ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ


ಸಂಜೆವಾಣಿ ವಾರ್ತೆ
ಕುರುಗೋಡು, ಕಂಪ್ಲಿ:ಮಾ.25: ಪಟ್ಟಣ ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ 2022-23 ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಮಂಜೂರಾತಿ ಯೋಜನೆ ಅಡಿಯಲ್ಲಿ 91 ಲಕ್ಷ ವೆಚ್ಚದಲ್ಲಿ ಎಮ್ಮಿಗನೂರು ಬೈಪಾಸ್ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಎಮ್ಮಿಗನೂರು ಗ್ರಾಮದಲ್ಲಿ 99 ಲಕ್ಷ ವೆಚ್ಚದಲ್ಲಿ ಹಾವಿನಹಾಳು ರಸ್ತೆವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಕೋಳೂರು ಗ್ರಾಮದಲ್ಲಿ 90 ಲಕ್ಷ ವೆಚ್ಚದಲ್ಲಿ ಕೋಳೂರು ಗ್ರಾಮದಿಂದ ಸರ್ಕಾರಿ ಪ್ರೌಢ ಶಾಲೆ ವರೆಗೆ  ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಕೋರ್ಲ್ಲಗುಂದಿ ಗ್ರಾಮದಲ್ಲಿ 91 ಲಕ್ಷ ವೆಚ್ಚದಲ್ಲಿ ಕೋರ್ಲ್ಲಗುಂದಿ ಗ್ರಾಮದಿಂದ ಜಾಲಿಬೆಂಚಿ ವರೆಗೆ  ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಹಳೇನೆಲ್ಲುಡಿ ಗ್ರಾಮದಲ್ಲಿ 91 ಲಕ್ಷ ವೆಚ್ಚದಲ್ಲಿ ಹಳೇನೆಲ್ಲುಡಿ ಗ್ರಾಮದಿಂದ ಬಳ್ಳಾಪುರ ವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ನಂ2 ಮುದ್ದಾಪುರ ಗ್ರಾಮದಲ್ಲಿ 99 ಲಕ್ಷ ವೆಚ್ಚದಲ್ಲಿ ಮುದ್ದಾಪುರ ಗ್ರಾಮದಿಂದ ಕೊಂಡಯ್ಯ ಕ್ಯಾಂಪ್ ವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಮದಿರೆ ಗ್ರಾಮದಲ್ಲಿ 99 ಲಕ್ಷ ವೆಚ್ಚದಲ್ಲಿ  ಮದಿರೆ ಗ್ರಾಮದಿಂದ ಸೋಮಸಮುದ್ರ ವರೆಗೆ  ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಎಮ್ಮಿಗನೂರು ಗ್ರಾಮದಲ್ಲಿ 99 ಲಕ್ಷ ವೆಚ್ಚದಲ್ಲಿ  ಎಮ್ಮಿಗನೂರು ಗ್ರಾಮದಿಂದ ಇಟಗಿ ವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಜೆ.ಎನ್.ಗಣೇಶ್ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.