ಗ್ರಾಮದಲ್ಲಿ ಸ್ವಚ್ಚತಾ ಆಂದೋಲನಾ ಕಾರ್ಯಕ್ರಮ


ಹೊಸಪೇಟೆ ಜು.17: ಹೊಸಪೇಟೆ ತಾಲ್ಲೂಕಿನ ಡಾಣಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ) ಹಾಗೂ ಬೆಂಗಳೂರಿನ ಸಿಡಿಡಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ “ಸ್ವಚ್ಛತಾ ಆಂದೋಲನ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಡಾಣಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಇ.ಲಕ್ಷಿದೇವಿ ಅವರು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರು ಶೌಚಾಲಯ ಬಳಸಬೇಕು ಬಯಲು ಶೌಚದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪರಿಸರ ಆನೈರ್ಮಲ್ಯದಿಂದ ವಾಂತಿ ಬೇಧಿ ಪ್ರಕರಣಗಳು ಉಂಟಾಗುತ್ತಿವೆ, ಮನೆಯ ಕಸವನ್ನು ಅಲ್ಲಿಯೇ ಹಸಿ ಕಸ ಮತ್ತು ಒಣ ಕಸ ಎಂದು ಬೇರ್ಪಡಿಸಿ ಕಾಂಪೋಸ್ಟ ಮಾಡಬೇಕು ಒಣ ಕಸವನ್ನು ಗ್ರಾಮ ಪಂಚಾಯತಿಯಿಂದ ಬರುವ ಸ್ವಚ್ಚತಾ ವಾಹಿನಿ ನೀಡಬೇಕು, ಜೊತೆಗೆ ಸಮುದಾಯ ಶೌಚಾಲಯ ನಿರ್ಮಾಣ ಮಾಡಬೇಕು, ಶಾಲಾ ವಿದ್ಯಾರ್ಥಿಗಳು ಮನೆಯಲ್ಲಿ ಪಾಲಕರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಿದರು .
ಇದೇ ಸಂಧರ್ಭದಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸ್ವಚ್ಚ ಭಾರತ್ ಜಿಲ್ಲಾ ಎಂ.ಐ.ಎಸ್ ಸಮಾಲೋಚಕರು ಅಂಬೀಶ್ವರ, ಆರ್.ಕೆ.ರೂರ್ಬನ್, ಸಮಾಲೋಚಕರು ಶಿವಕುಮಾರ .ಎನ್, ಆರ್.ಎಲ್.ಎಮ್.ಪ್ರಸನ್ನಕುಮಾರ ಮತ್ತು ಸಿಡಿಡಿ ಸಂಸ್ಥೆಯವರು ಹಾಗೂ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಶಾಲಾ ಮುಖ್ಯೋಪಾದ್ಯಯರು, ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಸೇರಿದಂತೆ ಇತರರು ಪಾಲ್ಗೊಂಡಿದ್ದರು.

One attachment • Scanned by Gmail