ಹುಬ್ಬಳ್ಳಿ,ಜು.12:ನಗರದ ಭಂಡಿವಾಡ ಅಗಸಿ ಜೈಭೀಮ ನಗರದ ಶ್ರೀ ಮರಿಯಮ್ಮದೇವಿ ದೇವಸ್ಥಾನ ಸೇವಾ ಟ್ರಸ್ಟ್ ದೇವಸ್ಥಾನದ ವತಿಯಿಂದ ಗ್ರಾಮದೇವತೆರಿಗೆ ಆಷಾಢಮಾಸದ ಅಂಗವಾಗಿ ಕೊನೆಯ ಮಂಗಳವಾರ ನವವಿಧ ಸ್ನಾನಗಳು, ಮಹಾಭಿಷೇಕ, ವಿಶೇಷ ಪುಷ್ಪಾಲಂಕಾರ ಗೈದು ಉದಯಪೂಜೆ ನೆರವೇರಿಸಲಾಯಿತು. ನಂತರ ಡೊಳ್ಳುಗಳು, ಜಾಂಜ್-ಮೇಳಗಳು, ಸುಮಂಗಲೆಯರ ಪೂರ್ಣಕುಂಭಗಳೊಂದಿಗೆ ಹೊರಟ ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ಪೂಜ್ಯ ಮಾತೋಶ್ರೀ ಅಮ್ಮನವರು ಚಾಲನೆ ನೀಡಿದರು.
ಬಮ್ಮಾಪೂರ ಓಣಿಯಲ್ಲಿರುವ ಗ್ರಾಮದೇವತೆಯರಾದ ಶ್ರೀ ದ್ಯಾಮವ್ವಾದೇವಿ ಮತ್ತು ಶ್ರೀ ದುರ್ಗವ್ವಾದೇವಿಯವರಿಗೆ ಹಾಗೂ ನಗರ ದೇವತೆಯರಿಗೆ ಉಡಿತುಂಬಿ ಎಣ್ಣೆ-ದೀಪ ಕೊಟ್ಟು ಪೂಜೆಗೈದು ಪುನ: ಮೂಲ ದೇವಸ್ಥಾನಕ್ಕೆ ಆಗಮಿಸಿದ ನಂತರ ದೇವಿಯವರಿಗೆ ಮಹಾಮಂಗಳಾರತಿ ನೆರವೇರಿಸಿ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಮಾತೋಶ್ರೀ ಅಮ್ಮನವರು ವಹಿಸಿದ್ದರು. ದೇವಸ್ಥಾನದ ಅಧ್ಯಕ್ಷರಾದ ವಿರುಪಾಕ್ಷಿ ಚಲವಾದಿ, ಹಿರಿಯರಾದ ಬಸನಗೌಡ್ರ ಪಾಟೀಲ, ಕುಮಾರಗೌಡ್ರ ಪಾಟೀಲ, ಬಸವರಾಜ ಪಾಟೀಲ, ಶಿವಾನಂದ ಜೇಕಿನಕಟ್ಟಿ, ಸತೀಶ ದೂಶಿ, ಮಹಾದೇವ ಪೂಜಾರ, ಬಸವರಾಜ ಕಠಾರೆ, ಪರಶುರಾಮ ಮುಸಳೆ, ಗುರುನಾಥ ಕ್ವಾಟಿ, ಮಧುಪ್ರಕಾಶ ಗದಗ, ಪರಶುರಾಮ ಹುನ್ನೂರ, ರಾಜಕುಮಾರ ನಾಗಮನ, ವಿರೇಶ ಕೊರ್ಲಗುಂದಿ, ರವಿಕುಮಾರ ಮಡ್ಡಿ, ಟ್ರಸ್ಟ್ ಪದಾಧಿಕಾರಿಗಳು, ಓಣಿಯ ಹಿರಿಯರು, ಮಹಿಳೆಯರು, ಕುಲ-ಭಾಂದವರು ಸೇರಿದಂತೆ ಸಾವಿರಾರು ಜನರು ಸದ್ಭಕ್ತರು ಉಪಸ್ಥಿತರಿದ್ದರು.