ಗ್ರಾಮಗಳ ಉದ್ದಾರವೇ ದೇಶ ಸೇವೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಆ.3: ದೇಶ ಸೇವೆ ಎಂದರೆ ಕೇವಲ ಮಿಲಿಟರಿ ಸೇವೆ ಸೇರುವವುದಷ್ಟೇ ಅಲ್ಲ. ಸ್ಥಳೀಯವಾಗಿಯೇ ಇದ್ದುಕೊಂಡು ಎನ್. ಎಸ್. ಎಸ್ ನಂಥ ಸ್ವಯಂ ಸೇವೆ, ಗ್ರಾಮಗಳ ಉದ್ಧಾರ ಮಾಡುವುದರ ಮೂಲಕವು ದೇಶ ಸೇವೆ ಮಾಡಬಹುದು ಎಂದು ಬಿ. ಎಲ್. ಡಿ. ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಜಿ. ಪೂಜಾರಿ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.. ಸಿ. ಪಿ ವಿಜ್ಞಾನ ಮಹಾವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ರಾಷ್ಟ್ರೀಯ ಸೇವಾ ಯೋಜನೆಯ ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯಡಿ ಕನ್ನಾಳ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೊಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶ ಸೇವೇ ಈಶ ಸೇವೆ ಎಂಬಂತೆ ದೇಶ ಸೇವೆ ಎಂದರೆ ಕೇವಲ ಸೈನ್ಯಕ್ಕೆ ಸೇರುವುದಲ್ಲ. ಬದಲಿಗೆ ಸ್ಥಳೀಯವಾಗಿ ಇದ್ದುಕೊಂಡು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಎನ್ ಎಸ್ ಎಸ್ ಸ್ವಯಂ ಸೇವೆಯಿಂದ ಸಾಧ್ಯವಾಗುತ್ತದೆ. ನಮ್ಮ ಮುಂದಿನ ಉತ್ತಮ ಭವಿಷ್ಯತ್ತಿಗೆ ಉತ್ತಮವಾದ ಪರಿಸರ ವಾತಾವರಣ, ನಮ್ಮ ವ್ಯಕ್ತಿತ್ವ, ಜೀನವದ ಮೌಲ್ಯಗಳು ಇಮ್ಮಡಿಗೊಳ್ಳಲು ಇದೊಂದು ಪ್ರಮುಖ ವೇದಿಕೆಯಾಗಿದೆ ಎಂದು ಅವರು ಹೇಳಿದರು.
ನಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಲು ಹಲವಾರು ಮಹಾನ್ ನಾಯಕರು ಪ್ರೇರಕವಾಗಿದ್ದಾರೆ. ಮಾಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನು ನಾವು ಸ್ಮರಿಸಬಹದು ಎಂದು ಅವರು ಹೇಳಿದರು.
ಇಂದಿನ ಯುವಕರು ಇಂಥ ವ್ಯಕ್ತಿತ್ವ ವಿಕಸನಗೊಳ್ಳುವ, ಜೀವನದ ಮೌಲ್ಯಗಳನ್ನು, ಸ್ವಚ್ಛತೆ ಅಲ್ಲದೆ ಶಿಸ್ತು, ಅಳವಡಿಸಿಕೊಳ್ಳಲು ಈ ಶಿಬಿರವು ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗಿದೆ. ಇಂಥ ಹಲವಾರು ಯೋಜನೆಗಳು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾಲೇಜಿನ ಪ್ರಿನ್ಸಿಪಾಲ ಡಾ. ಆರ್. ಎಂ. ಮಿರ್ದೆ ಮಾತನಾಡಿ ಎನ್. ಎಸ್. ಎಸ್. ವಿಶೇಷ ಶಿಬಿರವು ವಿದ್ಯಾರ್ಥಿಗಳಿಗೆ ಎಲ್ಲ ರೀತಿಯಿಂದ ವ್ಯಕ್ತಿತ್ವ ವಿಕಸನ, ಶಿಸ್ತು, ಸ್ವಚ್ಛತೆ ಅಳವಡಿಸಿಕೊಳ್ಳಲು ನೆರವಾಹಿದೆ. ಅಲ್ಲದೆ ಸ್ವಯಂ ಸೇವಕರು ಹಾಗೂ ಸ್ವಯಂ ಸೇವಕೀಯರು ಎನ್.ಎಸ್.ಎಸ್ ಒಂದು ಮತ್ತು ಎರಡು ಘಟಕದ ಅಧಿಕಾರಿಗಳು ಈ ಶಿಬಿರವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮತ್ತು ಎಲ್ಲ ರೀತಿಯಿಂದ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ವಾರ್ಷಿಕ ಶಿಬಿರದ ಈ ಏಳು ದಿನದ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಎಲ್ಲ ಗ್ರಾಮಸ್ಥರಿಗೂ ಸ್ವಯಂ ಸೇವಕ ಹಾಗೂ ಸೇವಕೀಯರಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ಕನ್ನಾಳ ಗ್ರಾಮದ ಮುಖಂಡ ಮಲ್ಲನಗೌಡ ರಾ. ಬಿರಾದಾರ ಮಾತನಾಡಿ, ನಮ್ಮ ಎಲ್ಲ ಸಂಪ್ರದಾಯಗಳಿಗೂ ಆಚರಣೆಗೆ ಒಂದು ವಿಶೇಷವಾದ ಅರ್ಥವಿದೆ. ಅದರಂತೆ ವಿದ್ಯಾರ್ಥಿಗಳು ತಮ್ಮ ಜೀನವದಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳುವಲ್ಲಿ ಇಂಥ ಶಿಬಿರ ಫಲಕಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪ್ರಾಚಾರ್ಯ ಪೆÇ್ರ. ಎ. ಬಿ. ಪಾಟೀಲ, ಗ್ರಾಮದ ಮುಖಂಡರಾದ ಎನ್. ಎಸ್. ಎಸ್ ಅಧಿಕಾರಿ ಪೆÇ್ರ. ಕೃಷ್ಣಾ ಮಂಡ್ಲಾ, ಡಾ. ತರನ್ನುಮ್ ಜಬೀನಖಾನ್, ಭೀಮಾಶಂಕರ ಬಿದರಿ, ಪರಶುರಾಮ. ಯುರನಾಳ, ಶಫೀದಹ್ಮದ್, ಪೆÇ್ರ. ಕೀಲಿರಣಕುಮಾರ ಹರಿದಾಸ, ಪೆÇ್ರ. ಜಿ. ಎಂ. ಗೇಂಡ, ಮಹಾವಿದ್ಯಾಲಯದ ಬೊಧಕ, ಬೋಧಕರ ಹೊರಯಾದ ಸಿಬ್ಬಂದಿ, ಶಿಬಿರಾರ್ಥಿಗಳು, ಗ್ರಾಮದ ಹಿರಿಯರು ಯುವಕರು ಉಪಸ್ಥಿತರಿದ್ದರು.