ಗ್ರಾಪಂ ಚುನಾವಣೆ: ಎರಡನೇ ಹಂತದ ಚುನಾವಣೆಯ ಅಂತಿಮ ಹಂತದ ರ್ಯಾಂಡಮಿಜೇಷನ್

ಬೀದರ ಡಿ. 26: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2020ರ ಎರಡನೇ ಹಂತದ ಮತದಾನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಡಿಸೆಂಬರ್ 25ರಂದು ಅಂತಿಮ ಹಂತದ ರ್ಯಾಂಡಾಮಿಜೇಷನ್ ನಡೆಯಿತು. ಈ ಮೂಲಕ ಮತಗಟ್ಟೆ ಅಧಿಕಾರಿಗಳ ನೇಮಕ ಮಾಡಲಾಯಿತು.
ಡಿಸೆಂಬರ್ 27ರಂದು ಎರಡನೇ ಹಂತದ ಮತದಾನವು ಬೀದರ, ಔರಾದ (ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್, ಗ್ರಾಮ ಪಂಚಾಯತ ಚುನಾವಣಾ ವೀಕ್ಷಕರು, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಮತ್ತು ಎನ್.ಐ.ಸಿ ಅಧಿಕಾರಿಗಳು ಇವರ ಸಮಕ್ಷಮದಲ್ಲಿ ಅಂತಿಮ ಹಂತದ ರ್ಯಾಂಡಾಮಿಜೇಶನ್ ನಡೆಯಿತು.
ಡಿ.26ಕ್ಕೆ ಮಸ್ಟರಿಂಗ್: ಡಿಸೆಂಬರ್ 26ರಂದು ಬೀದರನ ಬಿ.ವ್ಹಿ.ಬಿ ಕಾಲೇಜಿನಲ್ಲಿ ಬೀದರ ತಾಲೂಕಿನ, ಔರಾದ(ಬಿ)ನ ಅಮರೇಶ್ವರ ಪಿ.ಯು.ಕಾಲೇಜಿನಲ್ಲಿ ಔರಾದ್ (ಬಿ) ಮತ್ತು ಕಮಲನಗರ ತಾಲ್ಲೂಕುಗಳ ಮಸ್ಟರಿಂಗ್ ನಡೆಯಲಿದೆ. ಡಿಸೆಂಬರ್ 27ರಂದು ಮತದಾನ ಮುಗಿದ ನಂತರ ಡಿ-ಮಸ್ಟರಿಂಗ್ ಕಾರ್ಯ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳು ಸದರಿ ದಿನಾಂಕಗಳಂದು ಸರಿಯಾದ ಸಮಯಕ್ಕೆ ನಿಗದಿತ ಸ್ಥಳಗಳಲ್ಲಿ ಹಾಜರಾಗಿದ್ದು ತಮಗೆ ವಹಿಸಿದ ಕರ್ತವ್ಯವನ್ನು ನಿರ್ವಹಿಸಲು ಸೂಚಿಸಲಾಗಿದೆ.
2248 ಮತಗಟ್ಟೆ ಅಧಿಕಾರಿ ಸಿಬ್ಬಂದಿ ನೇಮಕ: ಡಿಸೆಂಬರ್ 27ರಂದು ಜರುಗುವ ಎರಡನೇ ಹಂತದ ಮತದಾನದ ದಿನದಂದು ಕಾರ್ಯ ನಿರ್ವಹಿಸಲು ಒಟ್ಟು 2248 ಮತಗಟ್ಟೆ ಅಧಿಕಾರಿ ಸಿಬ್ಬಂದಿ ನೇಮಕ ಮಾಡಲಾಗಿದೆ. 800 ಪೊಲೀಸ್ ಅಧಿಕಾರಿ ಸಿಬ್ಬಂದಿ ಮತ್ತು 36 ಪೊಲೀಸ್ ಸೆಕ್ಟರ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿರುತ್ತದೆ.
ಬಿಯು-561. ಸಿ.ಯು-561 ಬಳಕೆ: ಬೀದರ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಚುನಾವಣೆಯು ಇ.ವ್ಹಿ.ಎಮ್. ಮತಯಂತ್ರಗಳ ಮೂಲಕ ಮತದಾನ ನಡೆಯಲಿದ್ದು, ಸದರಿ ಕಾರ್ಯದಲ್ಲಿ ಒಟ್ಟು ಬಿ.ಯು-561 ಮತ್ತು ಸಿ.ಯು-561 ಮತಯಂತ್ರಗಳನ್ನು ಉಪಯೋಗಿಸಲಾಗುವುದು.
ಅಧಿಕಾರಿಗಳಿಗೆ ಸೂಚನೆ: ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆಯು ಮುಕ್ತ, ಶಾಂತಿಯುತ ಹಾಗೂ ನ್ಯಾಯ ಸಮ್ಮತವಾಗಿ ಜರುಗಲು ಮುಂಜಾಗ್ರತವಾಗಿ 48 ಗಂಟೆಗಳ ಮುಂಚಿತವಾಗಿ ಚುನಾವಣೆ ಪ್ರಚಾರ ಪ್ರಕ್ರಿಯ ಮುಕ್ತಾಯಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.