ಗ್ರಾಮವಾಸ್ತವ್ಯದ ಮೂಲಕ ರೈತರಿಗೆ ನೆರವಾದ ಹೆಚ್ ಡಿ ಕುಮಾರಸ್ವಾಮಿಗೆ ಬೆಂಬಲಿಸಲು ಹೆಚ್ ಆನಂದಪ್ಪ ಮನವಿ

ದಾವಣಗೆರೆ. ಏ.೨೭; ಮಾಯಕೊಂಡ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಆನಂದಪ್ಪ ಅವರು ಇಂದು ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಾದ ಕಾರಿಗನೂರು ಕ್ರಾಸ್, ಕಾರಿಗನೂರು, ಅರಹಳ್ಳಿ,ಕದರನಹಳ್ಳಿ,ಕತ್ತಲಗೆರೆ,ಕೆ.ಶೆಟ್ಟಿಹಳ್ಳಿ,ಬೆಳಲಗೆರೆ,ಕುರುಬರಹಳ್ಳಿ,ರೆಡ್ಡಿಹಳ್ಳಿ,ಹಲಿರಪುರ,ಯಲೋದಹಳ್ಳಿ,ಮರಟನಹಳ್ಳಿ,ಕೊಟೇಹಾಳ್,ಹರೋಸಾಗರ, ಸಂಗಾಹಳ್ಳಿ
ಗ್ರಾಮಗಳಿಗೆ ತೆರಳಿ‌ ಮತಯಾಚಿಸಿದರು. ಹೆಚ್.ಡಿ ಕುಮಾರಸ್ವಾಮಿಯವರು ಮುಖ್ಯ ಮಂತ್ರಿಯಾಗಿದ್ದ ವೇಳೆ ಕೈಗೊಂಡಿದ್ದ ಗ್ರಾಮವಾಸ್ತವ್ಯ,ರೈತರ ಸಬಲೀಕರಣದಂತಹ ಕಾರ್ಯಗಳಿಂದ ಗ್ರಾಮೀಣ ಭಾಗದ ಅನೇಕ ಕಷ್ಟಗಳು ನಿವಾರಣೆಯಾಗಿದ್ದವು ಈ ಮೂಲಕ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷ ಜನರ ಮನೆಬಾಗಿಲಿಗೆ ಬಂದು ಜನರ ಕಷ್ಟ ನಿವಾತಿಸಲಿದೆ ಅದಕ್ಕಾಗಿ ಜನರು ಮತ್ತೊಮ್ಮೆ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಬೇಕೆಂದರು. ಪಂಚರತ್ನ ಯೋಜನೆಯಿಂದ ನಗರ ಹಾಗೂ ಗ್ರಾಮೀಣಭಾಗದ ಜನರು ಸಮೃದ್ದಿಯಿಂದ ಜೀವನ ನಡೆಸಲು ಸಾಧ್ಯ‌ಇಂತಹ ಅನೇಕ ಜನ ಪರ ಯೋಜನೆಗಳು ಜಾರಿಯಾಗಬೇಕಾದರೆ‌  ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧಿಕಾರದಲ್ಲಿರಬೇಕು ಎಂದರು.ಈ ವೇಳೆ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.