ಗ್ರಾಪಂ ಸ್ವತಂತ್ರ ಅಭ್ಯರ್ಥಿ ಗೆಲುವು ಬಿಜನಳ್ಳಿ ಗ್ರಾಮದಲ್ಲಿ ಭವ್ಯ ಸ್ವಾಗತ

ಸೇಡಂ,ಜ,04: ತಾಲೂಕಿನ ಬಿಜನಳ್ಳಿ ಗ್ರಾಮದಲ್ಲಿ ಗ್ರಾಪಂಯ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದ ಮಳಖೇಡ ಗ್ರಾಪಂಯ ನೂತನ ಸದಸ್ಯ ಅಂಬರೀಶ್ ಎಂ ಗುಡಿ ಅವರಿಗೆ ಹಲಗೆ ಬಾರಿಸುವುದರ ಮುಖಾಂತರ ಗ್ರಾಮದ ಮಹಾಶರಣ ಹರಳಯ್ಯ ಕಲ್ಯಾಣಮ್ಮ ಮಂದಿರಕ್ಕೆ ಹಾಗೂ ಅವರ ಸ್ನೇಹಿತರ ಮನೆಗೆ ಭವ್ಯಸ್ವಾಗತ ಮೂಲಕ ಬರಮಾಡಿಕೊಂಡರು. ಗ್ರಾಮದ ಹಿರಿಯರಾದ ಮರಲಿಂಗ, ಚೆನ್ನಪ್ಪ,ರವಿ ಹೊಸಮನಿ, ಮತ್ತು ಸಾಯಿಬಣ್ಣ, ಮುನಿಯಪ್ಪ, ಅಣ್ಣಪ್ಪ, ಶಂಭುಲಿಂಗ, ಶ್ರೀನಾಥ್ ಶಿವಕುಮಾರ್ ಸಂಗಾವಿ, ರಾಕೇಶ್, ಖತಲಪ್ಪ, ಚೇತನ್, ಪವನ್ ಕುಮಾರ್, ಅನೇಕರು ಇದ್ದರು