ಗ್ರಾಮದೇವತೆಯ ಸಂಭ್ರಮದ ಜಾತ್ರೆ

ಗುಳೇದಗುಡ್ಡ,ಮೇ19: ಸಮೀಪದ ಹಳದೂರ ಗ್ರಾಮದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಡಗರ ಹಾಗೂ ಸಂಭ್ರಮದಿಂದ ಜರುಗಿತು. ಬುಧವಾರ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿಯ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಗ್ರಾಮದ ಪ್ರತಿ ಮನೆಯಿಂದ ಗ್ರಾಮದೇವತೆಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಭಕ್ತರು ಬಂಡಾರÀದಲ್ಲಿ ಮಿಂದೆದ್ದು ಭಕ್ತಿಭಾವ ಮೆರೆದರು. ಉದ್ಯೋಗ ಅರಸಿ ಬೇರೆ ಬೇರೆ ಕಡೆಗಳಲ್ಲಿ ಗುಳೇ ಹೋದವರು ಗ್ರಾಮದೇವತೆಯ ಜಾತ್ರೆಗೆ ಆಗಮಿಸಿ ಸಂಭ್ರಮಿಸಿದರು.
ಪೂಜಾರಿಗಳಾದ ಬಾಬು ಬಡಿಗೇರ, ಸಂಗಪ್ಪ ಬಡಿಗೇರ, ಗ್ರಾಮದ ಹಿರಿಯರಾದ ಚನ್ನಪ್ಪ ಮೇಟಿ, ಹುಚ್ಚಪ್ಪ ಕೆರಕಲಮಟ್ಟಿ, ಬಸಪ್ಪ ಮುಳ್ಳೂರ, ಯಲ್ಲನಗೌಡ ಗೌಡರ, ಸಂಗಪ್ಪ ಮುಳ್ಳೂರು, ದೇವರಾಯಪ್ಪ ಮೂಲಿಮನಿ, ಎಸ್.ಎಸ್. ಮಠ, ಸುಭಾಷ ಚಳ್ಳನ್ನವರ, ವೀರಬಸಪ್ಪ ಹುನಗುಂದ, ಭೀಮಪ್ಪ ಮಾಗಿ, ಯಲ್ಲಪ್ಪ ಕುರಿ, ಈರಪ್ಪ ಹುನಗುಂದ, ಹನಮಂತ ದಾಸರ, ನಾಗರಾಜ ಹುನಗುಂದ, ಗುರುರಾಜ ಅಂಗಡಿ ಸೇರಿದಂತೆ ಯುವಕರು, ಗ್ರಾಮಸ್ಥರು ಇದ್ದರು.