾರಿ ಜಿಲ್ಲಾ ಎಸ್ಟಿ ಮೋರ್ಚಾ ಮಾಜಿ ಅಧ್ಯಕ್ಷರಾಗಿದ್ದ ಚಿತ್ರನಟ ಬಂಗಾರುಹನುಮಂತು ಸೇರಿದಂತೆ ಕೂಡ್ಲಿಗಿ ಪಟ್ಟಣದ ಜುಬೇರಾ, ರಾಘವೇಂದ್ರ, ಗುರುರಾಜ, ಕೊಲುಮೆಹಟ್ಟಿ ಸುರೇಶ ಸೇರಿದಂತೆ ಇತರಿದ್ದರು.