ಕಾಳಗಿ:ಜು.30: ತಾಲ್ಲೂಕಿನ ರಟಕಲ್ ಪೆÇಲೀಸ್ ಠಾಣೆಯಲ್ಲಿ ಸಿಪಿಐ ವಿನಾಯಕ ಅವರ ಸಮ್ಮುಖದಲ್ಲಿ ಶುಕ್ರವಾರ ಮೊಹರಂ ಹಬ್ಬದ ನಿಮಿತ್ತ ಗ್ರಾಮಸ್ಥರೊಂದಿಗೆ ಶಾಂತಿ ಸಭೆ ಜರುಗಿತು.
ಈ ವೇಳೆ ಮಾತನಾಡಿದ ಸಿಪಿಐ ವಿ ವಿನಾಯಕ, ಚಿಂಚೋಳಿ ಡಿವೈಎಸ್ಪಿ ಅವರ ಸಹಯೋಗದೊಂದಿಗೆ ಎಸ್.ಪಿ ಅವರು ಗ್ರಾಮಸ್ಥರಿಗೆ ನೀಡಿರುವ ಭರವಸೆ ಈಡೇರಿಸಲಾಗಿದೆ. ರಟಕಲ್ ಗ್ರಾಮದ ಸೌಹಾರ್ದತೆಯ ಗ್ರಾಮವಾಗಿದ್ದು, ಹಿಂದೂ ಮುಸ್ಲಿಂ ಎಂಬ ಬೇಧ ಭಾವ ಇಲ್ಲದೆ ಅನ್ಯೋನ್ಯತೆಯಿಂದ ಇರುವ ಗ್ರಾಮವಾಗಿದೆ. ಈ ಸೌಹಾರ್ದತೆಯನ್ನು ಉಳಿಸಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಭೆಯಲ್ಲಿ ಕರೆ ನೀಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ಗ್ರಾಮಸ್ಥರಾದ ಶರಣಬಸಪ್ಪ ಮಮಶೇಟಿ ಮಾತನಾಡಿ ರೇವಣಸಿದ್ದೇಶ್ವರ ಪಾದಾರ್ಪಣೆ ಮಾಡಿರುವ ಗ್ರಾಮ, ಇಲ್ಲಿ ಶಾಂತಿ ಮತ್ತು ಬಾಂಧವ್ಯ ಹೆಚ್ಚಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಠಾಣೆಯ ಪಿಎಸ್‍ಐ ಚಂದ್ರಕಾಂತ ಸಭೆಯನ್ನು ಉದ್ದೇಶಿ ಮಾತನಾಡಿ ಶಾಂತಿಯುತ ಹಬ್ಬ ಆಚರಣೆಗಾಗಿ ಬಂದೋಬಸ್ತ್ ಮತ್ತು ಸಮಸ್ಯೆಗಳು ಮುಕ್ತವಾಗಿ ಹಂಚಿಕೊಳ್ಳಲು ಆಹ್ವಾನಿಸಿ, ಗ್ರಾಮಸ್ಥರೆಲ್ಲರು ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವಲಿ ಹೆಜ್ಜೆ ಹಾಕೋಣ. ಪೆÇಲೀಸ್ ಇಲಾಖೆ ಸರ್ವರಿಗೂ ಸಮಾನವಾಗಿ ಕಾಣುತ್ತದೆ. ಪೆÇಲೀಸರ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಳ್ಳಬೇಡಿ ಎಂದರು.
ಈ ಸಂದರ್ಭದಲ್ಲಿ ಮೊದ್ದೀನ್ ಸಾಬ್, ಚಿಕಾಶಿ ಈರಣ್ಣ, ಮೊಹ್ಮದ್ ರಫೀಕ್, ಶಿವರಾಯ (ಜೆಜಿ ಮುತ್ಯ), ಮಸ್ತಾನ್ ಸಾಬ್ ಜೀವಣಗಿ, ಅಣಕಲ್ ಮುಗ್ರ್ಯಣ, ನದಿಂಮ್ ಸಾಬ್ ಕೋರ್ಬಾ, ಮಡಕಿ ಮತಾಬ್ ಸಾಬ್, ಕಾಶಪ್ಪಾ, ನಸೀರ್ ಕಟ್ಟೋಳಿ, ಮಹೆಮೂದ್, ಲಾಲ್ ಸಾಬ್ ಜೀವಣಗಿ, ಮಡಕಿ ಜೀಲಾನಿ ಸೇರಿದಂತೆ ಹಲವರು ಇದ್ದರು.