ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ:ನಾಗೇಂದ್ರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.23:  ಗ್ರಾಮ ಪಂಚಾಯ್ತಿ ಅಧ್ಯಕ್ಷರಾದವರು  ಸರ್ಕಾರದಿಂದ ಜನತೆಗೆ, ಗ್ರಾಮಕ್ಕೆ ದೊರೆಯುವ  ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಮಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.
ಅವರು ತಾಲೂಕಿನ ಶಿಡಿಗಿನಮೊಳ ಗ್ರಾಮ ಪಂಚಾಯತಿ ಗೆ ನೂತನವಾಗಿ  ಅಧ್ಯಕ್ಷರಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ  ಆಯ್ಕೆಯಾದ ಪೂಜಾರಿ ರುದ್ರಯ್ಯ ಅವರಿಗೆ ಶುಭಕೋರಿದ ಶಾಸಕರು.‌
ಗ್ರಾಮಗಳ ಅಭಿವೃದ್ಧಿಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ವೆಂಕಟೇಶ್ ಪ್ರಸಾದ್, ವೆಂಕಟೇಶ್, ಹಗರಿ ಹೊನ್ನೂರಪ್ಪ, ಶ್ರೀರಾಮ್, ಗಿರೇಪ್ಪ  ಶಿಡಿಗಿನಮೊಳ ಗ್ರಾಮ ಪಂಚಾಯತಿ ಸದಸ್ಯರಾದ ಶಿವಾಜಿ, ಭೀಮಲಿಂಗ, ಎರ್ರಿಸ್ವಾಮಿ, ತಾಯಣ್ಣ, ತಿಮ್ಮಯ್ಯ, ಚಂದ್ರ, ಸೀನಾ, ಗಾದಿಲಿಂಗ, ಇಂದ್ರಸೇನಾರೆಡ್ಡಿ ಮತ್ತು ರಂಗ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.