
ಹುಮನಾಬಾದ :ಸೆ.17: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರದ ನಿರ್ದೇಶನದಂತೆ ಸೆಪ್ಟೆಂಬರ್ 15ರಿಂದ ಅಕ್ಟೋಂಬರ್ 2ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಗ್ರಾಮಗಳನ್ನು ಸ್ವಚ್ಛ ಮತ್ತು ಸುಂದರವಾಗಿ ಮಾಡಬೇಕೆಂದು ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದರ ತಿಳಿಸಿದ್ದರು.
ತಾಲೂಕಿನ ಹುಡಗಿ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಾತನಾಡಿತ ಅವರು ,
ಗ್ರಾಮಸ್ಥರು ದಿನನಿತ್ಯದ ಬಳಕೆಗೆ ಸರಬರಾಜು ಆಗುವ ನೀರಿನ ಜಲಮೂಲಗಳ ಸುತ್ತಮುತ್ತಲು ಸ್ವಚ್ಛತೆ ಕಾಪಾಡುವುದರ ಜೊತೆಗೆ ಗ್ರಾಮಗಳಲ್ಲಿರುವ ತಿಪ್ಪಿಗುಂಡಿಗಳು ಸ್ಥಳಾಂತರ ಗೊಳಿಸಬೇಕು ಹಾಗೂ ಚರಂಡಿ ಸ್ವಚ್ಛತೆಗೊಳಿಸುವುದು, ಗ್ರಾಮದಲ್ಲಿ ನಿರ್ಮಾಣ ಮಾಡಿರುವ ನೀರಿನ ಟ್ಯಾಂಕುಗಳನ್ನು ಶುದ್ದಗೊಳಿಸಬೇಕು. ಗ್ರಾಮಗಳಲ್ಲಿ ಸೊಳ್ಳೆಗಳು ಆಗದಂತೆ ಬ್ಲೀಚಿಂಗ್ ಪೌಡರ್ಗಳನ್ನು ಹಾಕಬೇಕು ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ಯೋಗ್ಯವಾದ ನೀರನ್ನು ಗ್ರಾಮಸ್ಥರಿಗೆ ಉಪಯೋಗಿಸುವಂತೆ ಜನರಲ್ಲಿ ಅರಿವು ಮೂಡಿಸುವಂತಹ ಕೆಲಸ ಅಧಿಕಾರಿಗಳು ಮಾಡಬೇಕು, ಹೊಡೆದಿರುವ ನೀರಿನ ಪೈಪ್ ಲೈನ್ ದುರಸ್ತಿ ಮಾಡಬೇಕು, ಗ್ರಾಮದಲ್ಲಿ ತೆಗ್ಗು ಗುಂಡಿಯಲ್ಲಿ ನಿಂತಿರುವ ನೀರನ್ನು ನಿಲ್ಲದಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು. ತಾ.ಪಂ ಸಹಾಯಕ ನಿರ್ದೇಶಕರು (ಉ ಖಾ) ಜಗನ್ನಾಥ, ಪಿಡಿಒ ಶಿವರಾಜ, ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಬಮ್ಮಾ ಹನುಮಂತ್, ಉಪಾಧ್ಯಕ್ಷ ಸಿದ್ದಿಕ್ ಷಾ, ಸದಸ್ಯರುಗಳಾದ ಸಂಗಮ್ನಾಥ, ಮಲ್ಲಮ್ಮ, ವಿಜಯಲಕ್ಷ್ಮಿ, ರೀತಾ, ಆನಂದಕುಮಾರ್ ಸೈನಿರೆ, ರಾಜಶೇಖರ್, ಜಿಲಾನಿ, ಪ್ರಭು, ತಾ.ಪಂ ತಾಂತ್ರಿಕ ಸಂಯೋಜಕ ಸುಧಾಕರ ಪಾಟೀಲ್ , ತಾಂತ್ರಿಕ ಸಹಾಯಕ ರಾಘವೇಂದ್ರ, ಐಇಸಿ ಸಂಯೋಜಕ ಉಮೇಶ ಮಲಗಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು.