ಗ್ರಾಮಗಳ ಅಭಿವೃದ್ಧಿಯಿಂದ ಮತದಾರರ ಋಣ ತೀರಿಸಿ: ಪಾಟೀಲ

ರಾಮದುರ್ಗ,ಮಾ16: ಶಾಸಕರಿಗೂ ದೊರೆಯದಷ್ಟು ಅನುದಾನ ಗ್ರಾಮ ಪಂಚಾಯತಿಗೆ ದೊರೆಯುತ್ತಿದೆ. ಸದಸ್ಯರು ಇತರ ಸಮಾಜದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಸಮಾಜದ ಜನತೆಯ ಹಿತ ಕಾಯುವ ಜೊತೆಗೆ ತಮಗೆ ಮತದಾನ ಮಾಡಿದ ಮತದಾರರ ಋಣ ತೀರಿಸಬೇಕು ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ ಕರೆ ನೀಡಿದರು.
ಭಾನುವಾರ ತಾಲೂಕಿನ ಗೊಡಚಿಯ ರಾಮು ಅಜ್ಜನವರ ಕಲ್ಯಾಣ ಮಂಟಪದಲ್ಲಿ ಪಂಚಮಸಾಲಿ ಸಮಾಜದ ತಾಲೂಕಾ ಘಟಕ ಗ್ರಾಮ ಪಂಚಾಯ್ತಿಗೆ ಆಯ್ಕೆಯಾದ ಸಮಾಜದ ಗ್ರಾಮ ಪಂಚಾಯತಿ ನೂತನ ಸದಸ್ಯರಿಗೆ ಏರ್ಪಡಿಸಿದ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಂಚಮಸಾಲಿ ಸಮಾಜದವರು ನಡೆಸುತ್ತಿರುವ 2ಎ ಮೀಸಲಾತಿ ಹೋರಾಟ ಸಮಾಜದ ಬಡ ವಿದ್ಯಾರ್ಥಿಗಳ ಭವಿಷ್ಯತ್ತಿಗಾಗಿ ನಡೆಯುತ್ತಿದೆ. ಹೋರಾಟವನ್ನು ಸರ್ವ ಸಮಾಜದ ಬಾಂಧವರು ಬೆಂಬಲಿಸಿದಲ್ಲಿ ಮಾತ್ರ ಯಶಸ್ಸು ಪಡೆಯಲು ಸಾಧ್ಯವಿದೆ ಎಂದರು.
ಸಮಾಜದ ಮುಖಂಡರಾದ ಪಿ.ಎಫ್. ಪಾಟೀಲ ಹಾಗೂ ನಿವೃತ್ತ ಅರಣ್ಯ ಇಲಾಖೆಯ ಏಸಿಎಫ್, ಸಿ.ಬಿ. ಪಾಟೀಲ, ಶ್ರೀದೇವಿ ಮಾದನ್ನವರ ಮಾತನಾಡಿ, ಆಯ್ಕೆಯಾದ ಸದಸ್ಯರು ಗ್ರಾಮ ಪಂಚಾಯತಿ ನೇತೃತ್ವದಲ್ಲಿ ತಮ್ಮ ಗ್ರಾಮದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಸಮಾಜದಲ್ಲಿ ಕಷ್ಠದಲ್ಲಿರುವ ವಿದ್ಯಾರ್ಥಿಗಳು ಹಾಗೂ ಜನತೆಗೆ ಬೆಂಬಲವಾಗಿ ನಿಂತು ಕೆಲಸ ಮಾಡಿದಲ್ಲಿ ತಮ್ಮ ಸೇವೆ ಮತ್ತಷ್ಟು ಉತ್ತುಂಗಕ್ಕೆ ಏರುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಕರ್ನಾಟಕ ರಾಜ್ಯ ತೋಟಗಾರಿಕಾ ಮಾರಾಟ ಮಹಾಮಂಡಳದ ನಿರ್ಧೇಶಕರಾಗಿ ಆಯ್ಕೆಯಾದ ವೈ.ಎಚ್. ಪಾಟೀಲ, ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಐ.ವೈ. ಪವಾಡಿಗೌಡ್ರ, ಸದಸ್ಯರಾದ ಸಿ.ಎನ್. ಚಿಗದಮ್ಮನವರ, ಎಂ.ಪಿ. ಬೆಳವಣಕಿ, ಮಾರುತಿ ಬಿಜಲಿ ಒಳಗೊಂಡಂತೆ ಹಲವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಗೌರವಾಧ್ಯಕ್ಷ ಶಾಸನಗೌಡ ಪಾಟೀಲ, ಅಧ್ಯಕ್ಷ ಮಾರುತಿ ಕೊಪ್ಪದ ಟ್ರಸ್ಟ್ ಅಧ್ಯಕ್ಷ ಬಿ.ಎಫ್. ಬಸಿಡೋಣಿ, ಜಿ.ಪಂ ಸದಸ್ಯೆ ಶಿವಕ್ಕೆ ಬೆಳವಡಿ, ಎಪಿಎಂಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ಕಾರ್ಯದರ್ಶಿ ಎನ್.ಬಿ. ದಂಡಿನದುರ್ಗಿ, ಮುಖಂಡರಾದ, ವೈ.ಎಚ್. ಪಾಟೀಲ, ಮಹೇಶ ದೇಸಾಯಿ, ಸಿದ್ದನಗೌಡ ಪಾಟೀಲ, ಬಿ.ಎಂ. ಪಾಟೀಲ, ಬಿ.ಎಸ್. ಬೆಳವಣಕಿ, ಶಿವನಗೌಡ ಪಾಟೀಲ, ರಾಮನಗೌಡ ಪಾಟೀಲ, ಮಹಾದೇವಪ್ಪ ಮದಕಟ್ಟಿ ಸೇರಿದಂತೆ ಇತರರಿದ್ದರು.