ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮವಹಿಸಿ

ಬಾದಾಮಿ, ಏ17: ತಾಲೂಕಿನ ಬಾಚಿನಗುಡ್ಡ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತ ವತಿಯಿಂದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಶೌಚಾಲಯ ನಿರ್ಮಾಣ, ಶಾಲಾ ಆವರಣವನ್ನು ಸಮತಟ್ಟು ಮಾಡುವದು ಮತ್ತು ಕಾಂಪೌಂಡ್ ಎತ್ತರಿಸುವ ರೂ.5 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರಿವೇರಿಸಲಾಯಿತು.
ಮುಖಂಡ ಕುಮಾರ ಯಡಪ್ಪನವರ ಮಾತನಾಡಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮದ ಸರ್ವಾಂಗಿಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಗ್ರಾಮವು ಅಭಿವೃದ್ಧಿ ಹೊಂದಲು ಸಾದ್ಯ ಅದರ ಜೊತೆಗೆ ಗ್ರಾಮದ ಗುರು ಹಿರಿಯರ ಮತ್ತು ಯುವಕರು ಸಹಕರಸಿ ಅವರಜೊತೆ ಕೈ ಜೋಡಿಸಬೇಕು. ಹಾಗೂ ಮೊದಲು ಊರಿನ ಶಾಲೆಯನ್ನು ಅಭಿವೃದ್ಧಿ ಪಡಿಸಿದರೆ ಗ್ರಾಮವು ಅಭಿವೃದ್ಧಿ ಹೊಂದಿದಂತೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪಂಚಯ್ಯ ಮಲ್ಲಪೂರ, ನೀಲಪ್ಪ ಹಾನಾಪೂರ, ರಂಗಪ್ಪ ಚೌಡಪ್ಪನವರ, ಗ್ರಾಮದ ಮುಖಂಡರಾದ ವೀರಪಾಕ್ಷಗೌಡ ಬಾಗಲತ್ತಿ ಮಾತನಾಡುತ್ತಾ ಗ್ರಾಮ ಪಂಚಾಯತ್ ಸದಸ್ಯರು ಒಗ್ಗೂಡಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚು ಹೆಚ್ಚು ಯೋಜನೆಗಳನ್ನು ಜಾರಿಗೆ ತರಲು ತಿಳಿಸಿದರು ಅಲ್ಲದೆ ಇದೆ ಮೊದಲ ಬಾರಿಗೆ ನಮ್ಮ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಇಲಾಖೆಯಿಂದ ಗ್ರಾಮ ಪಂಚಾಯತ್ ಸದಸ್ಯರು ಹಿರಿಯರನ್ನು ಆಹ್ವಾನಿಸಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಮಾಡಿದ್ದು ಸಂತೋಷಕರ ವಿಷಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ತಿಪ್ಪಣ್ಣ ಹಾನಾಪೂರ, ಲಕ್ಷ್ಮಣ ಹಾಲಿಗೇರಿ, ಈರಯ್ಯ ರೋಣದ, ಬಸವರಾಜ ಹಾನಾಪೂರ, ರುದ್ರಗೌಡ ರೋಣದ, ಕಳಕನಗೌಡ ಬಾವಿಕಟ್ಟಿ, ಕುಮಾರಯ್ಯ ಸ್ಥಾವರಮಠ, ಶಿವಪ್ಪ ಹಾಲಿಗೇರಿ, ಬಸವರಾಜ ಶಿವಪೂರ, ನಿಂಗಪ್ಪ ಹಾಲಿಗೇರಿ, ರಂಗಪ್ಪ ಹಾನಾಪೂರ, ಬಸು ಹಾಲಿಗೇರಿ, ಮಲಕಾಜಗೌಡ ಚನಗೌಡ್ರ, ನಾಗಯ್ಯ ಬಾಗಲತ್ತಿ, ಶಿವನಗೌಡ ಲಿಂಗನಗೌಡ್ರ, ಗೋಡಚಯ್ಯ ಹಿರೇಮಠ, ಪಕೀರಯ್ಯ ಕಿತ್ತಲಿ,ಈರಣ್ಣ ಕಿತ್ತಲಿ, ಕಳಕನಗೌಡ ರೋಣದ ಹಾಜರಿದ್ದರು.