ಗ್ರಾಪಂ ಚುನಾವಣೆ ಮತ ಎಣಿಕೆ ಆರಂಭ

ಹಗರಿಬೊಮ್ಮನಹಳ್ಳಿ.ಡಿ.೩೦ ತಾಲೂಕಿನ 19 ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8:00 ಆರಂಭವಾಗಿದೆ. ಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬಿಗಿ ಬಂದೋಬಸ್ತ್ ನಡುವೆ ಎಣಿಕೆ ಪ್ರಾರಂಭ ವಾಯಿತು.
ಕಾಲೇಜಿನ 9 ಕೊಠಡಿಗಳಲ್ಲಿ 35 ಟೇಬಲ್ ಗಳನ್ನು ನಿರ್ಮಿಸಿ 117 ಮತಎಣಿಕೆ ಸಿಬ್ಬಂದಿ ಭಾಗವಹಿಸಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಾಶ್ ತಿಳಿಸಿದರು.
ಕಾಲೇಜಿನ ಹೊರಗಡೆ ಜನಜಾತ್ರೆ ನೆರೆದಿದ್ದು ಯಾವ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಕಾತುರದಿಂದ ಜಮಾಯಿಸಿದ್ದಾರೆ. ಸಿಪಿಐ ಮಲ್ಲಿಕಾರ್ಜುನ್ ಡಪ್ಪಿನ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.ತಂಬ್ರಹಳ್ಳಿ ಪೂರ್ಣಿಮಾ, ಅಂಕ ಸಮುದ್ರದ ಲಲಿತಮ್ಮ ಅಭ್ಯರ್ಥಿಗಳು ಗೆಲವು ಸಾದಿಸಿದ್ದಾರೆ .