ಗ್ರಾಮಪಂಚಾಯ್ತಿ ಎರಡನೇ ಹಂತ ಶಾಂತಿಯುತ ಬಿರುಸಿ ಮತದಾನ

ಬಳ್ಳಾರಿ ಡಿ 27 : ರಾಜ್ಯದಲ್ಲಿ ಅತಿ ಹೆಚ್ಚು ಗ್ರಾಮ ಪಂಚಾಯ್ತಿ ಸದಸ್ಯರನ್ನು ಹೊಂದಿರುವ ಜಿಲ್ಲೆಗಳಲ್ಲಿ ಮೂರನೇ ಸ್ಥಾನ ಪಡೆದಿರುವ ಗಣಿನಾಡು ಬಳ್ಳಾರಿ ಜಿಲ್ಲೆಯಕಲ್ಲಿ ಸಹ ಇಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಿತು. ಮಧ್ಯಾಹ್ನ 2 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇ 63 ರಷ್ಟು ಮತದಾನವಾಗಿತ್ತು. ಸಂಜೆ 5 ವರೆಗೆ ಮತದಾಣ ನಡೆಯಲಿದ್ದು ಶೇ 80 ಕ್ಕೂ ಹೆಚ್ಚು ಮತದಾನವಾಗುವ ನಿರೀಕ್ಷೆ ಇದೆ.
ಮೊದಲ ಹಂತದಲ್ಲಿ ಡಿ.22 ರಂದು ಬಳ್ಳಾರಿ, ಹೊಸಪೇಟೆ, ಕಂಪ್ಲಿ, ಸಿರುಗುಪ್ಪ ಮತತು ಕುರುಗೋಡು ತಾಲೂಕಿನಲ್ಲಿ ಮತದಾಣ ನಡೆದಿತ್ತು. ಇಂದು ಜಿಲ್ಲೆಯ ಸಂಡೂರು, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹಗರಿಬೊಮ್ಮಹಳ್ಳಿ ಮತ್ತು ಹಡಗಲಿ ತಾಲೂಕಿನ 144 ಗ್ರಾಮ ಪಂಚಾಯ್ತಿಗಳ, 2564 ಸದಸ್ಯಸ್ಥಾನಗಳಿಗೆ ಚುನಾವಣೆ ನಡೆದಿದ್ದು. ಇದರಲ್ಲಿ 319 ಸದಸ್ಯರ ಅವಿರೋಧ ಆಯ್ಕೆಯಾಗಿದ್ದು 2 ಸ್ಥಾನಗಳಿಗೆ ನಾಂ ಪತ್ರ ಸಲ್ಲಿಕೆಯಾಗಿಲ್ಲ. ಉಳಿದ 2243 ಸ್ಥಾನಗಳಿಗೆ 1149 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. 2564 ಸದಸ್ಯಸ್ಥಾನಗಳಿಗೆ 5457 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಸುಗ್ಗಿ ಕಾಲ ಆಗಿರುವುದರಿಂದ ಬಿಸಿಲ ನಾಡಾಗಿದ್ದರೂ ಮಾಗಿಯ ಚಳಿಯಲ್ಲೂ ಮತದಾರರು ಮತಗಟ್ಟೆಗಳ ಮುಂದೆ ಮತದಾನ ಆರಂಭವಾಗುವ ಮುನ್ನವೇ ಆಸಕ್ತಿಯಿಂದ ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದು ದೃಶ್ಯ ಕಂಡು ಬಂತು.
ಮತಗಟ್ಟೆಗಳ ಮುಂದೆ ಮತದಾರರಿಗೆ ಥರ್ಮಲ್ ಚೆಕ್ ಮಾಡಿ, ಸ್ಯಾನಿಟೈಸರ್ ನೀಡಿ ಮಾಸ್ಕಧರಿಸಲು ಹೇಳಿ ಮತದಾನಕ್ಕೆ ಬಿಡಲಾಗುತ್ತಿದೆ. ವಿಕಲ ಚೇತನರಿಗೆ ಮತದಾನಕ್ಕಾಗಿ ಗಾಲಿ ಕುರ್ಚಿಯನ್ನು ವ್ಯವಸ್ಥೆ ಮಾಡಿತ್ತು. ಎಲ್ಲಾ ಮತಗಟ್ಟೆಗಳ ಮುಂದೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. 51 ಇತರೇ ಮತ್ತು 3 ಲಕ್ಷದ 76 ಸಾವಿರದ 976 ಮಹಿಳಾ ಮತದಾರರು ಸೇರಿದಂತೆ ಒಟ್ಟು 7 ಲಕ್ಷದ 63 ಸಾವಿರದ 774 .ಮತದಾರರು ಮತ ಚಲಾಹಿಸುವ ಹಕ್ಕು ಪಡೆದಿದ್ದಾರೆ.
ಈ ತಿಂಗಳ 30 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತಗಳ ಏಣಿಕೆ ಕಾರ್ಯ ನಡೆಯಲಿದೆ.
ಮೊದಲ ಹಂತದಲ್ಲಿ ನಡೆದಂತೆ ಬಹುತೇಖ ಹಳ್ಳಿಗಳಲ್ಲಿ ಮತದಾರರಿಗೆ ಹಣ, ಮಧ್ಯ, ವಿವಿಧ ರೀತಿಯ ಗಿಫ್ಟ್‍ಗಳನ್ನು ನೀಡಲಾಗಿದೆ. ಹೀಗೆ ನೀಡಿದ ಅಭ್ಯರ್ಥಿಗಳು ಸಹ ಇಂದು ಮತಗಟ್ಟೆ ಮುಂದೆ ನಿಂತು ತಮಗೆ ಮತ ನೀಡುವಂತೆ ಕೇಳುತ್ತಿದ್ದರು.