ಗ್ರಾಮಸಹಾಯಕ ಸೇವೆ ಖಾಯಂ ಮಾಡುವಂತೆ ಕಂದಾಯ ಸಚಿವರಿಗೆ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ 22 :  ರಾಜ್ಯದ ಕಂದಾಯ ಇಲಾಖೆಯಲ್ಲಿ  ಕಳೆದ 38 ವರ್ಷಗಳಿಂದ ಸೇವೆ ಸಲ್ಲಸುತ್ತಿರುವ 10450 ಗ್ರಾಮ ಸಹಾಯಕರನ್ನು “ಡಿ” ದರ್ಜೆ ನೌಕರರೆಂದು ಪರಿಗಣಿಸಿ ಸೇವೆ ಖಾಯಂಗೊಳಿಸುವಂತೆ ಕೋರಿ ನಿನ್ನೆ‌ ನಗರಕ್ಕೆ ಅಗಮಿಸಿದ್ದ
ಕಂದಾಯ ಸಚಿವ ಕೃಷ್ಣೇಭೈರೆಗೌಡರಿಗೆ ಮನವಿ ಸಲ್ಲಿಸಲಾಗಿದೆ. ಗ್ರಾಮ ಸಹಾಯಕರ ಸಂಘದ ರಾಜ್ಯ ಕಾರ್ಯದರ್ಶಿ ಕೋಟೆ ವೆಂಕಟೇಶ ಮನವಿ ಸಲ್ಲಿಸಿದ್ದಾರೆ.
1978 ಮತ್ತು 1982 ಆದೇಶದ ಅನ್ವಯ ಅಂದಿನ ಸರ್ಕಾರ ರಾಜ್ಯದಲ್ಲಿ 10450 ಗ್ರಾಮಸಹಾಯಕರ
ಹುದ್ದೆಯನ್ನು ಸೃಷ್ಟಿಸಿದೆ.ಕಾಲ ಕಾಲಕ್ಕೆ ಮುಂದುವರೆಸುತ್ತಾ ಬಂದು 2005 ಮತ್ತು 2007 ಆದೇಶದ ಅನ್ವಯ
10450 ಗ್ರಾಮ ಸಹಾಯಕ ಹುದ್ದೆಯನ್ನು ಕಂದಾಯ ಇಲಾಖೆಯಲ್ಲಿ ಗ್ರಾಮ
ಸಹಾಯಕ ಹುದ್ದೆ ಎಂದು ಘೋಷಣೆ ಮಾಡಿದೆ. ಕಳೆದ 50 ವರ್ಷಗಳಿಂದ ಪೀಳಗೆಯಿಂದ ಪೀಳಗೆಗೆ ಅಂದರೆ ಅಜ್ಜ ಸತ್ತರೆ ತಂದೆಗೆ, ತಂದೆ ಸತ್ತರ ಮಗನಿಗೆ ಹೀಗೆ ಎರಡು ತಲೆ ಮಾರಿನಿಂದ ಗ್ರಾಮ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ನಮಗೆ  ಐ.ಪಿ.ಎಲ್. ಸೌಲಭ್ಯ ಇಲ್ಲ ಬಿ.ಪಿ.ಎಲ್. ಕಾರ್ಡ್ ಹೊಂದಿದ ಕುಟುಂಬದವರು ಮರಣ ಹೊಂದಿದಾಗ ಸರ್ಕಾರದ ಶವ ಸಂಸ್ಕಾರದ ಸಲುವಾಗಿ 5 ಸಾವಿರ
ರೂಪಾಯಿಗಳನ್ನು ನೀಡುತ್ತಿದೆ.
ಅಂತಹವರನ್ನು ಗುರುತಿಸುವುದು ಗ್ರಾಮಸಹಾಯಕರು ಅದರೆ ಗ್ರಾಮ ಸಹಾಯಕರು ಮರಣ ಹೊಂದಿದಾಗ ಸರ್ಕಾರವು ಅವರಿಗೆ ಯಾವುದೇ ಪರಿಹಾರವನ್ನು ನೀಡುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಂಧರ್ಭದಲ್ಲಿ ಕಛೇರಿ ಶುದ್ದೀಕರಣ ಗ್ರಾಮ ಪರಿಸರ ಶುದ್ದೀಕರಣ, ಶಿಷ್ಟಚಾರಗಳು
ನಿರ್ವಹಣಿ, ನಿರ್ವಹಿಸುತ್ತಾ, ಬಂದಿದ್ದೇವೆ ಹಾಗೂ ಕಂದಾಯ ಇಲಾಖೆಯಲ್ಲಿನ ಎಲ್ಲಾ ಅಂಕಿ ಅಂಶಗಳನ್ನು ಪಟಪಟನೆ ತಿಳಿಸುತ್ತಾ ಸರ್ಕಾರಕ್ಕೆ ಮಾಹಿತಿ ನೀಡಲು ಮೂಲ ಪಾತ್ರರಾಗಿರುತ್ತೆವೆ. ಗ್ರಾಮದ ನಾಡಿಮಿಡಿತ. ಅರಿತವರಾಗಿದ್ದು, ಪ್ರತಿ ಗ್ರಾಮದಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಕೈ ಕೆಳಗೆ ಕಂದಾಯ ಇಲಾಖೆಯಲ್ಲಿ ವಹಿಸಿಕೊಟ್ಟು ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದೆವೆ.
ರಾಜ್ಯದಲ್ಲ ಗ್ರಾಮಸಹಾಯಕರ ಹುದ್ದೆ ಸರ್ಕಾರಿ ಕಂದಾಯ ಇಲಾಖೆಯಲ್ಲಿ ಮುಖ್ಯ ಮಾಹಿತಿದಾರರ ಹುದ್ದೆಯಾಗಿದ್ದು, ಇವರ ಹುದ್ದೆ ಅತಿ ಅವಶ್ಯಕವಾಗಿದ್ದು ಎಂದು ಈಗಿನ ಸರ್ಕಾರವು ರೂ: 13 ಸಾವಿರ ರೂ ವೇತನ
ನೀಡುತ್ತಿದ್ದು ಇದರಿಂದ  ಜೀವನ ನಿರ್ವಹಣೆ ಆಗುತ್ತಿಲ್ಲ. ಅದಕ್ಕಾಗಿ  ಗ್ರಾಮಸಹಾಯಕರನ್ನು ಗ್ರೂಫ್ ಡಿ” ನೌಕರರೆಂದು ಪರಿಗಣಿಸಿ ಸೇವೆಯನ್ನು ಖಾಯಂಗೊಳಸಬೇಕೆಂದು ಮನವಿ ಮಾಡಿದೆ.
ಈ ಸಂದರ್ಭ ವೆಂಕಟೇಶ್,ಕೋಟೆ ವೆಂಕಟೇಶ್, ಮಹೇಶ್, ರಾಮಾಂಜಿನಿ, ತಿಮ್ಮಪ್ಪ, ಚೌಡಪ್ಪ,, ಚಿದಾನಂದ, ಗಿರಿಯಪ್ಪ, ತಿಪ್ಪಸ್ವಾಮಿ ಮತ್ತಿತರ ಉಪಸ್ಥಿತರಿದ್ದರು.