ಗ್ರಾಮಗಳ ಉದ್ಧ್ದಾರಕ್ಕೆ ಗಾಂಧೀಜಿ ಕೊಡುಗೆ ಅಪಾರ: ಪ್ರೊ.ವಿಷ್ಣು ಶಿಂದೆ

ವಿಜಯಪುರ:ಜು.6: ಭಾರತ ಒಂದು ಹಳ್ಳಿಗಳ ದೇಶ. ಹಳ್ಳಿಗಳಲ್ಲಿ ಬದಲಾವಣೆ ಕಷ್ಟ ಸಾಧ್ಯ. ಆದರೆ ಗ್ರಾಮಗಳ ಉದ್ಧಾರಕ್ಕಾಗಿ ಗಾಂಧೀಜಿಯವರು ಇಡೀ ಜೀವನ ಕಳೆದರು ಎಂದು ಮಹಿಳಾ ವಿವಿಯ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವಿಷ್ಣು ಶಿಂಧೆ ಹೇಳಿದರು.
ಇಲ್ಲಿಗೆ ಸಮೀಪದ ಹಿಟ್ಟಿನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ ಮತ್ತು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಎನ್‍ಎಸ್‍ಎಸ್ ಮುಕ್ತ ಹಾಗೂ ಬ ಘಟಕದ ವತಿಯಿಂದ ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ “ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಮಹತ್ವ” ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ದೇಶದ ಜೀವನಾಡಿ ಹಳ್ಳಿಗಳು. ಹಳ್ಳಿಗರ ಮನಸ್ಥಿತಿ ಬದಲಾವಣೆ ಮಾಡುವುದು ಕಷ್ಟ. ಗ್ರಾಮೀಣ ಭಾಗಗಳಲ್ಲಿ ನೀಡುವ ಶಿಕ್ಷಣ ಪದ್ಧತಿ ಬದಲಾಗಬೇಕು. 100ರಲ್ಲಿ 18 ಪ್ರತಿಶತ ಮಾತ್ರ ಮಹಿಳೆಯರು ಉನ್ನತ ಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಕಾರಣ ಪ್ರಾಥಮಿಕ ಶಿಕ್ಷಣದ ನಂತರ ಹೆಚ್ಚಿನ ಮಟ್ಟದಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗವುದೇ ಇಲ್ಲ ಎಂದು ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ್ದ, ಎಸ್‍ಬಿಐ ಬ್ಯಾಂಕ್‍ನ ಮ್ಯಾನೇಜರ್ ಸಂತೋಷ ಕುಲಕರ್ಣಿ ಮಾತನಾಡಿ, ಆರ್ಥಿಕ ಶಿಕ್ಷಣದ ಬಗ್ಗೆ ನಮಗೆ ಮಾಹಿತಿ ಇರಬೇಕು. ಸರ್ಕಾರ ಪ್ರತಿಯೊಬ್ಬ ಮಗುವಿಗೂ ಒಂದೊಂದು ಬ್ಯಾಂಕ್‍ನಲ್ಲಿ ಖಾತೆ ತೆಗೆಯುತ್ತಿದೆ. ಇದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೂಡ ಅವರಿಗೆ ತಲುಪಿಸುತ್ತಿದೆ. ಸಾಮಾಜಿಕ ಸುರಕ್ಷಿತ ಯೋಜನೆಗಳ ಬಗ್ಗೆ ಸವಿವರವಾಗಿ ವಿವರಿಸಿದರು.
ಹಣವನ್ನು ಹೇಗೆ ಗಳಿಸಬೇಕು, ಉಳಿಸಬೇಕು, ಉಳಿಸಿದ ಹಣ ಹೇಗೆ ಬೆಳೆಸಬೇಕು ಎಂದು ಅತಿಥಿಗಳಾಗಿ ಆಗಮಿಸಿದ್ದ, ಎಸ್‍ಬಿಐ ಬ್ಯಾಂಕ್‍ನ ಆರ್ಥಿಕ ಸಾಕ್ಷರತೆ ಸಲಹೆಗಾರ ಐಎಸ್‍ಎಸ್ ಚಿಮ್ಮಲಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಸಮಾಜ ಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಂ.ಪಿ. ಬಳಿಗಾರ ಮಾತನಾಡಿ, ಮಹಾತ್ಮ ಗಾಂಧಿ ಜನರ ಸೇವೆ ಮಾಡುತ್ತಿದ್ದರು. ಅವರನ್ನು ಮಹಾತ್ಮ ಎಂದು ಕರೆದರು. ಎನ್‍ಎಸ್‍ಎಸ್ ಸ್ವಯಂಸೇವಕಿಯರು ನೀವು ಈ ಗ್ರಾಮದ ಸೇವೆ ಮಾಡಿದ್ದೀರಿ. ನೀವು ಕೂಡ ಒಂದು ರೀತಿ ಮಹಾತ್ಮರೆ ಎಂದರು.
ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಕೆಲಸ ಮಾಡುವ ಕೈಗಳು ಶ್ರೇಷ್ಠ ಎಂದು ಸ್ವಾಮಿ ವಿವೇಕಾನಂದರ ಮಾತನ್ನು ಡಾ.ಬಳಿಗಾರ ನೆನಪಿಸಿದರು.
ಹಳ್ಳಿಯಲ್ಲಿ ಕಲಿತ ಮಕ್ಕಳು ಇಂದು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಹಲವಾರು ಕ್ಷೇತ್ರಗಳ ಸಾಧನೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರಿಗೆ ಸ್ಫೂರ್ತಿದಾಯಕ ಮಾತುಗಳನ್ನು ಹೇಳಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕರಾದ ಡಾ.ತಹಮೀನಾ ನಿಗಾರ ಸುಲ್ತಾನಾ, ಡಾ.ಅಮರನಾಥ ಪ್ರಜಾಪತಿ, ಹಿಟ್ಟಿನಹಳ್ಳಿ ಗ್ರಾಮದ ಯುವ ಮುಖಂಡರು ಮತ್ತು ವಿವಿಯ ಮುಕ್ತ ಮತ್ತು ಬ ಘಟಕದ ಸ್ವಯಂಸೇವಕಿಯರು ಉಪಸ್ಥಿತರಿದ್ದರು.
ಸ್ವಯಂ ಸೇವಕಿಯರಾದ ನೀಲಮ್ಮ ಹೊಸಮನಿ ಸ್ವಾಗತಿಸಿದರು. ಶೃತಿ ಕಾಂಬಳೆ ಮತ್ತು ಜ್ಯೋತಿ ತೇಲಸಂಗ ಅತಿಥಿಗಳನ್ನು ಪರಿಚಯಿಸಿದರು. ಲಕ್ಷ್ಮೀ ಬಾಗಲಕೋಟಿ ನಿರೂಪಿಸಿದರು. ಮಹಾಲಕ್ಷ್ಮೀ ವಂದಿಸಿದರು.