ಗ್ರಾಮಗಳ ಅಭಿವೃದ್ಧಿಗೆ ಸದಸ್ಯರ- ಗ್ರಾಮದವರ ಸಹಕಾರ ಮುಖ್ಯ

ಜಗಳೂರು.ಜ.೧; ದೊಣ್ಣೆಹಳ್ಳಿ ಗ್ರಾಮ ಪಂಚಾಯಿತಿ ಚುನಾವಣಾಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ ಅವರು ಒಂದು ತಿಂಗಳ ಅವಧಿಯೊಳಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುಗಮವಾಗಿ ದೊಣ್ಣೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾನ ಮತ್ತು ಮತ ಎಣಿಕೆ ಯಾಗಿದ್ದು ಹಾಗೂ ತಾಲ್ಲೂಕಿನಲ್ಲಿಯೂ ಸಹ ಯಾವುದೇ ತೊಂದರೆ ಗೊಂದಲ ಸೇರಿದಂತೆ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ಚುಣಾವಣಾಧಿಕಾರಿಗಳಾದ ನಜ್ಮಾ ರವರು ಪರಿಶ್ರಮ ಅಫಾರವಾಗಿದೆ ಎಂದರು.ನೂತನ ಸದಸ್ಯರಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಿ ಮಾತನಾಡಿದ ಅವರು ಗ್ರಾಮದ ಅಭಿವೃದ್ಧಿಯೇ ದೇಶದ ಅಭಿವೃದ್ದಿ ಎಂಬ ನಾಣ್ನುಡಿಯಂತೆ ಮೊದಲು ಗ್ರಾಮೀಣಾ ಪ್ರದೇಶದಲ್ಲಿ ಅಭಿವೃದ್ಧಿಹೊಂದಿದಾಗ ಮಾತ್ರ ಗ್ರಾಮ ಅನೈರ್ಮಲ್ಯ ದಿಂದ ಕೊಡಲು ಸಹಕಾರಿಯಾಗುತ್ತದೆ ಎಂದರು.ಸಹಾಯಕ ಚುನಾವಣಾಧಿಕಾರಿ ಕಲ್ಲಿನಾಥ್ ಮಾತನಾಡಿ ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಅಭ್ಯರ್ಥಿಗಳ ಆಯ್ಕೆಯಲ್ಲಿ ಉತ್ತಮವಾದ ಅಭ್ಯರ್ಥಿಯನ್ನು ಆರಿಸಿ ಗ್ರಾ.ಪಂ. ಪಂಚಾಯಿತಿಗೆ ಕಳುಹಿಸಿದಾಗ ಅಭ್ಯರ್ಥಿಗಳು ಸ್ವಾರ್ಥತೆಯನ್ನು ಬಿಟ್ಟು  ನಮ್ಮ ಗ್ರಾಮಕ್ಕೆ ನಮ್ಮದೇನು ಕೊಡುಗೆ ಎಂದು ತಮ್ಮ ಜವಬ್ದಾರಿಯುತ ಸದಸ್ಯ ಸ್ಥಾನಕ್ಕೆ ಗೌರವ ನೀಡಿ ಯಾವುದೇ ಅಮೀಷಗಳಿಗೆ ಬಲಿಯಾಗದೆ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ನೂತನ ಸದಸ್ಯರಿಗೆ ಕಿವಿ ಮಾತು ಹೇಳಿದರು.ದೊಣ್ಣೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಮ್ಮನಹಳ್ಳಿ ಗ್ರಾಮದ ನೂತನ ಸದಸ್ಯೆ ಶ್ರೀಮತಿ ಬಸವರಾಜೇಶ್ವರಿ ಪ್ರಮಾಣ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಅವರು ಗ್ರಾಮಕ್ಕೆ ನೆರವಾಗುವಂತಹ ಸರಕಾರಿ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವ್ಯಾಪಕವಾಗಿ ಪ್ರಜಾರ ಮಾಡುವುದರ ಜೊತೆಗೆ ಗ್ರಾಮ ಸಭೆಯಲ್ಲಿ ಗ್ರಾಮದ ಜನರಿಗೆ ಯೋಜನೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕೆಂದರು.ನರೇಗಾ ಯೋಜನೆಯಲ್ಲಿ ಬರುವ ಯೋಜನೆಗಳಿಗೆ ದುಡಿಯುವ ಕೈಗಳಿಗೆ ಕೂಲಿ ಕೆಲಸವನ್ನು ನೀಡಿ ಫಲಾನುಭವಿಗಳ ಖಾತೆಗೆ ಸರಿಯಾದ ಸಮಯಕ್ಕೆ ಹಣವನ್ನು ಖಾತೆಗೆ ಜಮಾಮಾಡಬೇಕು ಸುಖಾ ಸುಮ್ಮನೆ ಕೂಲಿಕಾರರನ್ನು ಪಂಚಾಯಿತಿಗೆ ಅಲೆದಾಡಿಸುವುದು ಸರಿಯಲ್ಲ ಇದರಿಂದ ಕೂಲಿಕಾರರು ನೊಂದು ಇನ್ನೊಮ್ಮೆ ನರೇಗಾ ಯೋಜನೆಯ ಬಗ್ಗೆ ಅಪಸ್ವರವನ್ನು ಎತ್ತುತ್ತಾರೆಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಓ ಮೂಗಣ್ಣ ರವರು ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸ್ವಾಗತ ಕೋರುವುದರೆ ಜೊತೆಗೆ ಅಭಿನಂದನೆಯನ್ನು ಸಲ್ಲಿಸಿದರು.ವಿವಿಧ ಗ್ರಾಮ ಪಂಚಾಯಿತಿ ನೂತನ ಸದಸ್ಯರುಗಳು ಹಾಜರಿದ್ದರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಉಮೇಶ್,ತಿಪ್ಪೇಸ್ವಾಮಿ, ಮುಸ್ಟೂರಪ್ಪ, ಕಂಪ್ಯೂಟರ್ ಆಪರೇಟರ್ ಕಾಮಗೇತನಹಳ್ಳಿ ಶಿವಣ್ಣ, ಸೇರಿದಂತೆ ಡಿ.ಗ್ರೂಫ್ ನೌಕರರು ಹಾಜರಿದ್ದರು.