ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಿರುವೆ- ರಾಜಾ ವೆಂಕಟಪ್ಪ ನಾಯಕ

೪೫ ಲಕ್ಷ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗೆ ಆರ್.ವಿ.ಎನ್. ಚಾಲನೆ
ಸಿರವಾರ.ಮಾ.೧೦- ಮಹಾತ್ಮಾ ಗಾಂದಿಜಿಯವರು ಹೇಳಿದಂತೆ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಇದರಿಂದ ಸರ್ವರ ಏಳಿಗೆಯಾಗುತ್ತದೆ ಎಂದು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು. ತಾಲೂಕಿನ ಗಣದಿನ್ನಿ ಗ್ರಾಮದಲ್ಲಿ ಗುರುವಾರ ಸಂಜೆ ೨೫ ಲಕ್ಷ ವೆಚ್ಚದ ತರಗತಿ ಕೊಠಡಿ ನಿರ್ಮಾಣಕ್ಕೆ, ೧೩ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ, ಸಿಂಗಡದಿನ್ನಿ ಗ್ರಾಮದಲ್ಲಿ ೭ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಪ್ರತೇಕವಾಗಿ ಶಂಕುಸ್ಥಾಪನೆ ನೆರವೆರಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳಿಗೆ ಶುದ್ದಕುಡಿಯುವ ನೀರು, ಉತ್ತಮ ಸಿಸಿ ರಸ್ತೆ, ವಿದ್ಯುತ್, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಶಾಲೆಗಳಿಗೆ ಕಟ್ಟಡ ನಿರ್ಮಾಣ, ಇನೂ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗದೆ. ಪಕ್ಕದ ಅತ್ತನೂರು ಗ್ರಾಮಕ್ಕೆ ಗಣೇಕಲ್ ಜಲಾಶಯ ದಿಂದ ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಗುತ್ತೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ಚುನಾವಣೆಯಲ್ಲಿ ಮಾತ್ರ ಪಕ್ಷ ಅಭಿವೃದ್ದಿ ವಿಷಯದಲ್ಲಿ ಪಕ್ಷ ಬೇದ ಮರೆತು ಕಾರ್ಯನಿರ್ವಹಿಸುತ್ತಿರುವೆ, ೪.೮ ವರ್ಷಗಳಿಂದ ರೈತರಿಗೆ ಎರಡು ಬೆಳೆಗೆ ನೀರು ಹರಿಸುವ ಮೂಲಕ ನೇರವಾಗಿರುವೆ. ಈ ಬಾರಿಯು ಸಹ ನೀರು ಬರುತ್ತವೆ ರೈತರು ಆತಂಕ ಪಡುವ ಅವಶ್ಯಕತೆ ಇಲಾ ಎಂದರು. ಜೆಡಿಎಸ್ ಹಿಂದುಳಿದ ವರ್ಗಗಳ ಜಿಲ್ಲಾದ್ಯಕ್ಷ ಜಂಬುನಾಥ ಯಾದವ, ಗ್ರಾ.ಪಂ ಸದಸ್ಯರಾದ ಸೂಗುರಯ್ಯ ಸ್ವಾಮಿ,ಮುದುಕಪ್ಪ ನಾಯಕ,ಪ್ರಕಾಶ, ಹನ್ಮಂತ, ನೀಲಕಂಠರೆಡ್ಡಿಗೌಡ,ನಾಗನಗೌಡ,ಮಾನರಗೌಡ, ಡ್ರೈವರ್ ರಂಗಣ್ಣ, ಅಮರೇಶ ನಾಯಕ ಸೇರಿದಂತೆ ಇನ್ನಿತರರು ಇದರು.