ಗ್ರಾಮಗಳಲ್ಲಿ ದರ್ಶನ್ ದ್ರುವ ನಾರಾಯಣ್‍ಗೆ ಅದ್ದೂರಿ ಸ್ವಾಗತ

ಸಂಜೆವಾಣಿ ವಾರ್ತೆ
ನಂಜನಗೂಡು : ಏ.16:- ಸುಡುವಾ ಬಿಸಿಲಿನಲ್ಲೇ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ಪರ ಶಾಸಕ ದರ್ಶನ್ ಧ್ರುವನಾರಾಯಣ್ ಪಾದಯಾತ್ರೆ ಮಾಡಿಮತಯಾಚನೆ ಗ್ರಾಮಗಳಲ್ಲಿ ಗ್ರಾಮಸ್ಥರಿಂದ ಶಾಸಕರಿಗೆ ಅದ್ದೂರಿ ಸ್ವಾಗತ ಮಾಡಿ ಬರಮಾಡಿಕೊಂಡರು.
ಕ್ಷೇತ್ರದ ದೇವರಾಯಶೆಟ್ಟಿ ಪುರ ಮತ್ತು ಹೆಡಿಯಾಲ ಹಾಡ್ಯ ಹಲ್ಲರೆ ಆಗಿನವಾಳು ಗ್ರಾಂ. ಪಂ ವ್ಯಾಪ್ತಿಯ ಚುನಾವಣಾ ಪ್ರಚಾರ ಸಭೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ನಡೆಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬೋಸ್ ಪರ ಮತಯಾಚನೆ ಮಾಡಿದರು
ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ಭಾಗದಲ್ಲಿ ವನ್ಯಜೀವಿಯ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕಾಗಿ ಸದನದಲ್ಲಿ ಸರ್ಕಾರದ ಗಮನ ತಂದು ರೈಲ್ವೆ ಬೈರಿಕೆಡ್, ಮೆಸ್ ಮಂಜೂರು ಮಾಡಿಸಿ ಕಾಮಗಾರಿ ನಡೆಯುತ್ತಿದ್ದೆ, ನಮ್ಮ ಕಾಂಗ್ರೆಸ್ ಪಕ್ಷ ಚುನಾವಣೆ ಮುಂಚೆ ಗ್ಯಾರಂಟಿ ಭರವಸೆಗಳನ್ನ ನೀಡಿ, ಸರ್ಕಾರ ಬಂದ ತಕ್ಷಣ ನೀಡಿದ ಎಲ್ಲಾ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ನಮ್ಮ ಸರ್ಕಾರ ಪಾತ್ರವಾಗಿದೆ ನಾನು ಕೂಡ ಗೆದ್ದ 10 ತಿಂಗಳಲ್ಲಿ ಆದಷ್ಟು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ಇದೆ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಪಕ್ಷ ಗೆಲ್ಲಿಸಿದ್ದೀರಿ ಅದರಿಂದ ಲೋಕಸಭಾ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರನ್ನು ಅತ್ಯಾಧಿಕಾ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿ ಮತಯಾಚನೆ ಮಾಡಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಬ್ಲಾಕ್ ಅಧ್ಯಕ್ಷರಾದ ಶ್ರೀಕಂಠ ನಾಯಕ ಕುರಹಟ್ಟಿ ಮಹೇಶ್ ಮೈಸೂರು ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ ದೊರೆಸ್ವಾಮಿ ನಾಯಕ ಕೆ.ಮಾರುತಿ ರವರು ನಾಗೇಶ್ ರಾಜ್ ಬುಲೆಟ್ ಮಹದೇವಪ್ಪ ಇಂಧನ್ ಬಾಬು ಕೆಂಡಗಣಪ್ಪ ಸೇರಿದಂತೆ ವಿವಿಧ ಗ್ರಾಮದ ಮುಖಂಡರು, ಕಾರ್ಯಕರ್ತರು ಇದ್ದರು.