ಗ್ರಾಮಗಳ ಅಭಿವೃದ್ದಿಗೆ ಸಾರ್ವಜನಿಕರ ಸಹಕಾರ ಅಗತ್ಯ

ಕೋಲಾರ,ಜು.೩೦-ತಾಲೂಕಿನ ವೇಮಗಲ್- ಕುರುಗಲ್ ಪಪಂ ನ ೧೫ ನೇ ಹಣಕಾಸು ಯೋಜನೆಯಡಿಯಲ್ಲಿ ೧೪ ಲಕ್ಷ ವೆಚ್ಚದಲ್ಲಿ ಪಪಂ ವ್ಯಾಪ್ತಿಯಲ್ಲಿ ಬರುವ ಕುರುಬರಹಳ್ಳಿ, ಚನ್ನಪ್ಪನಹಳ್ಳಿ, ಪುರಹಳ್ಳಿ, ಸಿಂಗೇಹಳ್ಳಿ, ಸುಳದೇನಹಳ್ಳಿ, ಗ್ರಾಮಗಳ ಮುಖಾಂತರ ನೀರು ಸರಬರಾಜು ಮಾಡಲು ಶನಿವಾರ ಕೊಳವೆಬಾವಿ ಕೊರೆಸಲು ಶಾಸಕ ಕೊತ್ತೂರು ಮಂಜುನಾಥ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಗೆ ೧೫ ಕೋಟಿ ರೂ ಅನುದಾನ ತಂದಿದ್ದೇವೆ. ಯುಜಿಡಿ ಲೈನ್ ಮತ್ತು ನೂತನವಾಗಿ ಬೃಹತ್ ಗಾತ್ರದ ನೀರಿನ ಪೈಪ್ ಲೈನ್ ನಿರ್ಮಾಣವಾಗುತ್ತದೆ. ಮುಂದಿನ ೨೦ ವರ್ಷಗಳ ನಂತರ ಹೇಗೆ ಅಭಿವೃದ್ಧಿ ಆಗುತ್ತದೆ ಎಂಬುದನ್ನು ಪರಿಗಣಿಸಿ, ಈಗಲೇ ಉತ್ತಮ ಗುಣಮಟ್ಟದ ದೊಡ್ಡ ಗಾತ್ರದ ಪೈಪ್ ಲೈನ್ ಅಳವಡಿಸಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೀರು ಸರಬರಾಜು ಮಾಡಲು ಎಲ್ಲಾ ರೀತಿಯ ಪ್ಲಾನ್ ಮಾಡಿ ಅಭಿವೃದ್ಧಿಗೆ ಸದಾ ಸಿದ್ದನಿದ್ದೇನೆ ಎಂದು ಶಾಸಕ ಕೊತ್ತೂರು ಮಂಜುನಾಥ್ ನುಡಿದರು.
ವೇಮಗಲ್, ಕುರುಗಲ್, ಕ್ಯಾಲನೂರು, ನರಸಾಪುರ, ವಕ್ಕಲೇರಿ ಹೋಬಳಿ ಕೇಂದ್ರಗಳು ಹಾಗೂ ಕೋಲಾರ ನಗರವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದೇನೆ, ಅಭಿವೃದ್ದಿ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ, ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಕುರುಬರಹಳ್ಳಿ ಮಾರಮ್ಮ ದೇವಾಲಯಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಭೇಟಿ ನೀಡಿ ವಿಶೇಷ ಸಲ್ಲಿಸಿದರು. ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಎಂಎಲ್.ಸಿ ಅನಿಲ್ ಕುಮಾರ್, ಪಪಂ ಮುಖ್ಯಾಧಿಕಾರಿ ವೆಂಕಟೇಶ್, ವಿ.ಬಿ ಉದಯ್ ಶಂಕರ್, ತಾಪಂ ಮಾಜಿ ಸದಸ್ಯ ವಿ.ಎಂ ಮುನಿಯಪ್ಪ, ಪಿ.ವೆಂಕಟೇಶ್, ಮುನಿಯಪ್ಪ, ಕುರುಬರಹಳ್ಳಿ ಮೂರ್ತಿ, ಗುತ್ತಿಗೆದಾರ ರಘುಕುಮಾರ್ ಇದ್ದರು.