ಗ್ರಾಮಗಳ ಸಂರ್ವಾಂಗೀಣ ಅಭಿವೃದ್ಧಿಗೆ ಶ್ರಮ ವಹಿಸಿ


ಸವಣೂರ,ಜ.6- ಚುನಾಯಿತ ಪ್ರತಿನಿಧಿಯಾಗಲೂ ಒಂದು ಮತ ಕೂಡ ಅತ್ಯಂತ ಮಹತ್ವದ್ದಾಗಿದ್ದು, ಮತದಾರರ ಆಶೋತ್ತರಗಳಿಗೆ ಸ್ಪಂಧಿಸಿ ಎಂದು ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ ಹೇಳಿದರು.
ತಾಲೂಕಿನ ತೊಂಡೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಕಲ್ಮಠದ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಸತೀಶ್ ನೂಲ್ವಿ ಬಂಧುಗಳ ಸಹಯೋಗದಲ್ಲಿ ನೂತನವಾಗಿ ಚುನಾಯಿತರಾದ ಗ್ರಾಮ ಪಂಚಾಯತಿ ಸದಸ್ಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಅಭಿನಂಧನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರ್ಕಾರದಿಂದ ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಜನರಿಗೆ ಒದಗಿಸಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಾಗ ಮಾತ್ರ ಜನ ಮನ್ನಣೆ ಗಳಿಸಲು ಸಾಧ್ಯವಾಗಲಿದೆ. ಆದ್ದರಿಂದ ನೂತನ ಸದಸ್ಯರು ಅವರಿವರೆನ್ನದೇ ಎಲ್ಲರೂ ನಮ್ಮವರೆ ಎಂಬ ಜ್ಯಾತ್ಯಾತೀತ ಮನೋಭಾವ ಬೆಳೆಸಿಕೊಂಡು ಸೋತವರನ್ನು ಕೂಡಾ ಒಗ್ಗೂಡಿಸಿಕೊಂಡು ಜನ ಪರ ಅಭಿವೃದ್ಧಿ ಕಾರ್ಯ ಕೈಗೊಳ್ಳಿ ಎಂದು ಕಿವಿ ಮಾತು ಹೇಳಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ದಡ್ಡೂರ ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ಸದಸ್ಯರಿಗೆ ಸನ್ಮಾನದೊಂದಿಗೆ ಕೆಲವು ಜವಾಬ್ದರಿಗಳನ್ನು ಸಹ ನೀಡಿದ್ದು, ಸದಸ್ಯರು ತೊಂಡೂರ ಗ್ರಾಮವನ್ನು ರಾಜ್ಯದಲ್ಲಿ ಮಾದರಿಯಾಗಿಸಿ ಜ್ಯಾತ್ಯಾತೀತವಾಗಿ ಎಲ್ಲರಿಗೂ ನ್ಯಾಯ ಒದಗಿಸಿಕೊಡಬೇಕು. ರೈತರ ಸಮಸ್ಯೆಗೆ ಸ್ಪಂಧಿಸುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ತೊಂಡೂರ ಗ್ರಾ.ಪಂ ನೂತನ ಸದಸ್ಯರಾದ ನಂದೀಶ ಗೊಡ್ಡೆಮ್ಮಿ, ಶಿವಬಸಪ್ಪ ಮರಡೂರ, ಗಿರೀಶ ಅಂಗಡಿ, ಪ್ರಕಾಶ ಹಡಪದ, ದಾದಾಪೀರ ಕರ್ಜಗಿ, ಕವಿತಾ ಮಾಳಪ್ಪನವರ, ತಾಹೇರಾಬಿ ಬಾಣಿ, ಜೈತುನ್‍ಬಿ ಕರ್ಜಗಿ, ಪಾರ್ವತಿ ಗುಳಪ್ಪನವರ, ಲಕ್ಷ್ಮವ್ವ ಬಂಡಿವಡ್ಡರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕಾಧ್ಯಕ್ಷ ಚನ್ನಪ್ಪ ಮರಡೂರ, ಪದಾಧಿಕಾರಿಗಳಾದ ಸತೀಶ ದೇವಸೂರ, ಶೇಖಪ್ಪ ತಳವಾರ, ಜಗದೀಶ ಹಡಪದ, ಶಶಿಕುಮಾರ ಆಲದಕಟ್ಟಿ ಹಾಗೂ ತೊಂಡೂರ ಗ್ರಾಮದ ಪ್ರಮುಖರು ಗುರು-ಹಿರಿಯರು ಸೇರಿದಂತೆ ಇತರರು ಇದ್ದರು. ಶಿಕ್ಷಕ ಮಹೇಶ ಆಲದಕಟ್ಟಿ ಸ್ವಾಗತಿಸಿ, ನಿರ್ವಹಿಸಿದರು, ಅಮೃತಪ್ಪ ಅಂಗಡಿ ವಂದಿಸಿದರು.