ಗ್ರಾಮದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ

ಔರಾದ: ಜ. 8; ನಗರದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷ ಮಂಡಲದ ವತಿಯಿಂದ ಔರಾದ ಮತ್ತು ಕಮಲನಗರ ತಾಲ್ಲೂಕಿನ ನೂತನ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಸನ್ಮಾನಿಸಿ ಮಾತನಾಡಿದ ಮಾನ್ಯ ಪಶುಸಂಗೊಪನೆ,ಹಜ್ ವಕ್ಫ್ ಮತ್ತು ಬೀದರ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಭು ಚವ್ಹಾಣ ಅವರು ಜನರು ನಿಮ್ಮ ಮೇಲೆ ವಿಶ್ವಾಸ ಇಟ್ಟು ಆಯ್ಕೆ ಮಾಡಿದ್ದಾರೆ, ಆದ್ದರಿಂದ ಅವರ ನಿರೀಕ್ಷೆ ಮೀರಿ ಕೆಲಸ ಮಾಡಿ ತೋರಿಸಬೇಕು ಎಂದು ಸಲಹೆ ನೀಡಿದರು.

ನಿಮ್ಮ ಗ್ರಾಮಕ್ಕೆ ಬೆಕಾಗಿರುವ ಕಾಮಗಾರಿಗಳ ಪಟ್ಟಿ ನನ್ನ ಹತ್ತಿರ ತನ್ನಿ ಮತ್ತು ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು. ನೀರಿನ ಸಮಸ್ಯೆ ಚರಂಡಿನಿರ್ಮಾಣ ರಸ್ತೆಯ ಕಾಮಗಾರಿ ವಿದ್ಯುತ್ ಸಂಪರ್ಕ ಹೀಗೆ ಹತ್ತು ಹಲವು ಯೋಜನೆಗಳನ್ನು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಇದೆ ಸಂದರ್ಭದಲ್ಲಿ ಸಚಿವರ ಒಂದು ವರ್ಷದ ಸಾಧನೆಗಳನ್ನು ಪ್ರಸ್ತುತಪಡಿಸುವ ಮೂಲಕ

ಹೈದರಾಬಾದ ಕರ್ನಾಟಕ ಎಂದು ಕರೆಯುವ ಈ ಭಾಗವನ್ನು ಕಲ್ಯಾಣ ಕರ್ನಾಟಕವೆಂದು ಮರುನಾಮಕರಣ ಮಾಡಿದರು. ಗೋಹತ್ಯೆ ನಿಷೇಧ ಕಾಯಿದೆ ವಿಧೆಯಕ ಮಂಡನೆ.

12ನೇ ಶತಮಾನದ ವಿಶ್ವಗುರು ಬಸವ್ಣನವರ ಸಂಸತ ಮಾದರಿಯ ಅನುಭವ ಮಂಟಪಕ್ಕೆ ದಿ:,06/01/21ಬುಧುವಾರವಷ್ಟೆ ಸನ್ಮಾನ್ಯ ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಭೂಮಿ ಪೂಜೆ ನೆರವೇರಿತು.

ಬೀದರಿನ ರಂಗ ಮಂದಿರಕ್ಕೆ ಕನ್ನಡದ ಮಠ ಭಾಲ್ಕಿ ಶ್ರೀಗಳಾದ ಡಾ.. ಚನ್ನಬಸವ ಪಟ್ಟದೇವರ ಎಂದು ಹೆಸರಿಡಲಾಯಿತು.
ಹೀಗೆ ಹತ್ತಾರೂ ಅದ್ಭುತ ಕಾರ್ಯ ಗಳಿಗೆ ನಾಂದಿ ಹಾಡಿದ ಶ್ರೇಯಸ್ಸು ಜನಮೆಚ್ಚಿದ ಶಾಸಕ/ಸಚಿವರಾದ ಪ್ರಭು ಬಿ. ಚವ್ಹಾಣರಿಗೆ ಸಲ್ಲುತ್ತದೆ ಎಂದು ಪಕ್ಷದ ಕಾರ್ಯಕರ್ತರು ಮಾನ್ಯ ಸಚಿವರಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ ಎನ್.ಎಸ್.ಎಸ್.ಕೆ ಅಧ್ಯಕ್ಷರಾದ ಡಿ.ಕೆ.ಸಿದ್ರಾಮ್ ರವರು ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಟೊಣ್ಣೆ, ಮಂಡಲ ಅಧ್ಯಕ್ಷ ಶ್ರೀರಾಮಶೆಟ್ಟಿ ಪನ್ನಾಳೆ ಮತ್ತು ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.