ಗ್ರಾಪಂ ಚುನಾವಣೆ: ಮುಗಿಲು ಮುಟ್ಟಿದ ಗೆದ್ದವರ ಸಂಭ್ರಮ,

ಕೊಟ್ಟೂರು ಡಿ 31: ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜಿನ ಮತ ಎಣೆಕೆ ಕೇಂದ್ರದಲ್ಲಿ ತಾಲೂಕಿನ 13 ಗ್ರಾಪಂ ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದು, ಗೆದ್ದವರು ಪಟಾಕಿ ಸಿಡಿಸಿ, ಸಿಹಿ ಹಂಚಿ ಭರ್ಜರಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ವಿಜೇತರನ್ನು ಹೇಗಲ ಮೇಲೆ ಹೊತ್ತು ಬೆಂಬಲಿಗರು ಖುಷಿಗೊಳ್ಳುತ್ತಿದ್ದಾರೆ
ಆದರೆ, ಸೋತವರಿಗೆ ಭಾರೀ ನಿರಾಸೆಯಾಗಿದೆ.ತಾಲೂಕಿನ 13 ಗ್ರಾಮಪಂಚಾಯಿತಿ ಗಳಲ್ಲಿ ಶೇ 70 ರ ಭಾಗ ಬಿಜೆಪಿ ತನ್ನದಾಗಿಸಿ ಕೊಂಡಿದ್ದು ಕಾಂಗ್ರಸ್ ಕಳಪೆ ಫಲಿತಾಂಶ ಪ್ರಕಟಗೊಂಡಿದ್ದು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಪಕ್ಷಕ್ಕೆ ಬಲಬಂದಿದೆ.
ಬೆಳಗಿನಿಂದಲೇ ಚುನಾವಣೆಯ ಮತಎಣೆಕೆ ಕೇಂದ್ರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಚನ್ನ ಬಸನವಗೌಡ, ಕಂದಗಲ್ಲ ನೀಲ ಕಂಠಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷ ಶಾನಬೋಗರ ಗುರುಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವೆಂಕಟೇಶನಾಯ್ಕ ಮತ್ತಿತರರು ಇದ್ದರೆ ಕಾಂಗ್ರಸ್ ಪಕ್ಷದಿಂದ ಯಾವೊಬ್ಬ ಮುಖಂಡರು ಇಕ್ಕಡೆ ಸುಳಿಯಲಿಲ್ಲ.