ಗ್ರಾಮಕ್ಕೆ ಬರುವ ಸ್ವಚ್ಛ ವಾಹಿನಿಗೆ ಕಸ ನೀಡಿದರೆಗ್ರಾಮಗಳು ಸ್ವಚ್ಛತೆಯಿಂದ ಇರಲು ಸಾಧ್ಯ:ಜಿ.ಪಂ. ಸಿಇಓ ಭಂವರ ಸಿಂಗ್ ಮೀನಾ

ಕಲಬುರಗಿ:ಆ.31:ಗ್ರಾಮಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕಗಳಿದ್ದು, ಪ್ರತಿಯೊಬ್ಬರು ಗ್ರಾಮಕ್ಕೆ ಬರುವ ಸ್ವಚ್ಛ ವಾಹಿನಿಗೆ ತಮ್ಮ ಮನೆಯ ಕಸವನ್ನು ನೀಡಿದರೆ ಗ್ರಾಮ ಸ್ವಚ್ಛತೆಯಿಂದ ಇರುತ್ತವೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವರ ಸಿಂಗ್ ಮೀನಾ ಅವರು ಹೇಳಿದರು.

ಅವರು ಕಲಬುರಗಿಯಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಗ್ರಾಮೀಣಾಭೀವೃದ್ಧಿ ಪಂಚಾಯತ ರಾಜ್ ಇಲಾಖೆ, ಅಬ್ದುಲ್ ನಜೀರ್‍ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆ ಮೈಸೂರು, ಸಂಜೀವಿನಿ ಎನ್.ಆರ್.ಎಲ್.ಎಂ., ಸ್ವಚ್ಛಭಾರತ ಮಿಷನ್, ಅರ್ಬನ್ ಮ್ಯಾನೇಜ್‍ಮೆಂಟ್ ಸೆಂಟ್‍ರ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗ್ರಾಮೀಣ ಪ್ರದೇಶದಲ್ಲಿನ ಸ್ವಚ್ಛತಾಗಾರರ ಸುರಕ್ಷತೆ ಮತು ಘನತೆ ಕುರಿತು ಮೂರು ದಿನಗಳ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.

ಗ್ರಾಮಗಳು ಸಂಪೂರ್ಣ ಸ್ವಚ್ಛತೆ ಹಾಗೂ ನೈರ್ಮಲ್ಯಿಕರಣದಿಂದ ಇರಬೇಕಾದರೆ ಗ್ರಾಮಗಳಲ್ಲಿನ ಹಳೆಯ ನಡವಳಿಕೆ/ ಪದ್ಧತಿಯಲ್ಲಿ ಬದಲಾವಣೆಯಾಗಬೇಕು. ಅಂದಾಗ ಮಾತ್ರ ನಗರದಂತೆ ಗ್ರಾಮಗಳು ಸಹ ಸಂಪೂರ್ಣ ಸ್ವಚ್ಛತೆಯಿಂದ ಇರಲು ಸಾಧ್ಯವಿದೆ. ಹಾಗೆಯೇ ಬಯಲು ಶೌಚಾಲಯಕ್ಕೆ ಹೋಗದೆ ಮನೆಯಲ್ಲಿ ಶೌಚಾಲಯ ಕಟ್ಟಿ ಉಪಯೋಗಿಸಿದರೆ ಅವರ ಕುಟುಂಬವಲ್ಲದೆ, ಗ್ರಾಮದ ಪರಿಸರವು ಆರೋಗ್ಯದಿಂದಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮೀಣಾಭೀವೃದ್ಧಿ ಆಯುಕ್ತಾಲಯದ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅÀವರು ವಿಡಿಯೋ ವರ್ಚುವಲ್ ಮೂಲಕ ಕಾರ್ಯಕ್ರಮ ಕುರಿತು ಮಾತನಾಡಿದರು. ನಂತರ ವೇದಿಕೆ ಮೇಲೆ ಆಸೀನರಾಗಿದ್ದ ಯುನಿಸೆಫ್-ವಾಷ್ ಕರ್ನಾಟಕ, ತೆಲಂಗಾಣ ಮುಖ್ಯಸ್ಥರಾದ ಪ್ರಭಾತ್ ಮಟ್‍ಪಾಡಿ ರವರು ತರಬೇತಿಯ ರೂಪು-ರೇಷೆ ಉದ್ದೇಶದ ಕುರಿತು ಮಾತನಾಡಿದರು.

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆಯ ಮೈಸೂರು ಬೋಧಕರಾದ ಎಸ್.ಎಚ್.ಪ್ರಕಾಶ, ಹಾಗೂ ಪ್ರಾದೇಶಿಕ ಕಚೇರಿಯ ಬೋಧಕರಾದ ಶಿವಪುತ್ರ ಹಾಗೂ ಡಾ.ರಾಜು ಎಂ.ಕಂಬಳಿಮಠ ವೇದಿಕೆಯಲ್ಲಿ ಆಸೀನರಾಗಿ ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಯುನಿಸೆಫ್ ಸಂಯೋಜಕರಾದ ಡಾ.ದಿಲೀಪ್ ಕಾರ್ಯಕ್ರಮ ನಿರೂಪಿಸಿದರು.

ಯುನಿಸೆಪ್ ಕೆ.ಎಸ್.ಆರ್.ಎಲ್.ಪಿ.ಎಸ್ ಸರ್ಪೋಟೆಡ್ ಸಮಾಲೋಚಕರಾದ ಗಿರೀಶ ಕುಮಾರ ಪ್ರಾಸ್ತಾವಿಕ ಮಾತನಾಡಿದರು, ಯುನಿಸೆಫ್ ಸಮಾಲೋಚಕರಾದ ಗೋವಿಂದರಾಜಲು ರವರು ಸರ್ವರನ್ನು ಸ್ವಾಗತಿಸಿದರು. ಯುನಿಸೆಫ್ ಸಂಜೀವಿನಿ ಸಮಾಲೋಚಕರಾದ ಚಂದ್ರಕಾಂತ ಹೀರೆಮಠ ವಂದಿಸಿದರು.