ಗ್ರಾಮದೇವತೆಗೆ ಚಿನ್ನದ ಸರ ಅರ್ಪಣೆ

ತಾಳಿಕೋಟೆ:ಜು.26:ಸ್ಥಳೀಯ ಶ್ರೀ ದ್ಯಾಮವ್ವದೇವಿ(ಗ್ರಾಮದೇವಿ)ಗೆ ಈ ಹಿಂದೆ ಹರಕೆ ಹೊತ್ತಿದ್ದ ತಾಳಿಕೋಟೆ ಪಟ್ಟಣದ ಉಮರಸಿಂಗ್ ಉದಯಸಿಂಗ್ ಹಜೇರಿ ಅವರು ಸೋಮವಾರರಂದು ಶ್ರೀ ಗ್ರಾಮದೇವಿ ಮಂದಿರಕ್ಕೆ ಆಗಮಿಸಿ ಚಿನ್ನದ ಸರ(ಮೇಲಗುಂಡ) ವನ್ನು ಅರ್ಪಣೆ ಮಾಡಿ ಹರಕೆ ತೀರಿಸಿದರು.

ಈ ಸಮಯದಲ್ಲಿ ಮಾತನಾಡಿದ ಉಮರಸಿಂಗ್ ಹಜೇರಿ ಅವರ ಧರ್ಮ ಪತ್ನಿ ಸೌಭಾಗ್ಯವತಿ ಸುನಂದಾಬಾಯಿ ಉಮರಸಿಂಗ್ ಹಜೇರಿ ಅವರು ಮಾತನಾಡಿ ತಮ್ಮ ಮಕ್ಕಳ ಶ್ರೇಯೋಭಿವೃದ್ದಿಗಾಗಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯಲಿ ಎಂದು ಆಸೆ ಹೊತ್ತು ಶ್ರೀ ದೇವಿಯ ಕೃಪಾಶಿರ್ವಾದಕ್ಕೆ ತಲೆಭಾಗಿ ನಮ್ಮ ಹರಕೆ ಪೂರ್ಣಗೊಂಡರೆ ಚಿನ್ನದ(ಮೇಲಗುಂಡ)ನ್ನು ಹಾಕಿ ಹರಕೆ ತೀರಿಸುತ್ತೇನೆಂಬ ಆಡಿದ ಮಾತು ಇಂದು ಪೂರ್ಣಗೊಂಡಿದೆ ಆದರೂ ಶ್ರೀ ದೇವಿಯ ಆಶಿರ್ವಾದ ನಮ್ಮ ಮನೆತನಕ್ಕೆ ನಮ್ಮ ಎಲ್ಲ ಜನತೆಗೆ ಸದಾ ಇರಲಿ ಎಲ್ಲರೂ ಸಂಪತ್ ಬರೀತ ಸಮೃದ್ದಿಯಿಂದ ಬಾಳಲೆಂಬ ನನ್ನ ಆಸೆಯಾಗಿದೆ ಎಂದರು.

ಈ ಸಮಯದಲ್ಲಿ ಅರ್ಚಕರಾದ ಮುದಕಣ್ಣ(ಶ್ರೀಶೈಲ) ಬಡಿಗೇರ ಅವರು ಈ ಭಕ್ತಾಧಿಗಳು ತಂದ ಚಿನ್ನದ(ಮೇಲಗುಂಡ) ಸರ್ ಶ್ರೀ ದೇವಿಗೆ ಹಾಕಿ ಆರತಿಗೈದು ಭಕ್ತರಿಗೆ ಮಹಾಪ್ರಸಾದ ನೀಡಿ ಆಶಿರ್ವದಿಸಿದರು.

ಈ ಸಮಯದಲ್ಲಿ ಅರ್ಚಕರಾದ ಸಿದ್ದಣ್ಣ ಬಡಿಗೇರ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಮೊದಲಾದವರು ಉಪಸ್ಥಿತರಿದ್ದರು.