ಗ್ರಾಮದ ಚರಂಡಿಗಳನ್ನು ಸ್ವಚ್ಚಗೊಳಿಸಲು ಒತ್ತಾಯ

ಲಿಂಗಸಗೂರು.ಮೇ.೦೪-ತಾಲೂಕಿನ ಸರ್ಜಾಪೂರ ಗ್ರಾಮದಲ್ಲಿ ಚರಂಡಿಗಳು ಹೂಳು ಮತ್ತು ಕೊಳಚೆಯಿಂದ ತುಂಬಿದ್ದು ದುರ್ನಾತ ಬರುತ್ತಿವೆ ಕೂಡಲೇ ಚರಂಡಿಗಳನ್ನು ಸ್ವಚ್ಚಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದ ಮುಖ್ಯರಸ್ತೆಯ ಎರಡುಚರಂಡಿಗಳು ನಾಯಕರ ಓಣಿಯಲ್ಲಿ ಹಾಗೂ ವಡ್ಡಟ್ಟಿಯವರ ಮನೆಯ ಹತ್ತಿರ ಇರುವ ಚರಂಡಿಗಳು ಕೊಳಚೆ ಹಾಗೂ ಕಸಕಡ್ಡಿಯಿಂದ ತುಂಬಿದ್ದು ಕೊಳಚೆ ನೀರಿನಿಂದ ಹಲವಾರು ರೋಗರುಜಿನಗಳು ಉಂಟಾಗುತ್ತಿವೆ ಕೊರೊನಾ ಇರುವ ಈ ಸಮಯಲ್ಲಿ ಜನತೆಗೆ ಇನ್ನು ತೊಂದರೆಯಾಗಲಿದೆ ಸದರಿ ಸಮಸ್ಯೆಯ ಬಗೆಗೆ ಗ್ರಾಮಪಂಚಾಯಿತಿ ಪಿಡಿಓ ಹಾಗೂ ಅಧ್ಯಕ್ಷರಿಗೆ ಮನವಿ ಮಾಡಿದರು ಇದುವರೆಗೂ ಯಾವುದೆ ಕ್ರಮ ಜರುಗಿಸಿರುವುದಿಲ್ಲ ಕೂಡಲೇ ಚರಂಡಿಯನ್ನು ಸ್ವಚ್ಚಗೊಳಿಸಲು ಪಿಡಿಓಗಳಿಗೆ ಸೂಚಿಸಬೇಕು ಇಲ್ಲವಾದರೆ ಆತನ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಮನವಿಯನ್ನು ಸಲ್ಲಿಸಿದರು.
ಈ ಸಮಯದಲ್ಲಿ ಗ್ರಾಮಸ್ಥರಾದ ದೇವಪ್ಪ ತಂ. ಕನಕಪ್ಪ ರಾಮಣ್ಣ ತಂ. ಶಿವರಾಯಪ್ಪ ಸೇರಿದಂತೆ ಇದ್ದರು.