ಗ್ರಾಪಂ ಚುನಾವಣೋತ್ತರ ಗಲಾಟೆ ಇಬ್ಬರ ಮೇಲೆ ಹಲ್ಲೆ

ಬಳ್ಳಾರಿ ಜ 06 : ತಾಲೂಕಿನ ಶಿಡಿಗಿನಮೊಳೆ ಗ್ರಾಮ ಪಂಚಾಯ್ತಿಯ ಚುನಾವಣೋತ್ತರ ಗಲಾಟೆಯಲ್ಲಿ‌ನಿನ್ನೆ ರಾತ್ರಿ ಇಬ್ಬರ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಕಾರೆಕಲ್ಲು ವೀರಾಪುರದಲ್ಲಿನ ಗ್ರಾಮ ಪಂಚಾಯ್ತಿಯ ಮಾಜಿ ಉಪಾಧ್ಯಕ್ಷೆ ಅವರು ಮತ್ತೊಮ್ಮೆ ಸ್ಪರ್ಧೆ ಮಾಡಿ ಸೋತಿದ್ದರು.
ಅವರನ್ನು ಸೋಲಿಸಿದ್ದ ಮುಖಂಡರು ಸೋತ ಅಭ್ಯರ್ಥಿ ಅವರ ಪತಿ ರವಿ ಅವರು ಆಕ್ರೋಶಗೊಳ್ಳುವಂತೆ ಮಾತನಾಡಿದ್ದರಂತೆ. ಅದಕ್ಕೆ ರವಿ ಅವರು ಅವರ ವಿರುದ್ದ ನಮಗೂ ಸಮಯ ಬರುತ್ತೆ ನೋಡಿಕೊಳ್ಳುತ್ತೇನೆ ಎಂದಿದ್ದರಂತೆ.
ರವಿ ಅವರ ತಾಯಿ ವೀರಾಪುರದಲ್ಲಿದ್ದು ಅವರ ಮಬೆಗೆ ತೆರಳಿದ ಕೆಲವರು‌ ಕಲ್ಲೆಸೆದು ಗಲಾಟೆ ಮಾಡಿದ್ದಾರಂತೆ. ಆಗ ರವಿ‌ ಮತ್ತು ಅವರ ಸಹೋದರ ಚಿರಂಜೀವಿ ಕಾರನ್ನು ತೆಗೆದುಕೊಂಡು ತಮ್ಮ ಊರಿಗೆ ತೆರಳುವಾಗ ಇನ್ನೋವ ಕಾರಿನಲ್ಲಿ ಬಂದವರು ಹಗರಿ ಸೇತುವೆ ಬಳಿ ಅಡ್ಡಗಟ್ಟಿದಾಗ ಕಾರು ಅಪಘಾತಗೊಂಡಿದೆ. ನಂತರ ಅದರಲ್ಲಿ‌ ಬಂದವರು ರವಿ ಮತ್ತು ಆತನ ಸಹೋದರನ‌ಮೇಲೆ ಹಲ್ಲೆ ನಡರಸಿದ್ದಾರಂತೆ. ಈ ಬಗ್ಗೆ ಪಿ.ಡಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.