ಗ್ರಾಪಂ ಚುನಾವಣೆ ಮುಂಚೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಚಿಂಚೋಳಿ,ನ.21- ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಸ್.ಸಿ.ಪಿ ಮತ್ತು ಟಿಎಸ್‍ಪಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಅನೀಲ ಕುಮಾರ ರಾಠೋಡ ವಹಿಸಿದ್ದರು, ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಯ ಕಾಮಗಾರಿಗಳು ಪ್ರಗತಿಯಲಿದ್ದು, ಇದು ತಾಲೂಕಿನಲ್ಲಿ ಎರಡನೇ ಸಭೆ ಜರುಗುತ್ತಿದ್ದು, ತಾಲೂಕಿನ ಎಲ್ಲಾ ಅಧಿಕಾರಿಗಳು sಈ ಯೋಜನೆಯಲ್ಲಿ ಬರುವ ಕಾಮಗಾರಿಗಳನ್ನು ಗ್ರಾಮ ಪಂಚಾಯತ ಚುನಾವಣೆ ಮುಂಚಿತವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ. ಸಮಾಜ ಕಲ್ಯಾಣ ಅಧಿಕಾರಿಗಳಾದ ಪ್ರಭುಲಿಂಗ.ಲೋಕೋಪಯೋಗಿ ಇಲಾಖೆಯ ಅಕಾರಿಗಳಾದ ಗುರುರಾಜ ಜೋಶಿ. ಚಿಂಚೋಳಿಯ ಜಿಲ್ಲಾ ಪಂಚಾಯತ ಅಧಿಕಾರಿಗಳಾದ ಎಮ್. ಎ. ಹುಸೇನ. ಶಿಶು ಅಭಿವೃದ್ಧಿ ಅಧಿಕಾರಿಗಳಾದ ಗುರುಪ್ರಸಾದ. ಜೆಸ್ಕಾಂ ಅಧಿಕಾರಿಗಳಾದ ಉಮೇಶ್ ಗೋಳೆ. ಪಶುಸಂಗೋಪನಾ ಅಧಿಕಾರಿಗಳಾದ ಧನರಾಜ ಬೊಮ್ಮ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶಾಂತವೀರಯ್ಯ. ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳಾದ. ಪ್ರಕಾಶ ಕುಲಕರ್ಣಿ. ಮತ್ತು ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.